janadhvani

Kannada Online News Paper

ಇಡ್ಕಿದು ಗ್ರಾಮದ ಕೋಲ್ಪೆ ವಡ್ಯರ್ಪೆ – ವಾದಿಮಜಲು ರಸ್ತೆ: ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ

ಪುತ್ತೂರು ವಿಧಾನಸಭಾ ಕ್ಷೇತ್ರದ ಇಡ್ಕಿದು ಗ್ರಾಮದ ಕೋಲ್ಪೆ ವಡ್ಯರ್ಪೆ – ವಾದಿಮಜಲು ರಸ್ತೆ
ಕಾಂಕ್ರಿಟೀಕರಣಕ್ಕೆ ಸುಮಾರು 5ಲಕ್ಷ ಅನುದಾನದ ಅಭಿವೃದ್ಧಿ ಕಾಮಗಾರಿಗೆ ಇಂದು, ಮಾನ್ಯ ಜನಪ್ರಿಯ ಶಾಸಕರಾದ ಶ್ರೀಅಶೋಕ್ ಕುಮಾರ್ ರೈ ಅವರು ಗುದ್ದಲಿ ಪೂಜೆ ಮೂಲಕ ಶಂಕುಸ್ಥಾಪನೆ ಮಾಡಿದರು.

ಈ ಸಂದರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ,ಕೆಪಿಸಿಸಿ ಕಾರ್ಯದರ್ಶಿಯಾದ ಎಂ.ಎಸ್.ಮುಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷರಾದ ಕರೀಂ ಕುದ್ದುಪದವು, ಪುತ್ತೂರು ಆಕ್ರಮ-ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಮೋಹನ್ ಗುರ್ಜಿನಡ್ಕ,ಇಡ್ಕಿದು ವಲಯಾಧ್ಯಕ್ಷರಾದ ಅಬ್ದುಲ್ ನಾಸಿರ್ ಕೋಲ್ಪೆ,ಕೋಲ್ಪೆ ಬೂತ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ಕೋಲ್ಪೆ,ಎನ್. ಎಸ್.ಯು.ಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಯಬೆ,ಇಡ್ಕಿದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪದ್ಮನಾಭ ಸಫಲ್ಯ,ಬ್ಲಾಕ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಅಬೂಬಕ್ಕರ್ ಕೋಲ್ಪೆ,ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರಾದ ಹಾಜಿ ಶೇಕಬ್ಬ ಕೆ.ಎಸ್,ಹಿರಿಯ ಕೃಷಿಕರಾದ ಹಮೀದ್ ಕನ್ಯಾನ,ಹಿರಿಯರಾದ ಅಹ್ಮದ್ ಕುಂಞ ಕೋಲ್ಪೆ ಹಾಗೂ ಪ್ರಮುಖರಾದ ಸುಲೈಮಾನ್ ಅಬ್ಬಾಸ್ ಅಕ್ಕರೆ,ಅಬ್ಬು ನವಗ್ರಾಮ,ಅಬ್ದುಲ್ ಕುಂಞ,ಅಬೂಬಕ್ಕರ್ ,ಆಸಿಫ್ ಕೋಲ್ಪೆ,ಅಝೀಜ್ ಅಕ್ಕರೆ,ಅಬ್ದುಲ್ ರಜಾಕ್ ಕಲ್ಲೆಗ,ಆದಂ ಬನ್ನೂರು, ಫಾರೂಕ್ ಬರೆಪ್ಪಾಡಿ,ಖಲಂದರ್ ಕೋಲ್ಪೆ,ಮುನೀರ್ ಎಂ.ಕೆ.ಇಲ್ಯಾಸ್ ಕೋಲ್ಪೆ,ರಫೀಕ್ ಕೆ.ಎಸ್, ಸೇರಿದಂತೆ ಇಡ್ಕಿದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಇಡ್ಕಿದು ವಲಯಾಧ್ಯಕ್ಷ ಅಬ್ದುಲ್ ನಾಸಿರ್ ಕೋಲ್ಪೆ ಸ್ವಾಗತಿಸಿದರು, ಕೋಲ್ಪೆ ಬೂತ್ ಅಧ್ಯಕ್ಷ ಲತೀಫ್ ಕೋಲ್ಪೆ ವಂದಿಸಿದರು.

error: Content is protected !! Not allowed copy content from janadhvani.com