ಮೂಡಬಿದ್ರೆ : ಎಸ್ಸೆಸ್ಸೆಫ್ ಮೂಡಬಿದ್ರೆ ಡಿವಿಷನ್ ವಾರ್ಷಿಕ ಮಹಾಸಭೆಯು ದಿ:17-01-2021ರಂದು ಡಿವಿಷನ್ ಅಧ್ಯಕ್ಷರಾದ ರಿಯಾಝ್ ಸಅದಿ ಗುರುಪುರ ರವರ ಅಧ್ಯಕ್ಷತೆಯಲ್ಲಿ ಸಂಜೆ 4 ಗಂಟೆಗೆ ಕೈಕಂಬದ ಮೇಗಾ ಅಡಿಟೋರಿಯಂನಲ್ಲಿ ನಡೆಯಿತು.
SSF ರಾಜ್ಯ ನಾಯಕರು ಹಾಗೂ ದ.ಕ ವೆಸ್ಟ್ ಝೋನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಸಭೆಯನ್ನು ಉದ್ಘಾಟಿಸಿದರೆ, ದ.ಕ ವೆಸ್ಟ್ ಝೋನ್ ಸದಸ್ಯರು ಹಾಗೂ ವೀಕ್ಷಕರಾದ ಇಬ್ರಾಹಿಂ ಅಹ್ಸನಿ ಮಂಜನಾಡಿ ತರಗತಿ ನಡೆಸಿದರು. ಡಿವಿಷನ್ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಬಜ್ಪೆ ವರದಿ ವಾಚಿಸಿದರೆ, ಡಿವಿಷನ್ ಕೋಶಾಧಿಕಾರಿ ನಜೀಬ್ ಕೈಕಂಬ ಲೆಕ್ಕ ಪತ್ರ ಮಂಡಿಸಿದರು.
ದ.ಕ ವೆಸ್ಟ್ ಝೋನ್ ವೀಕ್ಷಕರಾದ ಇಬ್ರಾಹಿಂ ಅಹ್ಸನಿ ಮಂಜನಾಡಿ ಯವರ ನಿರ್ದೇಶನದಂತೆ ಹಾಲಿ ಸಮಿತಿಯನ್ನು ವಿಸರ್ಜಿಸಿ, ನೂತನ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.
2021ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ವರಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎ.ಸಿದ್ದೀಖ್ ಬಜ್ಪೆ, ಕೋಶಾಧಿಕಾರಿಯಾಗಿ ರಮೀಝ್ ತಾರಿಕಂಬ್ಳ, ಉಪಾಧ್ಯಕಷರುಗಳಾಗಿ ಉಬೈದುಲ್ಲಾಹ್ ಸಖಾಫಿ ಅಡ್ಡೂರು ಮತ್ತು ಝುಹೈರ್ ಮಾಸ್ಟರ್ ಜರಿನಗರ, ಕಾರ್ಯದರ್ಶಿಗಳಾಗಿ ಇಸ್ಮಾಯಿಲ್ ಬಜ್ಪೆ, ಶರೀಫ್ ಬಡಕಬೈಲ್, ಹಂಝ ತಾಲಿಪಾಡಿ, ಫತ್ತಾಹ್ ಅಮ್ಮುಂಜೆ , ಮಜೀದ್ ಮಳಲಿ ಮತ್ತು ಅಶ್ಫಾಕ್ ಮೂಡಬಿದ್ರಿ ಹಾಗೂ ಸದಸ್ಯರುಗಳಾಗಿ ಖಲೀಲ್ ಅಬ್ಬೆಟ್ಟು, ನೌಫಲ್ ಇಂಜಿನಿಯರ್ ದೆಮ್ಮಲೆ, ಫಾರೂಖ್ ಹನೀಫಿ ಬಜ್ಪೆ, ಶಬೀರ್ ಅಡ್ಡೂರು, ಝೈನುದ್ದೀನ್ ಮೂಡಬಿದ್ರಿ, ಸಿರಾಜ್ ಎಡಪದವು, ಸಿದ್ದೀಖ್ ಬಳ್ಕುಂಜೆ, ಹಕೀಮ್ ವರಕೋಡಿ, ಸುಲೈಮಾನ್ ಬಜ್ಪೆ, ಅಝೀಮ್ ಕುಪ್ಪೆಪದವು, ಇಕ್ಬಾಲ್ ಹನೀಫಿ ಗುಂಡುಕಲ್ಲು, ಫೈಝಲ್ ಬಜ್ಪೆ, ನೂರುದ್ದೀನ್ ಗಂಟಲ್ಕಟ್ಟೆ ಮತ್ತು ಆಶಿಖ್ ಮೂಡಬಿದ್ರಿ ಹೀಗೆ 25 ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಸಭೆಯಲ್ಲಿ SSF ದ.ಕ ವೆಸ್ಟ್ ಝೋನ್ ಪ್ರಧಾನ ಕಾರ್ಯದರ್ಶಿ ಹೈದರ್ ಅಲಿ ಕಾಟಿಪಳ್ಳ, ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ, ಉಪಾಧ್ಯಕ್ಷರು ಜಬ್ಬಾರ್ ಮೂಡಬಿದ್ರಿ, ಸದಸ್ಯರುಗಳಾದ ರಿಝ್ವಾನ್ ಕೃಷ್ಣಾಪುರ, ಮನ್ಸೂರ್ ಅಮ್ಮುಂಜೆ, SჄS ಕೈಕಂಬ ಸೆಂಟರ್ ನಾಯಕರಾದ ಅಬ್ದುಲ್ ಅಝೀಝ್ ಮೇಗ, ಬಜ್ಪೆ ಸೆಂಟರ್ ಪ್ರಧಾನ ಕಾರ್ಯದರ್ಶಿ ಶಾಫಿ ಮಾಸ್ಟರ್ ಬಜ್ಪೆ, ನಾಯಕರಾದ ಅಬ್ದುಲ್ ಖಾದರ್ ಮುರ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಾಲಿ ಡಿವಿಷನ್ ಸಮಿತಿಯಲ್ಲಿದ್ದು, SSFನಿಂದ SჄSಗೆ ಪಾದಾರ್ಪಣೆಗೈದ ಸದಸ್ಯರುಗಳಾದ ರಿಯಾಝ್ ಸಅದಿ ಗುರುಪುರ, ನಜೀಬ್ ಕೈಕಂಬ, ಸರ್ಫರಾಝ್ ಹಂಡೇಲ್, ಜಬ್ಬಾರ್ ಮೂಡಬಿದ್ರಿ, ಮನ್ಸೂರ್ ಅಮ್ಮುಂಜೆ, ಶಮೀರ್ ಮಾವಿನಕಟ್ಟೆ ಮತ್ತು ಫಾರೂಖ್ ಮಳಲಿ ರವರಿಗೆ ಶಾಲು ಹೊದಿಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಲಾಗಿದೆ.
ಡಿವಿಷನ್ ಪ್ರಧಾನ ಕಾರ್ಯದರ್ಶಿ ಎಂ.ಎ.ಸಿದ್ದೀಖ್ ಬಜ್ಪೆ ಸ್ವಾಗತಿಸಿ, ವಂದಿಸಿದರು.
ವರದಿ: ಸಿದ್ದೀಖ್ ಬಜ್ಪೆ
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