janadhvani

Kannada Online News Paper

ವಿದ್ಯಾರ್ಥಿ ನಾಯಕರ ಮೇಲೆ ಪೋಲೀಸ್ ಗೂಂಡಾಗಿರಿ: ಶಿಸ್ತು ಕ್ರಮಕ್ಕೆ ಆಗ್ರಹ

ಪುತ್ತೂರು, ನ,26: ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಾಗಿರಿಸಿದ್ದ ಜಾಗದಲ್ಲಿ ಸೀಫುಡ್ ಯೋಜನೆ ಹಾಕಿರುವ ಸರ್ಕಾರದ ಕ್ರಮದ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪುತ್ತೂರು ನಗರ ಠಾಣೆಯ ಪೋಲಿಸ್ ಸಿಬ್ಬಂದಿ ಜಂಬೂರಾಜ್ ಮಹಾಜನ್ ಎಂಬವರು ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಗಳೊಂದಿಗೆ ಮತ್ತು ವಿದ್ಯಾರ್ಥಿ ನಾಯಕರೊಂದಿಗೆ ಅನುಚಿತವಾಗಿ ವರ್ತಿಸಿ ಅವರ ಮೇಲೆ ಕೈಹಾಕಿ ಗೂಂಡಾಗಿರಿ ನಡೆಸಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಕ್ರಮವನ್ನು ಪಿಎಫ್ಐ ಪುತ್ತೂರು ಜಿಲ್ಲಾ ಸಮಿತಿಯು ತೀವೃವಾಗಿ ಖಂಡಿಸುತ್ತದೆ,ಮತ್ತು ಆ ಪೋಲಿಸ್ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತದೆ.

ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ನೀಡಿದ ಹಕ್ಕಾಗಿರುತ್ತದೆ.
ಸಂವಿಧಾನವನ್ನು ರಕ್ಷಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದ ಪೋಲಿಸರೆ ಸಂವಿಧಾನ ವಿರೋಧಿ ಯಾಗಿ ವರ್ತಿಸಿರುವುದು ಖಂಡನಾರ್ಹವಾಗಿದೆ.

ಈ ರೀತಿಯಲ್ಲಿ ಶಾಂತಿಯುತ ವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಮತ್ತು ವಿದ್ಯಾರ್ಥಿ ನಾಯಕರ ಮೇಲೆ ಅನುಚಿತವಾಗಿ ವರ್ತಿಸಿದಲ್ಲದೆ ನಾಯಕರ ಮೇಲೆ ಕೈಹಾಕಿ ವಿದ್ಯಾರ್ಥಿಗಳನ್ನು ಕೆರಳಿಸಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿರುವ ಈ ಪೋಲಿಸ್ ಸಿಬ್ಬಂದಿಯ ಕೆಟ್ಟ ವರ್ತನೆಯನ್ನು ಯಾವ ಕಾರಣಕ್ಕೂ ಸಹಿಸಲು ಸಾದ್ಯವಿಲ್ಲ.
ಈ ಪೋಲಿಸ್ ಸಿಬ್ಬಂದಿಯು ಮುಸ್ಲಿಮರ ವಿರುದ್ಧ ಪೂರ್ವಗ್ರಹ ಪೀಡಿತ ವಾಗಿ ವರ್ತಿಸಿ ಸಂಘಪರಿವಾರ ನಾಯಕರನ್ನು ಮತ್ತು ಸ್ಥಳೀಯ ಶಾಸಕರನ್ನು ಮೆಚ್ಚಿಸಲು ನಡೆಸುವ ಷಡ್ಯಂತ್ರದಂತೆ ಬಾಸವಾಗುತ್ತಿದೆ.

ಈ ಪೋಲಿಸ್ ಸಿಬ್ಬಂದಿಯು ಈ ಹಿಂದೆಯು ಮುಸ್ಲಿಂ ಸಮುದಾಯದ ಜನರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಇದೇ ರೀತಿಯ ದುರ್ವತನೆಯನ್ನು ತೋರಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದರು.ಇಂತಹ ಪೋಲಿಸ್ ಸಿಬ್ಬಂದಿಗಳಿಂದ ಇಡೀ ಪೋಲಿಸ್ ಇಲಾಖೆಗೆ ಕಪ್ಪು ಚುಕ್ಕೆಯಾಗಿದೆ.

ಇತ್ತೀಚೆಗೆ ಚಾಮರಾಜನಗರದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುವ ನೆಪದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಸಂದರ್ಭದಲ್ಲಿ ಅಲ್ಲಿನ ಮಹಿಳಾ ಪೋಲಿಸ್ ಅಧಿಕಾರಿ ಜನಗಣ ಮಣ ರಾಷ್ಟ್ರಗೀತೆ ಹಾಡಿ ಅಶಾಂತಿಯನ್ನು ತಳಹದಿಗೆ ತರುವಲ್ಲಿ ಯಶಸ್ವಿಯಾಗಿರುತ್ತಾರೆ. ಇಂತಹ ಅಧಿಕಾರಿಗಳನ್ನು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ ಪುತ್ತೂರಿನ ಠಾಣೆಯ ಸಿಬ್ಬಂದಿಯಂತಹ ಪೋಲಿಸರು ಮಾದರಿ ಮಾಡಿಕೊಳ್ಳಬೇಕು

ವಿದ್ಯಾರ್ಥಿಗಳನ್ನು ಕೆರಳಿಸಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಜಂಬೂರಾಜ್ ಮಹಾಜನ್ ಎಂಬ ಪೋಲಿಸ್ ಸಿಬ್ಬಂದಿಯ ವಿರುದ್ಧ ರಾಜ್ಯ ಸರ್ಕಾರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು ಕಠಿಣ ಶಿಸ್ತು ಕ್ರಮ ಜರುಗಿಸಿ ಸೇವೆಯಿಂದ ಅಮಾನತು ಮಾಡಬೇಕೆಂದು ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿಯ ಕಾರ್ಯದರ್ಶಿ ಮುಸ್ತಫಾ ಪೈಚಾರ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ‌.

error: Content is protected !! Not allowed copy content from janadhvani.com