janadhvani

Kannada Online News Paper

ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವಾರ್ಷಿಕ ಕೌನ್ಸಿಲ್: ನೂತನ ಸಾರಥಿಗಳ ಆಯ್ಕೆ

ಕಿನ್ಯಾ :ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಕಾರ್ಯಕ್ರಮವು ಜ.10/2021 ಮಗ್ರಿಬ್ ನಮಾಝ್ ಬಳಿಕ ಸುನ್ನಿ ಸೆಂಟರ್ ಬೆಳರಿಂಗೆ ಕಿನ್ಯ ದಲ್ಲಿ ಸೆಕ್ಟರ್ ಉಪಾಧ್ಯಕ್ಷರಾದಂತಹ ನೌಫಲ್ ಅಹ್ಸನಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಎಸ್.ವೈ.ಎಸ್ ರಾಜ್ಯ ನಾಯಕರಾದಂತಹ ಕೆ.ಎಚ್.ಇಸ್ಮಾಯಿಲ್ ಸಅದಿ ಕಿನ್ಯರವರು ಉದ್ಘಾಟಿಸಿದರು. ಕೆ.ಸಿ.ಎಫ್. ಅಂತಾರಾಷ್ಟ್ರೀಯ ನಾಯಕರು, ಮಲ್ಜಅ ಸಂಸ್ಥೆಯ ಮ್ಯಾನೇಜರ್ ಆದ ಮೆಹಬೂಬ್ ಸಖಾಫಿ ಕಿನ್ಯ ರವರು ಸಂಘಟನಾ ತರಬೇತಿಯನ್ನು ನಡೆಸಿಕೊಟ್ಟರು.ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಕೂಡಾರ ರವರು ವಾರ್ಷಿಕ ವರದಿ ಮತ್ತು ಸೆಕ್ಟರ್ ಕೋಶಾಧಿಕಾರಿ ಸಫ್ವಾನ್ ಮೀಂಪ್ರಿ ರವರು ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿದರು.

ಸಭೆಯಲ್ಲಿ ಡಿವಿಷನ್ ಅಧ್ಯಕ್ಷರಾದಂತಹ ಇರ್ಫಾನ್ ನೂರಾನಿ, ಉಪಾಧ್ಯಕ್ಷರಾದ ಜುನೈದ್ ಸಖಾಫಿ ಬೆಳ್ಮ, ಎಸ್.ವೈ.ಎಸ್. ಜಿಲ್ಲಾ ನಾಯಕರಾದ ಇಸ್ಮಾಯಿಲ್ ಮೀಂಪ್ರಿ ಹಾಗೂ ಎಸ್.ಎಸ್.ಎಫ್. ಕಿನ್ಯ ಸೆಕ್ಟರ್ ಮಾಜಿ ಉಪಾಧ್ಯಕ್ಷರೂ, ಮಾಜಿ ಪ್ರಧಾನ ಕಾರ್ಯದರ್ಶಿಯೂ ಆದ ಫಯಾಝ್ ಕಿನ್ಯ, ಎಸ್.ವೈ.ಎಸ್ ಬೆಳರಿಂಗೆ ಬ್ರಾಂಚ್ ನಾಯಕರಾದ ವಿ.ಎ.ಮಹ್ಮೂದ್ ಮುಸ್ಲಿಯಾರ್ ಉಪಸ್ಥಿತರಿದ್ದರು.

ನೂತನ ಸಮಿತಿಯ ಅಧ್ಯಕ್ಷರಾಗಿ ನೌಫಲ್ ಅಹ್ಸನಿ , ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಕೂಡಾರ , ಕೋಶಾಧಿಕಾರಿಯಾಗಿ ನಿಝಾಮ್ ಕುತುಬಿ ನಗರ , ಉಪಾಧ್ಯಕ್ಷರುಗಳಾಗಿ ಷರೀಫ್ ಸಹದಿ ಬೆಳರಿಂಗೆ, ಅಯ್ಯೂಬ್ ಕುತುಬಿ ನಗರ ಹಾಗೂ ಕಾರ್ಯದರ್ಶಿಗಳಾಗಿ ಸಫ್ವಾನ್ ಮೀಂಪ್ರಿ, ನುಹ್ಮಾನ್ ಕೂಡಾರ, ಸಾದಿಕ್ ಕುರಿಯ, ಜಲೀಲ್ ಕುತುಬಿ ನಗರ ಆಯ್ಕೆಯಾದರು ಹಾಗೂ ಇತರ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಪ್ರಸ್ತುತ ಸಭೆಯಲ್ಲಿ ಮೇಲ್ವಿಚಾರಕರಾಗಿ ಡಿವಿಷನ್ ಸೆಲೆಕ್ಷನ್ ಆಫೀಸರ್ ಆದಂತಹ ಹಮೀದ್ ತಲಪಾಡಿ ಪ್ರಧಾನ ಕಾರ್ಯದರ್ಶಿ ಜಾಫರ್ ಯುಎಸ್ ಆಗಮಿಸಿದ್ದರು ಡಿವಿಷನ್ ಕ್ಯಾಂಪಸ್ ಸೆಕ್ರೆಟರಿ ಆಶಿಕ್ ಕಿನ್ಯ ಹಾಜರಿದ್ದರು. ಸಭೆಯ ಆರಂಭದಲ್ಲಿ ನೌಫಲ್ ಅಹ್ಸನಿ ರವರು ಸ್ವಾಗತಿಸಿ ನಿರೂಪಿಸಿದರು ಕೊನೆಯಲ್ಲಿ ಬಶೀರ್ ಕೂಡಾರ ರವರು ಧನ್ಯವಾದಗಳು ಹೇಳಿದರು.

error: Content is protected !! Not allowed copy content from janadhvani.com