janadhvani

Kannada Online News Paper

ಹೋಂ ಕ್ವಾರಂಟೈನ್ ನಲ್ಲಿರುವ ಕುಟುಂಬಕ್ಕೆ ‘ಸಹಾಯ್’ ವಿಟ್ಲ ಸರ್ಕಲ್ ನಿಂದ ಸಾಂತ್ವನದ ಬೆಳಕು

ವಿಟ್ಲ: ಇಲ್ಲಿನ ಕಡಂಬುವಿನಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವ ಕುಟುಂಬಕ್ಕೆ ‘ಸಹಾಯ್’ ವಿಟ್ಲ ಸರ್ಕಲ್ ತುರ್ತು ಸೇವಾ ತಂಡವು ಸಾಂತ್ವನದ ಸಹಾಯ ಹಸ್ತವನ್ನು ಚಾಚಿದೆ.

ಪ್ರವಾಹೋಪಾದಿಯಲ್ಲಿ ಹಬ್ಬುತ್ತಿರುವ ಕೋರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು, ಯಾವುದೇ ಜಾತಿ ಮತ ವರ್ಣ ಬೇಧವಿಲ್ಲದೆ. ವಿಟ್ಲ ಪಟ್ಟಣ ಹಾಗೂ ಆಸುಪಾಸಿನಲ್ಲಿರುವ ಹತ್ತಕ್ಕಿಂತಲೂ ಮಿಕ್ಕ ಗ್ರಾಮಗಳಿಗೆ ವಾಹನಗಳಲ್ಲಿ ತೆರಳಿ. ಪಂಚಾಯತ್ ಕಚೇರಿ, ರೇಷನ್ ಅಂಗಡಿ ಹಾಲು ಉತ್ಪಾದಕರ ಸಂಘ ಹೋಟೆಲು. ಬ್ಯಾಂಕ್. ಮುಂತಾದ ಜನಸೇವಾ ಕೇಂದ್ರ ಅಕ್ಕಪಕ್ಕಗಳಲ್ಲಿರುವ ಅಂಗಡಿಗಳು. ಹಾಗೂ ಕೋರೋಣ ಸೋಂಕಿತರ ಮನೆ ಸಹಿತ ಎಲ್ಲಾ ಕಡೆಗಳಲ್ಲಿಯೂ ಸ್ಯಾನಿಟೈಝರ್ ಸಿಂಪಡಿಸುವ ಕಾರ್ಯವನ್ನು ‘ಸಹಾಯ್’ ತಂಡ ಮಾಡಿದೆ.

ಧ್ವನಿವರ್ಧಕ ಮೂಲಕ ಕೋವಿಡ್ ಬಗ್ಗೆ ಜನ ಜಾಗೃತಿ ಅಭಿಯಾನ ನಡೆಸುತ್ತಾ, ಕರಪತ್ರ ವಿತರಿಸಿ, ಹೋಂ ಕ್ವಾರಂಟೈನ್ ನಲ್ಲಿರುವ ಕೊರೋನಾ ಪಾಸಿಟಿವ್ ಸೊಂಕಿತಗೊಂಡು ಆತಂಕಕ್ಕೆ ಒಳಗಾಗಿರುವವರಿಗೆ ಸಾಂತ್ವಾನ ಹೇಳುತ್ತಾ, ಕೊರೋನಾ ಪಾಸಿಟಿವ್ ಕುಟುಂಬಕ್ಕೆ ಹಾಗೂ ಕಡು ಬಡತನದಲ್ಲಿರುವ ಅನೇಕರಿಗೆ ಅತ್ಯಗತ್ಯ ದಿನಸಿ ಸಾಮಗ್ರಿಗಳ ಕಿಟ್ಟನ್ನು ನೀಡಿ ನೋವಿಗೆ ಸ್ಪಂದಿಸಿದೆ.

