janadhvani

Kannada Online News Paper

ಪುತ್ತೂರು: ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸಿಎಫ್ಐ ವತಿಯಿಂದ ಸನ್ಮಾನ

ಪುತ್ತೂರು :- ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿಯ ವತಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಫಾತಿಮಾ ರಾಫಿಯ 578 (96%), ಕೆ ಅಫ್ರಾ 569 (94%), ಫಾತಿಮಾ ಸಂಶೀರಾ 568 94%, ಶಾಝ್ಮಿನ 532 (88%),‌ ಮೊಹಮ್ಮದ್ ಸಫ್ವಾನ್ 516 (86%), ಫಾತಿಮಾ ಅಫ್ರಾ 512 (85%), ಶಮಾನ್ 567 (94%) ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾಧ್ಯಕ್ಷರಾದ ಆರಿಫ್ ಬೆಟ್ಟಂಪಾಡಿ ಜಿಲ್ಲಾ ಕಾರ್ಯದರ್ಶಿ ಫಾರೂಕ್ ಕಟ್ಟತ್ತಾರ್ ಹಾಗೂ ಜಿಲ್ಲಾ ಸಮಿತಿ ಮುಖಂಡರಾದ ರಿಝ್ವಾನ್ ಉಪ್ಪಿನಂಗಡಿ ಶಫೀಕ್ ಬೆಟ್ಟಂಪಾಡಿ ಅಫ್ರಾಝ್ ಪರ್ಲಡ್ಕ ಹಾಗೂ ಇತರೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com