ಉಪ್ಪಿನಂಗಡಿಯ 6ನೇ ವಾರ್ಡ್ ಮಠದ ಹಿರ್ತಡ್ಕ ಎಂಬಲ್ಲಿ ಕುಡಿಯುವ ನೀರಿನ ಟ್ಯಾಂಕಿಯಲ್ಲಿ ನೀರು ಕಲುಷಿತವಾಗಿದೆ ಎಂಬ ದೂರು ಕೇಳಿ ಬಂದಾಗ ನೂತನ ಪಂಚಾಯತ್ ಸದಸ್ಯ ರಶೀದ್ ಮಠ ರವರ ನೇತ್ರತ್ವದಲ್ಲಿ ಮೂರು ದಿನಗಳ ಹಿಂದೆ ಪರಿಶೀಲನೆ ನಡೆಸಿ ಸ್ವಚ್ಛಗೊಳಿಸುವುದಾಗಿ ಊರವರಿಗೆ ಭರವಸೆ ಕೂಟ್ಟಿದ್ದು, ವಾರದೊಳಗೆ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ನೀರಿನ ಟ್ಯಾಂಕನ್ನು ತೊಳೆದು ಸ್ವಚ್ಛಗೊಳಿಸಿ ನೀಡಿದ ಭರವಸೆಯನ್ನು ಪೂರೈಸಿದ್ದಾರೆ.
ಸ್ವಚ್ಛಗೊಳಿಸುವ ಸಂಧರ್ಭದಲ್ಲಿ ಟ್ಯಾಂಕಿಯಲ್ಲಿರುವ ಕೆಸರು, ಕಸ ಕಡ್ಡಿಗಳು ಮತ್ತು ಹಲ್ಲಿಗಳನ್ನು ಕಂಡು ದಂಗಾದರು. ಈ ನೀರನ್ನೇ ಕುಡಿಯಲು ಬಳಸುತ್ತಿದ್ದ ಊರವರ ಆರೋಗ್ಯದ ಬಗ್ಗೆ ಮತ್ತು ವರ್ಷಗಳ ಕಾಲ ಆಡಳಿತ ನಡೆಸಿ ಇಂತಹ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಪರಿಹರಿಸದ ಆಡಳಿತ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಧರ್ಭ ಎಸ್ಡಿಪಿಐ ಬೆಂಬಲಿತ ನೂತನ ಪಂಚಾಯತ್ ಸದಸ್ಯರಾದ ನೆಬಿಸ ಇಲ್ಯಾಸ್ ಮತ್ತು ಸೌಧ ಮುಸ್ತಫಾರವರು ಕೂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಎಸ್ಡಿಪಿಐ ಪಕ್ಷದ ಮತ್ತು ನೂತನ ಪಂಚಾಯತ್ ಸದಸ್ಯರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್