janadhvani

Kannada Online News Paper

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಹಾಗೂ ಬದ್ರ್ ಅಲ್ ಸಮಾ ಆಸ್ಪತ್ರೆ ಬರ್ಕ ಇದರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಮಾಹಿತಿ ಶಿಬಿರ ವು ಕೆಸಿಎಫ್ ಒಮಾನ್ ರಾಷ್ಟ್ರೀಯ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿ ಇವರ ಅಧ್ಯಕ್ಷತೆಯಲ್ಲಿ Zoom Online ಮುಖಾಂತರ ಜರುಗಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ ಇವರು ನೆರವೇರಿಸಿದರು.

ಆರೋಗ್ಯ ಮಾಹಿತಿ ಶಿಬಿರವನ್ನು ಬದ್ರ್ ಅಲ್ ಸಮಾ ಆಸ್ಪತ್ರೆಯ ಮುಖ್ಯ ಆರೋಗ್ಯ ತಜ್ಞರು ಡಾ. ಎ .ವಿ.ರವೀಂದ್ರನ್ ಇವರು ನಿತ್ಯ ಜೀವನ ಶೈಲಿಯಲ್ಲಿ ಪಾಲಿಸಬೇಕಾದ ಅತ್ಯಮೂಲ್ಯ ವಾದ ಮಾಹಿತಿ ಹಾಗೂ ತನ್ನ ಆರೋಗ್ಯ ಕಾಪಾಡಲು ಸಾಧ್ಯವಾಗುವ ಉಪಯುಕ್ತವಾದ ಸಲಹೆಗಳನ್ನು ಹಂಚಿದರು.

ಕಾರ್ಯಕ್ರಮದಲ್ಲಿ ಕೆಸಿಎಫ್ ಐನ್ಸಿ ಆಡಳಿತ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬೊಲ್ಮಾರ್ ಬರ್ಕ ,ಕೆಸಿಎಫ್ ಒಮಾನ್ ಕೋಶಾಧಿಕಾರಿ ಜನಾಬ್ ಆರಿಫ್ ಕೋಡಿ, ರಾಷ್ಟ್ರೀಯ ನಾಯಕರು ಹಾಗೂ ಝೋನ್ ನಾಯಕರು ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ ಸ್ವಾಗತಿಸಿ , ಸಂಘಟನಾಧ್ಯಕ್ಷ ಸಯ್ಯದ್ ಆಬಿದ್ ಅಲ್ ಹೈದ್ರೋಸಿ ಕೊಡಗು ವಂದಿಸಿ ಕಲಂದರ್ ಬಾವ ಪರಪ್ಪು ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com