janadhvani

Kannada Online News Paper

ರಿಯಾದ್: ಸಂಕಷ್ಟದಲ್ಲಿದ್ದ ಅಡ್ಯಾರ್ ಪದವಿನ ವ್ಯಕ್ತಿಗೆ ಕೆಸಿಎಫ್ ಸಹಾಯ ಹಸ್ತ

ರಿಯಾದ್: ಕೆಸಿಎಫ್ ರಿಯಾದ್ ಝೋನ್ ಅಧೀನದಲ್ಲಿರುವ ಬದಿಯ ಸೆಕ್ಟರ್ ವ್ಯಾಪ್ತಿಯಲ್ಲಿದ್ದ ಅಡ್ಯಾರ್ ಪದವಿನ ಕ್ರಿಶ್ಚಿಯನ್ ಧರ್ಮದ ಸಹೋದರ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ ತಾಯ್ನಾಡಿಗೆ ಮರಳಲು ಸಾದ್ಯವಾಗದೆ ಅಸಹಾಯಕರಾಗಿದ್ದನ್ನು ಮನಗಂಡು ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಬದಿಯ ಸೆಕ್ಟರ್ ವತಿಯಿಂದ ಹಣ ಸಂಗ್ರಹಿಸಿ ಟಿಕೆಟ್ ನೀಡಿ ತಾಯ್ನಾಡಿಗೆ ಕಳುಹಿಸುವ ಮೂಲಕ ಮಾನವಿಯತೆ ಮರೆದಿದ್ದಾರೆ,

ಈ ಮಹತ್ವದ ಕಾರ್ಯಾಚರಣೆಗೆ KCF ರಿಯಾದ್ ಝೋನ್ ಸಾಂತ್ವನ ವಿಭಾಗದ ಅದ್ಯಕ್ಷರಾದ ಅಬ್ದುಲ್ ಮಜೀದ್ ಸೇರಾಜೆ ವಿಟ್ಲ, ಬದಿಯಃ ಸೆಕ್ಟರ್ ಅದ್ಯಕ್ಷರಾದ ಅಬ್ದುಲ್ ಹಮೀದ್ ಮುಲ್ಕಿ, ಪ್ರಧಾನ ಕಾರ್ಯದರ್ಶಿ ಹಮೀದ್ ಮಠ (ಭಾರತ್) ಬದಿಯ ಸೆಕ್ಟರ್ ಸಾಂತ್ವನ ವಿಭಾಗದ ಚೆಯರ್ಮೆನ್ ಸತ್ತಾರ್ ಮಿತ್ತೂರು ,ನಾಯಕರಾದ ಶಾಕಿರ್ ಕಬಕ, ಮುಸ್ತಫಾ ಮಠ,ಮುಂತಾದ ನಾಯಕರು ನಾಯಕತ್ವ ವಹಿಸಿದ್ದರು ಇದಕ್ಕೆ ಬೇಕಾದ ಎಂಬೆಸ್ಸಿಯ ದಾಖಲೆಗಳನ್ನು ಅವರ ಗೆಳೆಯರಾದ ನೆಲ್ಸನ್ ಡಿಸೋಝ ಮತ್ತು ಫ್ರಾನ್ಸಿಸ್ ಡಿಸೋಝ ಎಂಬಸ್ಸಿಯ ದಾಖಲೆ ಸಿದ್ದಪಡಿಸಿ ನಮ್ಮೊಂದಿಗೆ ಕೈ ಜೋಡಿಸಿದರು.

error: Content is protected !! Not allowed copy content from janadhvani.com