ಹೂವಿನ ಹಡಗಲಿ : ಮಸ್‌ದರ್ ಎಜ್ಯು ಆಂಡ್ ಚಾರಿಟಿಯ ವತಿಯಿಂದ ಅನಾಥ ನಿರ್ಗತಿಕ ಮಕ್ಕಳಿಗೆ ಧಾರ್ಮಿಕ ಹಾಗೂ ಆಧುನಿಕ ಶಿಕ್ಷಣವನ್ನು ಉಚಿತವಾಗಿ ನೀಡುವ ತದ್‌ರೀಸ್ ನಝೀರ್ ನಗರದ ವಾಲ್ಮೀಕಿ ಭವನದ ಸಮೀಪ ನಡೆದ ಕಾರ್ಯಕ್ರಮದಲ್ಲಿ ಇಂದು ಚಾಲನೆ ನೀಡಲಾಯಿತು.
ಹೂವಿನ ಹಡಗಲಿ ಪುರಸಭೆ ಅಧ್ಯಕ್ಷರಾದ ಶ್ರೀ ವಾರದ ಗೌಸ್ ಮೊಹಿದ್ದೀನ್ ಸಾಹೇಬರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಾಜಿ ಸಚಿವ, ಹೂವಿನ ಹಡಗಲಿ ಶಾಸಕರಾದ ಪಿಟಿ ಪರಮೇಶ್ವರ್ ನಾಯ್ಕ್ ಉದ್ಘಾಟಿಸಿದರು.
ಸಂಸ್ಥೆಯ ಪ್ರಧಾನ ಕಛೇರಿಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷ, ಅಲ್ ಖಾದಿಸ ಕಾವಳಕಟ್ಟೆ ಇದರ ಚೇರ್ಮನ್ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಸಮಾರಂಭದಲ್ಲಿ ಮುಖ್ಯ ಭಾಷಣವನ್ನು ಮಾಡಿದರು.
ಮಸ್‌ದರ್ ಕಾರ್ಯಾಧ್ಯಕ್ಷ ಮೌಲಾನಾ ಅಬೂ ಸುಫ್ಯಾನ್ ಮದನಿ ಹಾಗೂ ಮೌಲಾನಾ ಮುಫ್ತಿ ರೋಶನ್ ಝಮೀರ್ ಹೊಸಪೇಟೆ ಭಾಷಣ ಮಾಡಿದರು.ಸಂಸ್ಥೆಯ ಪ್ರಾಂಶುಪಾಲರಾದ ಸಯ್ಯಿದ್ ಯೂಸುಫ್ ನವಾಝ್ ಅಲ್ ಹುಸೈನಿ ಉಡುಪಿ, ಮನ್ಸೂರ್ ಹುಸೈನ್ ಹೊಸಪೇಟೆ, ಇಬ್ರಾಹಿಂ ಪಟ್ಟಾಡಿ ಮೂಡುಬಿದಿರೆ, ಸಂಸ್ಥೆಯ ಜನರಲ್ ಮ್ಯಾನೇಜರ್ ಸಿದ್ದೀಕ್ ಸಖಾಫಿ, ಸಿನಾನ್ ಸಖಾಫಿ, ಅನಸ್ ಅಹ್ಸನಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.