janadhvani

Kannada Online News Paper

ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್: ಮಹಾ ಸಭೆ- ನೂತನ ಸಾರಥಿಗಳ ಆಯ್ಕೆ

ಸುರತ್ಕಲ್ : ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಇದರ ವಾರ್ಷಿಕ ಮಹಾ ಸಭೆಯು ದಿನಾಂಕ 13.01.2021ರಂದು ಡಿವಿಷನ್ ಅಧ್ಯಕ್ಷರಾದ ಉಮರುಲ್ ಫಾರೂಕ್ ಸಖಾಫಿ ಕಾಟಿಪಳ್ಳರವರ ಅಧ್ಷಕ್ಷತೆಯಲ್ಲಿ ಕಾಟಿಪಳ್ಳ
ಮಿಸ್ಬಾಹ್ ಕಾಲೇಜ್ ಸಭಾಂಗಣ ದಲ್ಲಿ ನಡೆಯಿತು.

ಎಸ್ಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ ಝೋನ್ ಅಧ್ಯಕ್ಷರಾದ ಮುನೀರ್ ಸಖಾಫಿ, ಉಳ್ಳಾಲ ಸಭೆಯನ್ನು ಉದ್ಘಾಟಿಸಿದರು.
ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತನ್ಸೀರ್ 4ನೇ ಬ್ಲಾಕ್ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಆಸೀಫ್ ಪಕ್ಷಿಕೆರೆ ಲೆಕ್ಕಪತ್ರ ಮಂಡಿಸಿದರು.

ಸಭೆಯ ವೀಕ್ಷಕರಾಗಿ ದ.ಕ ವೆಸ್ಟ್ ಝೋನ್ ನಾಯಕರಾದ ಇಬ್ರಾಹಿಂ ಅಹ್ಸನಿ ಮಂಜನಾಡಿ, ನವಾಝ್ ಸಖಾಫಿ ಅಡ್ಯಾರ್ ಪದವು , ಝಹೈರ್ ಮಾಸ್ಟರ್ ಬಜ್ಪೆ, ಸಿದ್ದೀಕ್ ಬಜ್ಪೆ, ಇಲ್ಯಾಸ್ ಪೊಟ್ಟಲಿಕೆ, ಶರೀಫ್ ಮುಡಿಪು, ಇಕ್ಬಾಲ್ ಮಧ್ಯನಡ್ಕ ಭಾಗವಹಿಸಿದರು.

