janadhvani

Kannada Online News Paper

ಎಸ್ ಎಂ ಎ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಎಸ್ ಎಂ ಎ ನಡೆ ಮೊಹಲ್ಲಾ ಕಡೆ- ಸ್ವಾಗತ ಸಮಿತಿ ರಚನೆ

ಪುತ್ತೂರು ಎಸ್ ಎಂ ಎ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಎಸ್ ಎಂ ಎ ನಡೆ ಮೊಹಲ್ಲಾ ಕಡೆ ಎಂಬ ಕಾರ್ಯಕ್ರಮ ಈಸ್ಟ್ ಜಿಲ್ಲೆಯ ಎಲ್ಲಾ ಮೊಹಲ್ಲಾಗಳಲ್ಲಿ ನಡೆಯುತ್ತಿದ್ದು ಇದರ ಸಮರೋಪ ಸಮಾರಂಭ ಫೆಬ್ರವರಿ 13 ಮಂಗಳವಾರ ಬೆಳಿಗ್ಗೆ 10:00ಕ್ಕೆ ನೇರ್ಲಕಟ್ಟೆ ಜನಪ್ರಿಯ ಗಾರ್ಡನ್ ನಲ್ಲಿ ಜರಗಳಿದೆ ಪ್ರಸ್ತುತ ಕಾರ್ಯಕ್ರಮದಲ್ಲಿ ಸಮಸ್ತ ಉಪಾಧ್ಯಕ್ಷರಾದ ಶೈಖುನಾ ಕೆ ಎಸ್ ಆಟ್ಟಕೋಯ ತಂಙಳ್ ಕುಂಬೊಳ್,ಪಿಎಂಎಸ್ ತಂಙಳ್ ತ್ರಿಶೂರ್ ವಿಷಯ ಮಂಡಿಸಲಿದ್ದು ಎಸ್ ಎಂ ಎ ರಾಜ್ಯ ಅಧ್ಯಕ್ಷರಾದ ಇಸ್ಮಾಯಿಲ್ ತಂಙಳ್ ಉಜಿರೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮದನಿ ಜಪ್ಪು ಹಾಗೂ ರಾಜಕೀಯ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.

ಸುಮಾರು ಸಾವಿರಕ್ಕೂ ಮಿಕ್ಕ ಮೊಹಲ್ಲಾ ಪ್ರತಿನಿಧಿಗಳು ಭಾಗವಹಿಸಲಿದ್ದು ಈ ಕಾರ್ಯಕ್ರಮದ ಸಿದ್ಧತೆಗಾಗಿ ಸ್ವಾಗತ ಸಮಿತಿಯನ್ನು ದಿನಾಂಕ 7/1/2024 ಆದಿತ್ಯವಾರ ಸುನ್ನೀ ಸೆಂಟರ್ ಬನ್ನೂರುನಲ್ಲಿ ನಡೆದ ಸಭೆಯಲ್ಲಿ ಎಸ್ ಎಂ ಎ ಈಸ್ಟ್ ಜಿಲ್ಲಾ ಅಧ್ಯಕ್ಷರಾದ ಅಸಯ್ಯದ್ ಸಾದಾತ್ ತಂಙಳ್ ಕರ್ವೇಲು ಇವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.

ಚೆಯರ್ಮೇನ್:-ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ
ಕನ್ವೀನರ್:- ಖಾಸಿಂ ಸಖಾಫಿ ವಿಟ್ಲ
ಟ್ರಸರರ್:- ಯೂಸುಫ್ ಸಾಜಾ
ವೈಸ್ ಚೆಯರ್ಮೇನ್:- ಇಸ್ಮಾಯಿಲ್ ಹಾಜಿ ಬನ್ನೂರು, ಲತೀಫ್ ಹರ್ಲಡ್ಕ, ಇಬ್ರಾಹಿಂ ಬೀಡು
ಕನ್ವೀನರ್ಸ್ :- ಅಶ್ರಫ್ ಸಖಾಫಿ ಕನ್ಯಾನ
ಬಶೀರ್ ಮದನಿ ಉಪ್ಪಿನಂಗಡಿ, ಉಮರ್ ವಿಟ್ಲ,
ಇಸ್ಮಾಯಿಲ್ ಕನ್ಯಾನ

ಹಾಗೂ 50 ಮಂದಿ ಸದಸ್ಯರನ್ನು ಒಳಗೊಂಡ ಸ್ವಾಗತ ಸಮಿತಿ ರಚಿಸಲಾಯಿತು.ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಸ್ವಾಗತಿಸಿದರು.

error: Content is protected !! Not allowed copy content from janadhvani.com