janadhvani

Kannada Online News Paper

ಅಲ್ ಮದೀನಾ ಅಲುಮ್ನಿ ಅಧ್ಯಕ್ಷರಾಗಿ ಶರೀಫ್ ಸಅದಿ ಪುನರಾಯ್ಕೆ

ನರಿಂಗಾನ : ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ಹಳೆ ವಿಧ್ಯಾರ್ಥಿ ಸಂಘಟನೆಯಾದ ‘ಅಲ್ ಮದೀನಾ ಅಲುಮ್ನಿ ಅಸೋಸಿಯೇಶನ್’ ಇದರ ವತಿಯಿಂದ ಗ್ರಾಂಡ್ ಅಲುಮ್ನಿ ಮೀಟ್ ಹಾಗು ಶೈಖುನಾ ಶರಫುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮವು ಅಲ್ ಮದೀನಾ ಕ್ಯಾಂಪಸ್ ನಲ್ಲಿ ಜರಗಿತು.

ಅಲ್ ಮದೀನಾ ಸಂಸ್ಥೆಯ ಜನರಲ್ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ ಉದ್ಘಾಟಿಸಿದರು, ಶರೀಫ್ ಸಅದಿ ಮೂಡುಬಿದ್ರೆ ಅಧ್ಯಕ್ಷತೆ ವಹಿಸಿದರು. ಮುಹಮ್ಮದ್ ಕುಂಞಿ ಅಂಜದಿ, ಅಬ್ದುಲ್ ಸಲಾಂ ಅಹ್ಸನಿ,ರಝ್ಝಾಕ್ ಮಾಸ್ಟರ್ ನಾವುರು,ಅಶ್ರಫ್ ಬಾಳೆಪುಣಿ ಶುಭ ಹಾರೈಸಿದರು. ಅಲುಮ್ನಿ ಪ್ರ.ಕಾರ್ಯದರ್ಶಿ ಇಕ್ಬಾಲ್ ಮರ್ಝೂಖಿ ಸಖಾಫಿ ಗೇರುಕಟ್ಟೆ ವರದಿ ಮಂಡಿಸಿದರು.ಬಳಿಕ ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿ : ಎಲ್.ಎಚ್ ಶರೀಫ್ ಸಅದಿ ಮೂಡುಬಿದ್ರೆ (ಅಧ್ಯಕ್ಷರು) ಇಮ್ತಿಯಾಜ್ ಸಜೀಪ(ಪ್ರ.ಕಾರ್ಯದರ್ಶಿ) ಇಮ್ರಾನ್ ಸುರತ್ಕಲ್ (ಕೊಶಾಧಿಕಾರಿ) ಇಕ್ಬಾಲ್ ಮರ್ಝೂಖಿ ಸಖಾಫಿ ಗೇರುಕಟ್ಟೆ,ರಿಯಾಝ್ ಕುಂದಾಪುರ (ಉಪಾಧ್ಯಕ್ಷರು) ನಿಝಾರ್ ಗುರುಪುರ,ಅಶ್ರಫ್ ಬಾಳೆಪುಣಿ (ಜೊತೆ ಕಾರ್ಯದರ್ಶಿಗಳು)ಕೆರೀಂ ಅಡ್ಕರೆ (ವರ್ಕಿಂಗ್ ಸೆಕ್ರೆಟರಿ) ಲಿಬಾನ್ ಮರ್ಝೂಖಿ ಅಲ್ ರಬ್ಬಾನಿ (ಮಾಧ್ಯಮ ಕಾರ್ಯದರ್ಶಿ), ಸಲಹೆಗಾರರಾಗಿ ಮುಹಮ್ಮದ್ ಕುಂಞಿ ಅಮ್ಜದಿ ಹಾಗೂ ಅಬ್ದುಲ್ ರಝಾಕ್ ಮಾಸ್ಟರ್ ಇವರನ್ನು ನೇಮಿಸಲಾಯಿತು.

ಅಲುಮ್ನಿ ಪ್ರ.ಕಾರ್ಯದರ್ಶಿ ಇಕ್ಬಾಲ್ ಮರ್ಝೂಖಿ ಸಖಾಫಿ ಗೇರುಕಟ್ಟೆ ಸ್ವಾಗತಿಸಿ ಇಮ್ತಿಯಾಜ್ ಸಜೀಪ ವಂದಿಸಿದರು.ಕಬೀರ್ ಸ ಅದಿ ವೇಣೂರು ಕಿರಾಅತ್ ಪಠಿಸಿದರು.

error: Content is protected !! Not allowed copy content from janadhvani.com