ಕೋವಿಡ್ ಎರಡನೆಯ ಅಲೆಯ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಸರಕಾರ ವಿಧಿಸುವ ಲಾಕ್ ಡೌನ್ ಜನ ಜೀವನದ ಮೇಲೆ ಸಂಕಷ್ಟದ ಪರಿಣಾಮ ಬೀರಲಿದ್ದು ಇದನ್ನು ಸರಕಾರ ಮನಗಂಡು ಜನರ ಸಂಕಷ್ಟ ನಿವಾರಣೆಯ ಮಾರ್ಗೋಪಾಯವನ್ನು ಮಾಡ ಬೇಕಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಸರಕಾರವನ್ನು ಆಗ್ರಹಿಸಿದೆ.
ಕಳೆದ ಬಾರಿಯ ಲಾಕ್ ಡೌನ್
ನಿಂದಾಗಿ ಸಮಾಜದ ಬಹುತೇಕ ಜನರ ಜೀವನದ ಮೇಲೆ ಪರಿಣಾಮ ಬೀರಿ ಸಂಕಷ್ಟವನ್ನು ಅನುಭವಿಸಿದ್ದರು. ಆ ಆಘಾತದ ಚೇತರಿಕೆಯ ಹಂತದಲ್ಲಿರುವಾಗಲೇ ಕೋವಿಡ್ ಎರಡನೆಯ ಅಲೆಯು ವ್ಯಾಪಕವಾಗುತ್ತಿದ್ದು ಇದರ ನಿಯಂತ್ರಣಕ್ಕಾಗಿ ಸರಕಾರ ಹೇರುವ ಲಾಕ್ ಡೌನ್ ನಿಂದ ಜನರು ಇನ್ನೊಂದು ಭಯಾನಕವಾದ, ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುವ ಪರಿಸ್ಥಿತಿ ಉಂಟಾಗ ಬಾರದು.
ಜನರಿಗೆ ಅನುಕೂಲವಾಗುವಂತೆ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು.ದಿನ ಬಳಕೆಯ ವಸ್ತುಗಳನ್ನು ಒದಗಿಸುವುದು,ಮನೆ,ಅಂಗಡಿ ಮುಗ್ಗಟ್ಟುಗಳ ಮಾಸಿಕ ಬಾಡಿಗೆಗಳನ್ನು ರದ್ದು ಪಡಿಸುವುದು,ವಿದ್ಯುತ್, ನೀರು ಮೊದಲಾದವುಗಳ ಬಿಲ್ ವಸೂಲಿ ಮಾಡದೆ ಉಚಿತವಾಗಿ ನೀಡುವುದು.ಹಣಕಾಸಿನ ಮಾಸಿಕ ಪಾವತಿಯ ಕಂತುಗಳನ್ನು ಪಡೆಯದಿರುವುದು. ಈ ಮೊದಲಾದ ಪರಿಹಾರ ಕ್ರಮಗಳ ಮೂಲಕ ಜನರ ಜೀವನಕ್ಕೆ ಆಸರೆಯಾಗುವಂತೆ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯು ಸರಕಾರವನ್ನುಆಗ್ರಹಿಸಿದೆ.
ವಿಶೇಷ ಪ್ಯಾಕೇಜ್ ಗಾಗಿ ಈಗಾಗಲೇ ಮುಖ್ಯಮಂತ್ರಿ,ಆಹಾರ ಮತ್ತು ಸರಬರಾಜು ಸಚಿವರು ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