janadhvani

Kannada Online News Paper

ಬನ್ನೂರು: ತಾಜುಲ್ ಉಲಮಾ ಸುನ್ನಿ ಚಾರಿಟೇಬಲ್ ಟ್ರಸ್ಟ್ ನ ಘೋಷಣಾ ಸಮಾವೇಶ

ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್‍ರವರಿಂದ ಚಾಲನೆ

ಪುತ್ತೂರು: ಬನ್ನೂರು: ತಾಜುಲ್ ಉಲಮಾ ಸುನ್ನಿ ಚಾರಿಟೇಬಲ್ ಟ್ರಸ್ಟ್ ನ ಘೋಷಣಾ ಸಮಾವೇಶವು ಮಾ.27ರಂದು ಬನ್ನೂರು ಸುನ್ನಿ ಸೆಂಟರ್‍ನಲ್ಲಿ ನಡೆಯಿತು. ದ.ಕ ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಟ್ರಸ್ಟ್ ನ ನೂತನ ಸಮಿತಿಯ ಘೋಷಣೆ ನೆರೆವೇರಿಸಿ ಟ್ರಸ್ಟ್ ಗೆ ಶುಭಹಾರೈಸಿದರು.

ಅಸ್ಸಯ್ಯದ್ ಆಬಿದ್ ತಂಙಳ್ ಬನ್ನೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬನ್ನೂರು ಬದ್ರಿಯ ಜುಮಾ ಮಸೀದಿಯ ಖತೀಬ್ ಸಿರಾಜುದ್ದೀನ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬೂಬಕ್ಕರ್ ಫೈಝಿ (ಸುನ್ನಿ ಫೈಝಿ) ಪೆರುವಾಯಿ, ಅಬುಲ್ ಬುಶ್ರಾ ಅಬ್ದುರ್ರಹ್ಮಾನ್ ಫೈಝಿ ಸಂಪ್ಯ ಪ್ರಾಸ್ತಾವಿಕ ಮಾತುಗಳಾನ್ನಾಡಿದರು. ಕಾರ್ಯಕ್ರಮದಲ್ಲಿ ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯಾ ಉಪನ್ಯಾಸ ತರಗತಿ ನೆರೆವೇರಿಸಿದರು.

ಮುಖ್ಯ ಅತಿಥಿಗಳಾಗಿ ಬನ್ನೂರು ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, PWD Contarctor ಕುಂಞ ಅಹ್ಮದ್ ಹಾಜಿ ಹಾರಾಡಿ, ಇಬ್ರಾಹಿಂ ಮುಸ್ಲಿಯಾರ್, ಕುಂಬ್ರ ಮರ್ಕಝುಲ್ ಹುದಾ ಕಾರ್ಯದರ್ಶಿ ಅಡ್ವಕೇಟ್ ಶಾಕೀರ್ ಹಾಜಿ, ಕರ್ನಾಟಕ ಎಸ್.ವೈ.ಎಸ್ ಇಸಾಬ ಕನ್ವೀನರ್ ಇಕ್ಬಾಲ್ ಬಪ್ಪಳಿಗೆ, ಬನ್ನೂರು ಬದ್ರಿಯ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್, ಅಬೂಬಕ್ಕರ್ ಪಾಪ್ಲಿ, ಎಸ್.ವೈ.ಎಸ್ ಸಾಂತ್ವನ ಈಸ್ಟ್ ಸಮಿತಿಯ ಕಾರ್ಯದರ್ಶಿ ಸ್ವಾಲಿಹ್ ಮುರ, ಜಿಸಿಸಿ ಉಪಾಧ್ಯಕ್ಷ ಬಿ. ಸತ್ತಾರ್ ಬನ್ನೂರು, ಜಿಸಿಸಿ ಸದಸ್ಯ ಆದಂ ಬನ್ನೂರು, ಹರ್ಷದ್ ಕಾಂಪ್ಲೆಕ್ಸ್ ಮಾಲಕ ಹನೀಫ್, ಬನ್ನೂರು ಸ್ವಲಾತ್ ಕಮಿಟಿಯ ಅಧ್ಯಕ್ಷ ರಹೀಂ, ಬನ್ನೂರು ಸ್ವಲಾತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಹಾರಾಡಿ ಭಾಗವಹಿಸಿದರು. ಟ್ರಸ್ಟ್ ನ ಫಾರೊಕ್ ಬನ್ನೂರು, ಜಮಾಲ್, ಶಮೀರ್ ಬನ್ನೂರು, ಹನೀಫ್ ಬನ್ನೂರು ಸಹಕರಿಸಿದರು.
ಸೈಫುಲ್ಲಾ ಸಅದಿ ಬನ್ನೂರು ಸ್ವಾಗತಿಸಿ, ಅಬ್ದುಲ್ಲ ಮುಸ್ಲಿಯಾರ್ ವಂದಿಸಿದರು.

error: Content is protected !! Not allowed copy content from janadhvani.com