ಮಾಣಿ : ರಹ್ಮಾನಿಯಾ ಜುಮಾ ಮಸೀದಿ ಮಾಣಿ ಇಲ್ಲಿನ ಖಾಝಿಯಾಗಿ ಝೈನುಲ್ ಉಲಮಾ ಮಾಣಿ ಉಸ್ತಾದ್ ರವರನ್ನು ಅಂಗೀಕರಿಸುವ ಸಮಾರಂಭದ ಸ್ವಾಗತ ಸಮಿತಿಯನ್ನು ಮಾಣಿ ಇರ್ಶಾದಿಯಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಚಿಸಲಾಯಿತು.
ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಸೂರಿಕುಮೇರು ಸ್ವಾಗತಿಸಿದರು,ಇಬ್ರಾಹಿಂ ಸಅದಿ ಮಾಣಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ಥಳೀಯ ಖತೀಬ್ ಡಿ ಎಸ್ ಅಬ್ದುರ್ರಹ್ಮಾನ್ ಮದನಿ “ಖಾಝಿಯ ಅನಿವಾರ್ಯತೆ ಮತ್ತು ಸ್ಥಳೀಯರ ಬಾಧ್ಯತೆ” ವಿಷಯದಲ್ಲಿ ಸಮಗ್ರ ತರಗತಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬದ್ರಿಯಾ ಜುಮಾ ಮಸೀದಿ ಸೂರಿಕುಮೇರು ಇದರ ಅಧ್ಯಕ್ಷರಾದ ಮೂಸಾ ಕರೀಂ ಮಾಣಿ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಅಝೀಝ್ ಮಾಣಿ, ಅಬ್ದುಲ್ ರಝಾಕ್ ಕೋರ್ಯ, ಶರೀಫ್ ಮಾಣಿ, ಇಬ್ರಾಹಿಂ ಎಸ್ ಸೂರಿಕುಮೇರು, ಅಬ್ದುಲ್ ಖಾದರ್ ಬರಿಮಾರು ಮುಂತಾದವರು ಉಪಸ್ಥಿತರಿದ್ದರು.
ನಂತರ ಖಾಝಿ ಸ್ವೀಕಾರ ಸಮಾರಂಭದ ಸ್ವಾಗತ ಸಮಿತಿಯನ್ನು ರಚಿಸಲಾಯಿತು,ಗೌರವಾಧ್ಯಕ್ಷರಾಗಿ ಅಬ್ದುಲ್ ರಝಾಕ್ ಮದನಿ ಸೂರಿಕುಮೇರು, ಅಧ್ಯಕ್ಷರಾಗಿ ಇಬ್ರಾಹಿಂ ಮಾಣಿ, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಅಝೀಝ್ ಮಾಣಿ ಮತ್ತು ಹನೀಫ್ ಸಂಕ ಸೂರಿಕುಮೇರು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ ಸೂರಿಕುಮೇರು, ಜೊತೆ ಕಾರ್ಯದರ್ಶಿಗಳಾಗಿ ಸಲೀಂ ಮಾಣಿ ಮತ್ತು ಹಂಝ ಸೂರಿಕುಮೇರು, ಕೋಶಾಧಿಕಾರಿಯಾಗಿ ಅಬ್ಬಾಸ್ ಮಾಣಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ಮಜೀದ್ ಮಾಣಿ,ಬದ್ರುದ್ದೀನ್ ಮಾಣಿ,ಇರ್ಶಾದ್ ಮಾಣಿ,ಹಮೀದ್ ಇನಾಮ್ ಮಾಣಿ,ಅಬ್ದುಲ್ ಬಶೀರ್ ಮಾಣಿ,ಹಮೀದ್ ಡ್ರೈವರ್ ಮಾಣಿ,ಹಸೈನಾರ್ ಮಾಣಿ,ಅಬ್ದು ಫತ್ತಾಹ್ ಮಾಣಿ,ಅಬ್ದುಲ್ ಲತೀಫ್ ಮಾಣಿ,ಅಝೀಂ ಸೂರಿಕುಮೇರು,ಹಾಜಿ ಯೂಸುಫ್ ಸೂರಿಕುಮೇರು,ಸುಲೈಮಾನ್ ಸೂರಿಕುಮೇರು,ಇಬ್ರಾಹಿಂ ಸಅದಿ ಮಾಣಿ,ಜಲೀಲ್ ಸಖಾಫಿ ಬರಿಮಾರು,ನಝೀರ್ ಅಮ್ಜದಿ ಮಾಣಿ,ಬಶೀರ್ ಝುಹ್ರಿ ಸೂರಿಕುಮೇರು ಮುಂತಾದವರನ್ನು ಆಯ್ಕೆ ಮಾಡಲಾಯಿತು. ಅಶ್ರಫ್ ಸಖಾಫಿ ಸೂರಿಕುಮೇರು ಧನ್ಯವಾದಗೈದರು.