janadhvani

Kannada Online News Paper

ಇಹ್ಸಾನ್ ಕರ್ನಾಟಕ ದಶಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ಖಾಝಿ ಕೂರತ್ ತಂಙಳ್

ಸುನ್ನಿ ಸಂಘ ಕುಟುಂಬದ ಸಹಕಾರದೊಂದಿಗೆ ಕಳೆದ ಹತ್ತು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಇಹ್ಸಾನ್ ಕರ್ನಾಟಕ ಇದರ ದಶಮಾನೋತ್ಸವ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಖುರ್ರತುಸಾದಾತ್ ಖಾಝಿ ಸೆಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಜನರಲ್ ಕನ್ವೀನರಾಗಿ ಡಾ:ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ,ಕೋಶಾಧಿಕಾರಿಯಾಗಿ ಉದ್ಯಮಿ ಇಕ್ಬಾಲ್ ಸೇಟ್ ಶಿವಮೊಗ್ಗ ಇವರನ್ನು ಆಯ್ಕೆ ಮಾಡಲಾಯಿತು.

ಸ್ವಾಗತ ಸಮಿತಿ ರಚನಾ ಕಾರ್ಯಕ್ರಮವು ಮಂಗಳೂರಿನ ಬಲ್ಮಠ ಸಹೋದಯ ಹಾಲ್ ನಲ್ಲಿ ಶೈಖುನಾ ಸುಲ್ತಾನುಲ್ ಉಲಮಾ AP ಉಸ್ತಾದರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದರು ಪ್ರಾರ್ಥನೆ ನಡೆಸಿದರು. ಸುಲ್ತಾನುಲ್ ಉಲಮಾ ಸಭೆಯನ್ನು ಉದ್ಘಾಟಿಸಿದರು.ಇಹ್ಸಾನ್ ಕರ್ನಾಟಕ ಇದರ ಅಧ್ಯಕ್ಷ Nkm ಶಾಫಿ ಸಆದಿ ಬೆಂಗಳೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ:MSM ಅಬ್ದುರ್ರಶೀದ್ ಝೈನಿ ದಶವಾರ್ಷಿಕದ 10 ತಿಂಗಳ ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು.ಸಭೆಯಲ್ಲಿ ಉತ್ತರ ಕರ್ನಾಟಕದ ಕಳೆದ 10ವರ್ಷಗಳ ಇಹ್ಸಾನ್ ಕಾರ್ಯವೈಖರಿಯ ವಿವರಣೆ ನೀಡಲಾಯಿತು.

ಖಾಝಿ ಮಾಣಿಉಸ್ತಾದ್, ಕೊಡಗು ಜಿಲ್ಲಾ ಸಹಾಯಕ ಖಾಝಿ ಮಹಮೂದ್ ಮುಸ್ಲಿಯಾರ್ ಎಡಪ್ಪಾಲಂ, ನಿವೃತ್ತ ಪೊಲೀಸ್ ಅಧಿಕಾರಿ G.A. ಬಾವ ಮಾತನಾಡಿ ಶುಭ ಹಾರೈಸಿದರು. ಸುಲ್ತಾನುಲ್ ಉಲಮಾ ದಶವಾರ್ಷಿಕ ಸ್ವಾಗತ ಸಮಿತಿಯನ್ನು ಘೋಷಣೆ ಮಾಡಿದರು. ದಶಮಾನೋತ್ಸವ ದ ವಿವಿಧ ಉಪ ಸಮಿತಿಗಳಿಗೆ ಆಯ್ಕೆಮಾಡಲಾಯಿತು.ಕಾರ್ಯ ಕ್ರಮದಲ್ಲಿ ಬಿ. ಎಂ. ಮುಮ್ತಾಜ್ ಅಲಿ, ಯಾಕುಬ್ ಹೊಸನಗರ, ಮುನೀರ್ ಮಂಗಳೂರು, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ, ಮಜೀದ್ ಹಾಜಿ, ಸಮದ್ ಹಾಜಿ ಶಾರ್ಜ, ಇಸ್ಮಾಯಿಲ್ ಸಖಾಫಿ ಕೊಂಡಗೇರಿ, ಕೆಸಿಎಫ್ ನಾಯಕರಾದ ಡಿ ಪಿ ಯೂಸೂಫ್ ಸಖಾಫಿ ರಿಯಾದ್, ಅಲಿ ಮುಸ್ಲಿಯಾರ್ ಬಹರೈನ್, ನಝೀರ್ ಕಾಶಿಪಟ್ನ, ಪಾರೂಕ್ ಕಾಟಿಪಳ್ಳ, ಮುಂತಾದವರು ಭಾಗವಹಿದ್ದರು ಪ್ರಧಾನ ಕಾರ್ಯದರ್ಶಿ ಹಫೀಳ್ ಸಆದಿ ಸ್ವಾಗತಿಸಿ, ಕಾರ್ಯದರ್ಶಿ ಹಮೀದ್ ಮುಸ್ಲಿಯಾರ್ ವಂದಿಸಿದರು.

error: Content is protected !! Not allowed copy content from janadhvani.com