janadhvani

Kannada Online News Paper

ಕ್ರಷ್ಣಾಪುರ ನಿವಾಸಿ ಅಲ್ ಕೋಬರ್ ನಲ್ಲಿ ನಿಧನ, ಅಂತ್ಯಕ್ರೀಯೆಗೆ ಸಹಕರಿಸಿದ ಕೆ.ಸಿ.ಎಫ್ ಸೌದಿ ಅರೇಬಿಯಾ

ಸೌದಿ ಅರೇಬಿಯಾ: ಅಲ್ ಕೋಬರ್ ನಲ್ಲಿ ಡೆಲ್ಮೊನ್ ಎಂಬ ಕಂಪನಿಯೊಂದರಲ್ಲಿ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಕ್ರಷ್ಣಾಪುರ 7ನೇ ವಿಭಾಗದ ನಿವಾಸಿ ಅಬ್ದುಲ್ ರಹ್ಮಾನ್ ಮಾಮು ಎಂಬುವವರು ಹಲವು ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು ಇವರು ತಾ: 29 ಎಪ್ರಿಲ್ ನಲ್ಲಿ ಅನಾರೋಗ್ಯದಿಂದ ಮರಣಹೊಂದಿರುತ್ತಾರೆ.


ಅನಾರೊಗ್ಯದಲ್ಲಿದ್ದ ಸಂದರ್ಭದಲ್ಲಿ ಹೆಚ್ಚಿನ ಚಿಕೆತ್ಸೆಗೆ ಊರಿಗೆ ತೆರಬೇಕಾಗಿತ್ತು ಆದರೆ ವಿಮಾನ ಸಂಪರ್ಕ ಸ್ಥಗಿತಗೊಂಡಿರುವ ಕಾರಣ ವಿದೇಶದಲ್ಲೆ ಹೆಚ್ಚಿನ ಚಿಕಿತ್ಸೆ ಮುಂದುವರಿಸಿದ್ದರು. ಪ್ರತ್ಯೇಕವಾಗಿ ಚಿಕಿತ್ಸೆಯ ಎಲ್ಲಾ ಖರ್ಚು ವೆಚ್ಚ ಕಂಪನಿಯ ವತಿಯಿಂದ ನೀಡಲಾಯಿತು. ಮ್ರತರು ಹೆಂಡತಿ ಹಾಗು ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ.

ಮರಣೋತ್ತರ ಕ್ರೀಯೆಗೆ ಬೇಕಾದ ವ್ಯವಸ್ಥೆ ಕಲ್ಪಿಸಲು ಕೂಡಲೆ ಸ್ಪಂದಿಸಿ ಕಾರ್ಯ ಪ್ರವರ್ತರಾದ ಕರ್ನಾಟಕ ಕಲ್ಚರಲ್ ಫೌಂಡೇಷನ್ ದಮ್ಮಾಮ್ ಝೋನ್ ಸಾಂತ್ವನ ತಂಡವು ಭಾರತೀಯ ರಾಯಬಾರಿ ಕಛೇರಿ ಹಾಗು ಊರಿನಿಂದ ಬೇಕಾದ ದಾಖಲೆ ಪತ್ರವನ್ನು ತ್ವರಿತ ವೇಗದಲ್ಲಿ ಸರಿಪಡಿಸಿ ಅಂದರೆ ತಾ: ಮೇ 3ರಂದು ಅಸರ್ ನಮಾಜಿನ ಬಳಿಕ ಅಲ್ ಕೋಬರ್ ನಲ್ಲಿ ದಫನ ಕಾರ್ಯ ನಿರ್ವಹಿಸಲಾಯಿತು.

ಈ ಒಂದು ಉತ್ತಮ ಕಾರ್ಯದಲ್ಲಿ ಕೆ.ಸಿ.ಎಫ್ ನೊಂದಿಗೆ ಸಹಕರಿಸಿದ ಮ್ರತರ ಕಂಪನಿಯವರಾದ ಉಸ್ಮಾನ್ ಮಂಗಳೂರು ಹಾಗು ಝೋನ್ ಸಾಂತ್ವನ ಕನ್ವೀನರ್ ಬಾಷಾ ಗಂಗಾವಲಿ, ತಮೀಮ್ ಕೂಳೂರು ಇವರುಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಮ್ರತರ ಕುಟುಂಬದವರು, ಗೆಳೆಯರು ಹಾಗು ಕೆ.ಸಿ.ಎಫ್ ನಾಯಕರು ಅಂತ್ಯಕ್ರೀಯೆಯಲ್ಲಿ ಭಾಗಯಾಗಿ ಮ್ರತರಿಗಾಗಿ ದುಆ ನೆರೆವೇರಿಸಲಾಯಿತು.

ಬಾಂಗ್ಲದೇಶದ ವ್ಯಕ್ತಿಯ ದಫನ ಕಾರ್ಯದಲ್ಲೂ ಸಹಕಾರ

ಇದೇ ಸಂಧರ್ಭದಲ್ಲಿ ಮತ್ತೊಂದು ಕಡೆಯಿಂದ ಬೇರೊಂದು ರಾಷ್ಟ್ರದ ಅಂದರೆ ಬಾಂಗ್ಲದೇಶದ ವ್ಯಕ್ತಿಯ ದಫನ ಕಾರ್ಯಕ್ಕೆ ಸಹಕಾರ ಕೋರಿ ಬಂದಾಗ ಅದನ್ನೂ ಸಹ ಕೈಗೆತ್ತಿಕೊಂಡ ಕೆ.ಸಿ.ಎಫ್ ಸಾಂತ್ವನ ತಂಡವು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಿ ಲುಹರ್ ನಮಾಜಿನ ಬಳಿಕ ದಮ್ಮಾಮ್ 91 ರಲ್ಲಿ ದಫನ ಕಾರ್ಯ ನೆರೆವೇರಿಸಲಾಯಿತು.

error: Content is protected !! Not allowed copy content from janadhvani.com