janadhvani

Kannada Online News Paper

SSF ಬಜ್ಪೆ ಸೆಕ್ಟರ್: ವಾರ್ಷಿಕ ಮಹಾಸಭೆ- ನೂತನ ಸಮಿತಿ ಅಸ್ತಿತ್ವಕ್ಕೆ

ಮಂಗಳೂರು : ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ವಾರ್ಷಿಕ ಮಹಾಸಭೆಯು ದಿ:02-01-2021ರಂದು ಸೆಕ್ಟರ್ ಅಧ್ಯಕ್ಷರಾದ ಉಮರುಲ್ ಫಾರೂಖ್ ಹನೀಫಿ ಬಜ್ಪೆ ಅವರ ಅಧ್ಯಕ್ಷತೆಯಲ್ಲಿ ಬಜ್ಪೆ ದ‌ಅವಾ ಸೆಂಟರ್‌ನಲ್ಲಿ ನಡೆಯಿತು.

ಡಿವಿಶನ್ ಉಪಾಧ್ಯಕ್ಷರಾದ ಉಬೈದುಲ್ಲಾಹ್ ಸಖಾಫಿ ಅಡ್ಡೂರು ದುಆದ ಮೂಲಕ ಸಭೆಗೆ ಚಾಲನೆ ನೀಡಿದರು. SჄS ಬಜ್ಪೆ ಸೆಂಟರ್ ಪ್ರಧಾನ ಕಾರ್ಯದರ್ಶಿ ಶಾಫಿ ಮಾಸ್ಟರ್ ಸಭೆಯನ್ನು ಉದ್ಘಾಟಿಸಿದರೆ, ಮೂಡಬಿದ್ರೆ ಡಿವಿಶನ್ ಅಧ್ಯಕ್ಷರಾದ ರಿಯಾಝ್ ಸ‌ಅದಿ ಗುರುಪುರ ಸಂಘಟನಾ ತರ‌ಗತಿ ನಡೆಸಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಬಜ್ಪೆ ವರದಿ ವಾಚಿಸಿದರೆ, ಸೆಕ್ಟರ್ ಕೋಶಾಧಿಕಾರಿ ಶಾಕಿರ್ ತಾರಿಕಂಬ್ಳ ಲೆಕ್ಕ ಪತ್ರ ಮಂಡಿಸಿದರು.

ಡಿವಿಶನ್ ವೀಕ್ಷಕರಾದ ಉಬೈದುಲ್ಲಾಹ್ ಸಖಾಫಿ ಅಡ್ಡೂರು ರವರ ನಿರ್ದೇಶನದಂತೆ ಹಾಲಿ ಸಮಿತಿಯನ್ನು ವಿಸರ್ಜಿಸಿ, ನೂತನ ಸಮಿತಿಯನ್ನು ಆಯ್ಕೆ ಮಾಡಿದರು.

20201ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಉಮರುಲ್ ಫಾರೂಖ್ ಹನೀಫಿ ಬಜ್ಪೆ, ಪ್ರಧಾನ ಕಾರ್ಯದರ್ಶಿಯಾಗಿ ಶಾಹಿಕ್ ಕಿನ್ನಿಪದವು, ಕೋಶಾಧಿಕಾರಿಯಾಗಿ ಫೈಝಲ್ ಬಜ್ಪೆ, ಉಪಾಧ್ಯಕಷರುಗಳಾಗಿ ಸುಲೈಮಾನ್ ಬಜ್ಪೆ ಮತ್ತು ಶಾಕಿರ್ ತಾರಿಕಂಬ್ಳ, ಕಾರ್ಯದರ್ಶಿಗಳಾಗಿ ಝಾಫರ್ ಜರಿನಗರ, ರಮೀಝ್ ಸೌಹಾರ್ದನಗರ, ಸಿನಾನ್ ಕಿನ್ನಿಪದವು, ಅರ್ಶ್ ಬಜ್ಪೆ, ನೂರುದ್ದೀನ್ ತಾರಿಕಂಬ್ಳ ಮತ್ತು ಮಹಝ್ ಅಹ್ಮದ್ ಜರಿನಗರ ಹಾಗೂ ಸದಸ್ಯರುಗಳಾಗಿ ಇಸ್ಮಾಯಿಲ್ ಬಜ್ಪೆ, ಝುಹೈರ್ ಜರಿನಗರ, ಸಿದ್ದೀಖ್ ಬಜ್ಪೆ, ರಮೀಝ್ ತಾರಿಕಂಬ್ಳ, ಮಝರ್ ತಾರಿಕಂಬ್ಳ, ಆಖಿಬ್ ಜರಿನಗರ, ಶಫೀಕ್ ಕಿನ್ನಿಪದವು, ಸವಾಲ್ ತಾರಿಕಂಬ್ಳ, ಇಶಾನ್ ಕಿನ್ನಿಪದವು, ಜಾಬಿರ್ ಬಜ್ಪೆ, ಹಬೀಬ್ ಜದಿನಗ, ಇಮ್ತಿಯಾಝ್ ಪಡೀಲ್ ಮತ್ತು ರಿಹಾಬ್ ಪಡೀಲ್ ಹೀಗೆ 25 ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ.

ಈ ಸಂದರ್ಭದಲ್ಲಿ SჄS ಬಜ್ಪೆ ಸೆಂಟರ್ ನಾಯಕರಾದ ಅಬ್ದುಲ್ ಖಾದರ್ ಮುರ, ದ. ಕ ವೆಸ್ಟ್ ಝೋನ್ ಕಾರ್ಯದರ್ಶಿ ಝುಹೈರ್ ಮಾಸ್ಟರ್ ಜರಿನಗರ, ಮೂಡಬಿದ್ರೆ ಡಿವಿಶನ್ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಬಜ್ಪೆ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಸೆಕ್ಟರ್ ಹಾಲಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಬಜ್ಪೆ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಶಾಹಿಕ್ ಕಿನ್ನಿಪದವು ವಂದಿಸಿದರು.

ವರದಿ: ಸಿದ್ದೀಖ್ ಬಜ್ಪೆ

error: Content is protected !! Not allowed copy content from janadhvani.com