janadhvani

Kannada Online News Paper

ಅಲ್-ಮದೀನತುಲ್‌ ಮುನವ್ವರ ಮೂಡಡ್ಕ: ದಮ್ಮಾಮ್ ಮಹಾಸಭೆ

ಮೂಡಡ್ಕ ಅಲ್ ಮದೀನತುಲ್ ಮುನವ್ವರ ಎಜುಕೇಶನಲ್ ಸೆಂಟರ್ ದಮ್ಮಾಮ್ ಸಮಿತಿಯ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ನಮ್ಮನ್ನಗಲಿದ ಸ್ಥಾಪನೆ, ಸಂಘಟನೆಗಳ ಹಾಗೂ ಕುಟುಂಬದಿಂದ ಮರಣಹೊಂದಿದ ಸದಸ್ಯರ ಮೇಲೆ ತಹ್ಲೀಲ್ ಸಮರ್ಪಣೆ ಹಾಗೂ ದುಆ ಮಜ್ಲಿಸ್ ಕಾರ್ಯಕ್ರಮವು ಅಬ್ದುಲ್ ಅಝೀಝ್ ಮುಸ್ಲಿಯಾರ್ ಕುತ್ತಾರ್ ರವರ ನೆತೃತ್ವದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಮೂಡಡ್ಕ ಸೌದಿ ರಾಷ್ಟೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮರುಲ್ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ ಉಪಸ್ಥಿತರಿದ್ದರು ಮೊಹಿದ್ದೀನ್ ಝುಹ್ರಿ ಕನ್ನಂಗಾರ್ ಕಿರಾಅತ್ ಪಠಿಸಿದರು. ಮುಹಮ್ಮದ್ ಸಖಾಫಿ ತಲಕಿರವರು ಸಭೆಯನ್ನು ಉದ್ಘಾಟಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿಯವರು ಸಭೆಯಲ್ಲಿ ಮಂಡಿಸಿದ ಗತವರ್ಷದ ವರದಿ ಮತ್ತು ಲೆಕ್ಕಪತ್ರವನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿಲಾಯಿತು.

ಸೌದಿ ಓರ್ಗನೆಝರ್ ಅಬ್ದುಲ್ ಕರೀಂ ಲತ್ವೀಫಿ ಸೋಕಿಲ ಹಿತವಚನ ನೀಡಿದರು. ಸಭಾಧ್ಯಕ್ಷರು ತಮ್ಮ ಅದ್ಯಕ್ಷ ಭಾಷಣದಲ್ಲಿ ಸ್ಥಾಪನೆಯ ಬಗ್ಗೆ ಹಾಗೂ ಕಾರ್ಯಚರಣೆಯ ಬಗ್ಗೆ ವಿವರಿಸಿದರು. ಮೂಡಡ್ಕ ದಮ್ಮಾಮ್ ಸಮಿತಿ ಸದಸ್ಯರಾದ ಬಹು ಉಮರುಲ್ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ ಉಪ್ಪಿನಂಗಡಿ ನೂತನ ಕಾರ್ಯಕಾರಿ ಸಮಿತಿಗೆ ಪ್ಯಾನಲ್ ಮಂಡಿಸಿ ಅದಕ್ಕೆ ಕೆಲವೊಂದು ಸದಸ್ಯರನ್ನು ಸೇರಿಸಿ 2021-2022ರ ಸಾಲಿಗೆ ಈ ಕೆಳಗಿನ ನೂತನ ಸಮಿತಿಯನ್ನು ರಚಿಸಿದರು.

