janadhvani

Kannada Online News Paper

ಕುಪ್ಪೆಪದವು: ಸ್ವಲಾತ್ ಸಮಿತಿ ಅಸ್ತಿತ್ವಕ್ಕೆ- ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಪದವಿನಂಗಡಿ ಆಯ್ಕೆ

ಕುಪ್ಪೆಪದವು : ವಾರಕ್ಕೊಮ್ಮೆ ನಡೆಸಿ ಕೊಂಡು ಬರುವ ಸ್ವಲಾತ್ ಮಜ್ಲಿಸಿನ ಯಶಸ್ವಿಗಾಗಿ ಹಾಗೂ ಪರಿಶುದ್ಧ ಅಸ್ಹಾಬುಲ್ ಬದ್ರ್ ನ ಸ್ಮರಣಾರ್ಥವಾಗಿ *ಮಾಸಿಕ ಮಜ್ಲಿಸ್ ಬದ್ರಿಯಾ* ನಡೆಸಲು
ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆಪದವು ಇದರ ಅಧೀನದಲ್ಲಿ ಸ್ವಲಾತ್ ಸಮಿತಿಯು BJM ಕುಪ್ಪೆಪದವು ಇದರ ಆಡಳಿತ ಸಮಿತಿ ಅಧ್ಯಕ್ಷರಾದ K. ಉಮರಬ್ಬರವರ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು.

ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಸ್ಥಳೀಯ ಖತೀಬರಾದ ಅಬೂ ಝೈದ್ ಶಾಫಿ ಮದನಿ ಅಲ್ ಅಝ್ಹರಿ ಕರಾಯ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಪದವಿನಂಗಡಿ ಉಪಾಧ್ಯಕ್ಷರಾಗಿ ಶಬೀರ್ ಆಚಾರಿಜೋರ , ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶಾಫಿ , ಜೊತೆ ಕಾರ್ಯದರ್ಶಿಯಾಗಿ ಜೀಲಾನಿ ಹಳೆನೀರು, ಕೋಶಾಧಿಕಾರಿಯಾಗಿ ಅಬ್ದುರ್ರಹ್ಮಾನ್ ಹಾಜಿ ನಡುಪಳ್ಳ ಆಯ್ಕೆಯಾದರು.

ಪ್ರಸ್ತುತ ಸಮಿತಿಯ ಕಾರ್ಯ ಕಾರಿಣಿ ಸಮಿತಿ ಸದಸ್ಯರಾಗಿ DP. ಹಮ್ಮಬ್ಬ, ಅಬ್ದುರ್ರಝಾಕ್ ಬೋಳಿಯ, ಆದಂ ಫಿಶ್ ಮರ್ಚಂಟ್ , NA ಜಬ್ಬಾರ್ , ಇಬ್ರಾಹಿಂ ನಡುಪಲ್ಲ ,L.ಇಕ್ಬಾಲ್ ನಡುಪಲ್ಲ ಶಾನಿಬ್ ಪದವಿನಂಗಡಿ ನೇಮಕಗೊಂಡರು.

ಸದ್ರಿ ಸಭೆಯಲ್ಲಿ ಆಡಳಿತ ಸಮಿತಿ ಉಪಾಧ್ಯಕ್ಷರಾದ ಅಬ್ದುರ್ರಝಾಕ್ ಹಾಜಿ ಬ್ಲೂ ಸ್ಟಾರ್ ,ಕೋಶಾಧಿಕಾರಿ ಉಸ್ಮಾನ್ ಮುರ, ಸದಸ್ಯರಾದ ಅಬ್ದುಲ್ ಲತೀಫ್ ಆಚಾರಿಜೋರ, ಅಬ್ದರ್ರಹ್ಮಾನ್ (ಮೋನು)ಉಪಸ್ಥಿತರಿದ್ದರು.

ಸಭೆಯ ಪ್ರಾರಂಭದಲ್ಲಿ BJM ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಫೀಖ್ ಆಚಾರಿಜೋರ ಸ್ವಾಗತಿಸಿ , ಜೊತೆ ಕಾರ್ಯದರ್ಶಿ ಇಸ್ಮಾಯಿಲ್ ಶರೀಫ್ ನಿರೂಪಣೆ ಮತ್ತು ಧನ್ಯವಾದಗೈದರು.

error: Content is protected !! Not allowed copy content from janadhvani.com