janadhvani

Kannada Online News Paper

ಜನವರಿ 30 ರಂದು ಕುಂಬ್ರ ಮರ್ಕಝುಲ್ ಹುದಾದಲ್ಲಿ “ಅಲುಂನಿ ಅಸೆಂಬ್ಲಿ”

ಪುತ್ತೂರು ತಾಲೂಕಿನ ಕುಂಬ್ರದಲ್ಲಿರುವ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಇಪ್ಪತ್ತನೆಯ ವಾರ್ಷಿಕೋತ್ಸವ ಹಾಗೂ “ಅಲ್ ಮಾಹಿರಾ ಸನದುದಾನ” ಸಂಗಮವು ಫೆಬ್ರವರಿ ತಿಂಗಳಲ್ಲಿ ನಡೆಯಲಿದ್ದು ಇದರ ಅಂಗವಾಗಿ ಜನವರಿ 30 ಶನಿವಾರ ಬೆಳಗ್ಗೆ 10 ಗಂಟೆಯಿಂದ 01 ಗಂಟೆಯ ವರೆಗೆ ಸಂಸ್ಥೆಯ ಹಳೆ ವಿದ್ಯಾರ್ಥಿನಿಯರ ಸಂಗಮ “ಅಲುಂನಿ ಅಸೆಂಬ್ಲಿ” ನಡೆಯಲಿದೆ.

ಸಮಾವೇಶದಲ್ಲಿ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದು ಶರೀಅತ್ ಕಾಲೇಜಿನ ಪ್ರಿನ್ಸಿಪಾಲ್ ಯು.ಕೆ.ಮುಹಮ್ಮದ್ ಸ‌ಅದಿ ವಳವೂರು ಉಧ್ಘಾಟಿಸಲಿರುವರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ| ಎಮ್ಮೆಸ್ಸೆಂ. ಝೈನೀ ಕಾಮಿಲ್ ಅಲುಂನೀ ಸಂದೇಶ ನೀಡಲಿದ್ದು ಮರ್ಕಝುಲ್ ಹುದಾ ಸ್ವಾಗತ ಸಮಿತಿಯ ಅಧ್ಯಕ್ಷ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತನ್ನಾಡಲಿರುವರು.

ಅಂತಾರಾಷ್ಟ್ರೀಯ ತರಬೇತುದಾರ‌ ಶಹೀರ್ ಅಹ್ಮದ್ ಫಾಝಿಲ್ ಪ್ರೇರಣಾ ಭಾಷಣ ಮಾಡಲಿರುವರು.

ಸಂಸ್ಥೆಯ ಕಾರ್ಯಾಧ್ಯಕ್ಷ ಹಾಜಿ ಪಿ.ಎಂ.ಅಬ್ದುಲ್‌ ರಹ್ಮಾನ್ ಅರಿಯಡ್ಕ, ಸ್ವಾಗತ ಸಮಿತಿಯ ಕನ್ವೀನರ್ ಹಾಜಿ ಸಿ.ಎ.ಕರೀಂ ಚೆನ್ನಾರ್, ಡಿಗ್ರೀ ಕಾಲೇಜ್ ಪ್ರಿನ್ಸಿಪಾಲ್ ಮುಹಮ್ಮದ್ ಮನ್ಸೂರ್ ಕಡಬ, ಪಿ.ಯು ಕಾಲೇಜ್ ಪ್ರಿನ್ಸಿಪಾಲ್ ಸಂಧ್ಯಾ ಪಿ.ಶೆಟ್ಟಿ ಭಾಗವಹಿಸಲಿರುವರು.

ಹಳೆ ವಿದ್ಯಾರ್ಥಿನಿಯರು ಸಮಾವೇಶದಲ್ಲಿ ಗರಿಷ್ಟ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ| ಝೈನೀ ಕಾಮಿಲ್ ರವರು ವಿನಂತಿಸಿದ್ದಾರೆ.

error: Content is protected !! Not allowed copy content from janadhvani.com