2021 ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಹನೀಫ್ ಅಹ್ಸನಿ ಶೇಡಿಗುರಿ, ಉಪಾಧ್ಯಕ್ಷರುಗಳು ಸಿನಾನ್ ಸಖಾಫಿ 3ನೇ ಬ್ಲಾಕ್ ಮತ್ತು ಆಸೀಫ್ ಪಕ್ಷಿಕೆರೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತನ್ಸೀರ್ 4ನೇ ಬ್ಲಾಕ್, ಕೋಶಾಧಿಕಾರಿ ತೌಸೀಫ್ ಬದ್ರಿಯಾ ನಗರ, ಕಾರ್ಯದರ್ಶಿಗಳಾಗಿ ಅನ್ಸಾರ್ 9ನೇ ಬ್ಲಾಕ್, ಇಲ್ಯಾಸ್ ಜಂಕ್ಷನ್, ಹನೀಫ್ ಸುರತ್ಕಲ್, ಇರ್ಷಾದ್ ಪಕ್ಷಿಕೆರೆ, ನುಅ್ ಮಾನ್ ಇಸ್ಮಾಯಿಲ್ 6ನೇ ಬ್ಲಾಕ್, ಹಾಗೂ‌ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಉಮರುಲ್ ಫಾರೂಕ್ ಸಖಾಫಿ ಕಾಟಿಪಳ್ಳ ,ಆರೀಫ್ ಝುಹುರಿ ಮುಕ್ಕ ,ನಝರ್ 9ನೇ ಬ್ಲಾಕ್, ಅಫ್ವಾನ್ ಸೂರಿಂಜೆ, ಅಫ್ರೀದ್ ಜಂಕ್ಷನ್ , ಮಝರ್ ಕುಕ್ಕಾಡಿ, ಶಂಶುದ್ದೀನ್ ಅಹ್ಸನಿ ಬಳ್ಕುಂಜೆ, ರಾಹಿಲ್ ಪಕ್ಷಿಕೆರೆ, ಅಬ್ದುರ್ರವೂಫ್ ಹಿಮಮಿ ಸಖಾಫಿ ಹಳೆಯಂಗಡಿ , ಅಲಿ ಸಅದಿ ಜೊಕಟ್ಪೆ , ರಫೀಕ್ 3ನೇ ಬ್ಲಾಕ್, ಸಿದ್ದೀಕ್ 3ನೇ ಬ್ಲಾಕ್ , ಇರ್ಷಾದ್ 3ನೇ ಬ್ಲಾಕ್ , ಹಾರೀಸ್ ಕಾನ ಇವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಆಶ್ರಫ್ ರಝಾ ಅಂಜದಿ ಪಕ್ಷಿಕೆರೆ, ಎಸ್.ವೈ.ಎಸ್ ಕೃಷ್ಣಾಪುರ ಸೆಂಟರ್ ಅಧ್ಯಕ್ಷರಾದ ಹಬೀಬುರ್ರಹ್ಮಾನ್ ಸಖಾಫಿ ಕಾಟಿಪಳ್ಳ, ಎಸ್.ವೈ.ಎಸ್ ಸುರತ್ಕಲ್ ಸೆಂಟರ್ ಅಧ್ಯಕ್ಷರಾದ ಅಬ್ದುಲ್ಲತೀಫ್ ಸಖಾಫಿ ಕಿನ್ನಿಗೋಳಿ, ಮಾಜಿ ರಾಜ್ಯ ಎಸ್ಸೆಸ್ಸೆಫ್ ಕಾರ್ಯದರ್ಶಿ ಹಾಜಿ ಅಬ್ದುರ್ರಹ್ಮಾನ್ ಕೃಷ್ಣಾಪುರ , ದ.ಕ ಜಿಲ್ಲಾ ಮಾಜಿ ಕ್ಯಾಂಪಸ್ ಕಾರ್ಯದರ್ಶಿ ಆಸೀಫ್ ಹಾಜಿ‌ ಕೃಷ್ಣಾಪುರ, ದ.ಕ ಜಿಲ್ಲಾ ಸದಸ್ಯರಾದ ಆರೀಫ್ ಝುಹುರಿ ಮುಕ್ಕ, ದ.ಕ ಜಿಲ್ಲಾ‌ ಕಾರ್ಯದರ್ಶಿ ರಫೀಕ್ 3ನೇ ಬ್ಲಾಕ್, ಕೆ.ಸಿ.ಎಫ್ ನಾಯಕರಾದ ಫಾರೂಕ್ ಕಾಟಿಪಳ್ಳ ಹಾಗೂ ಸ್ವಾದಿಕ್ ಕಾಟಿಪಳ್ಳ, ಡಿವಿಷನ್ ಮಾಜಿ ನಾಯಕಗಳಾದ ಹೈದರ್ ಮದನಿ ಕೋಟೆ, ಫಾರೂಕ್ ಶೇಡಿಗುರಿ, ಇಕ್ಬಾಲ್ ಅಡ್ಕ, ತಮೀಮ್ ಕೃಷ್ಣಾಪುರ, ಮೂಸ ಕೃಷ್ಣಾಪುರ , ಬಶೀರ್ ಕಾನ ಉಪಸ್ಥಿತರಿದ್ದರು.

ಡಿವಿಷನ್ ಪ್ರ.ಕಾರ್ಯದರ್ಶಿ ಮುಹಮ್ಮದ್ ತನ್ಸೀರ್ 4ನೇ ಬ್ಲಾಕ್ ಸ್ವಾಗತಿಸಿ, ವಂದಿಸಿದರು.

error: Content is protected !! Not allowed copy content from janadhvani.com