ಪಿಪಿಇ ಕಿಟ್ಟು. ಹಾಗೂ ಆಕ್ಸಿಜನ್ ಸಿಲಿಂಡರ್ ಕಿಟ್. ರಕ್ತದಾನ ಹಾಗೂ ಕೋವಿಡ್ ಮರಣದ ಅಂತ್ಯಕ್ರಿಯೆ ಮುಂತಾದ ತುರ್ತ ಸೇವಾ ಚಟುವಟಿಕೆಯಲ್ಲಿ ಸಕ್ರಿಯರಾಗುವ ಮೂಲಕ ಕೊರೋನಾ ನಿಯಂತ್ರಣ ಕಾರ್ಯದಲ್ಲಿ ವೈದ್ಯರು, ಶುಶ್ರೂಷಕರು ಪೊಲೀಸ್ ಇಲಾಖೆ ಮತ್ತಿತರ ಸಿಬ್ಬಂದಿಗಳ ಮನೋಭಲ ಹೆಚ್ಚಿಸುವುದಕ್ಕಾಗಿ ನಿರಂತರವಾಗಿ ಹಗಲಿರುಳು ಶ್ರಮಿಸುತ್ತಿದೆ.

ಇದೀಗ ಕರ್ನಾಟಕ ಮುಸ್ಲಿಂ ಜಮಾಅತ್ ವಿಟ್ಲ ಸರ್ಕಲ್ ವತಿಯಿಂದ ಸಹಾಯ್ ವಿಟ್ಲ ಸರ್ಕಲ್ ವ್ಯಾಪ್ತಿಯ ಕಡಂಬು ಬೆದ್ರಕಾಡು ಪರಿಸರದಲ್ಲಿ ಕೋವಿಡ್ ಪಾಸಿಟೀವ್ ಕಾರಣದಿಂದ ಹೋಂ ಕ್ವಾರಂಟೈನ್ ನಲ್ಲಿರುವ ಕಡಂಬು ಬೆದ್ರಕಾಡು ಪರಿಸರದ ಎರಡು ಕುಟುಂಬಕ್ಕೆ ಆಹಾರ ಸಾಮಗ್ರಿಗಳನ್ನು ಒದಗಿಸಿ ಅವರನ್ನು ದೂರವಾಣಿ ಮೂಲಕ ನಿರಂತರವಾಗಿ ಸಂಪರ್ಕಿಸಿ ಯಾವುದೇ ಆತಂಕಕ್ಕೊಳಗಾಗಿ ಮಾನಸಿಕ ನೆಮ್ಮದಿ ಕಳೆದುಕೊಳ್ಳದಂತೆ ಸಾಂತ್ವನ ಪಡಿಸಿ, ಧೈರ್ಯ ತುಂಬುತ್ತಿರುವ ಸಹಾಯ್ ವಿಟ್ಲ ಸರ್ಕಲ್ ತುರ್ತು ಸೇವಾ ತಂಡವು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

ನೀವು ನಡೆಸುತ್ತಿರುವಂತಹ ಕಾರುಣ್ಯ ಚಟುವಟಿಕೆಗಳು ಶ್ಲಾಘನೀಯವಾಗಿದೆ ಹಾಗೂ ಅಭಿನಂದನಾರ್ಹವಾಗಿದೆ.
ಅಲ್ಲಾಹು ಎಲ್ಲರ ಬದುಕಿನಲ್ಲಿ ಹೊಸ ಆಶಾಕಿರಣವನ್ನು ಮೂಡಿಸಲಿ. ಉತ್ತಮ ಆರೋಗ್ಯ, ಶಾಂತಿ ಮತ್ತು ನೆಮ್ಮದಿ ಎಲ್ಲರದಾಗಲಿ ಎಂದು D.A ಮುಹಮ್ಮದ್ ಅಶ್ರಫ್ ಕೊಡಂಗಾಯಿ ಶುಭ ಹಾರೈಸಿದ್ದಾರೆ.

error: Content is protected !! Not allowed copy content from janadhvani.com