ಗೌರವ ಅಧ್ಯಕ್ಷರಾಗಿ ಅಬೂಬಕ್ಕರ್ ಅಜಿಲಮುಗರ್, ಸಲಹೆಗಾರರು ಮುಹಮ್ಮದ್ ಸಖಾಫಿ ತಲಕ್ಕಿ ,ಜಮಾಲುದ್ದೀನ್ ಮುಸ್ಲಿಯಾರ್, ಉಮರ್ ಅಳಕೆಮಜಳ್, DHL ಅಬೂಬಕ್ಕರ್ ನಾರ್ವೆ, ಉಮರುಲ್ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ, ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮುಸ್ಲಿಯಾರ್ ಕುತ್ತಾರ್, ಪ್ರದಾನ ಕಾರ್ಯದರ್ಶಿಯಾಗಿ
ಮುಹ್ಯುದ್ದೀನ್ ಝುಹ್ರಿ ಕನ್ನಂಗಾರ್ ಕೋಶಾಧಿಕಾರಿಯಾಗಿ ಕಾಸಿಂ ಗಡಿಯಾರ್.

ಉಪಾಧ್ಯಕ್ಷರುಗಳಾಗಿ ಶಾಫಿ ಝೈನಿ ಕೊಡ್ಲಿಪೇಟೆ, ಅಬ್ದುಲ್ ರಹ್ಮಾನ್ (ಶುಕೂರು) ಹೊಸನಗರ, ಜೊತೆ ಕಾರ್ಯದರ್ಶಿಗಳಾಗಿ ಶಕೀಫ್ ನವಾಝ್ ಮಂಗಳೂರು, ಸ್ವಾದಿಕ್ ಕಾನತ್ತಡ್ಕ, ಸಂಚಾಲಕರಾಗಿ
ಮುಹಮ್ಮದ್ ಶರೀಫ್ ಕನ್ನಂಗಾರ್.

ಕಾರ್ಯಕಾರಿ‌ ಸದಸ್ಯರಾಗಿ ಹಬೀಬ್ ಸಖಾಫಿ ಕುತ್ತಾರ್, ಉಸ್ಮಾನ್ ಸಅದಿ ನೆಲ್ಯಾಡಿ, ಅಶ್ರಫ್ ಮುಸ್ಲಿಯಾರ್ ಹೊಸಂಗಡಿ, ತಮೀಮ್ ಕುಳೂರು, ಹಮೀದ್ ಕನ್ನಂಗಾರ್, ಅಫೀಫ್ ಕಾಟಿಪಳ್ಳ, ಸಿಹಾಖ್ ಅರಫ ಉಪ್ಪಿನಂಗಡಿ, ಆಸೀಫ್ ಬಾದಿಲ ಅಡ್ಯಾರ್ ಕಣ್ಣೂರು, ಅಬ್ದುಲ್ ಅಝೀಝ್ ಪೊಯ್ಯಿಲ್ (ಸರಳಿಕಟ್ಟೆ)ಅಬ್ದುಲ್ ಅಝೀಝ್ ಉಜಿರೆ, ತಮೀಮ್ ಕುಳೂರು,ಬಾಷ ಗಂಗಾವಳಿ,ಮುಹಮ್ಮದ್ ಹನೀಫ್ ಮೂಡಬಿದ್ರಿ, ಉಮರುಲ್ ಫಾರೂಖ್ ಪರಪ್ಪು, ಆಸೀಫ್ ಬಾದಿಲಾ ಅಡ್ಯಾರ್ ಕಣ್ಣೂರು,ನಝೀರ್ ಜೋಕಟ್ಟೆ, ಶರೀಫ್ BC ರೋಡ್, ಅಬುಸ್ವಾಲಿ ಗುಡಿನಬಳಿ, ರಫೀಖ್ ಆತೂರು, ಸಿದ್ದೀಖ್ ರೈಸ್ ಕೋ, ಕಾಸಿಂ ಅಡ್ಡೂರು, ಕಲಂದರ್ ಶಾಫಿ ತುರ್ಕಳಿಕೆ ಎಂಬವರನ್ನು ಆಯ್ಕೆ ಮಾಡಲಾಯಿತು. ಉಮರುಲ್ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ ಸ್ವಾಗತಿಸಿ, ಜಮಾಲುದ್ದೀನ್ ಮುಸ್ಲಿಯಾರ್ ಧನ್ಯವಾದಗೈದರು.

error: Content is protected !! Not allowed copy content from janadhvani.com