janadhvani

Kannada Online News Paper

ಫ್ರೆಂಡ್ಸ್ ಸರ್ಕಲ್ ಗುರುಪುರ ಕೈಕಂಬ: ಪ್ರಥಮ ಬಾರಿಗೆ ಯಶಸ್ವೀ ಹಿಜಾಮ ಶಿಬಿರ

ಮಂಗಳೂರು : ಗುರುಪುರ ಕೈಕಂಬ,ನವೆಂಬರ್ 24: ಫ್ರೆಂಡ್ಸ್ ಸರ್ಕಲ್ (ರಿ) ಗುರುಪುರ ಕೈಕಂಬ ಇವರ ವತಿಯಿಂದ, ಯೆನೆಪೋಯ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ನರಿಂಗಾನ ಮಂಜನಾಡಿ ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ಹಿಜಾಮ ಶಿಬಿರ ಕಾರ್ಯಕ್ರಮವು ದಿನಾಂಕ 24 ನವಂಬರ್ 2020 ನೇ ಮಂಗಳವಾರದಂದು ಗುರುಪುರ ಕೈಕಂಬದ ಮೆಗಾ ಪ್ಲಾಝ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಜನಾಬ್: ಮೆಗಾ ಅಬ್ದುಲ್ ಅಝೀಝ್ (ಅಧ್ಯಕ್ಷರು, ಫ್ರೆಂಡ್ಸ್ ಸರ್ಕಲ್ (ರಿ), ಗುರುಪುರ ಕೈಕಂಬ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಶ್ರೀಯುತ : ಸತೀಶ್ ಕುಮಾರ್ (ಬಾಮ ಆಯುರ್ವೇದಿಕ್ ಕ್ಲಿನಿಕ್ ಗಂಜಿಮಠ, ಕಾರ್ಯಕ್ರಮವನ್ನು ಉಧ್ಘಾಟಿಸಿದರು.

ಯಶಸ್ವಿಯಾಗಿ ನಡೆದ ಹಿಜಾಮ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು 33 ಪುರುಷರು ಮತ್ತು 18 ಮಹಿಳೆಯರು ಒಟ್ಟು 51 ಮಂದಿ ಯಶಸ್ವೀ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.ಹಿಜಾಮ ಶಿಬಿರ ಕಾರ್ಯಕ್ರಮದ ಯಶಸ್ವಿಗೆ ಯೆನೆಪೋಯ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ನರಿಂಗಾನ ಮಂಜನಾಡಿ ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ :- ಡಾ!ವಿದ್ಯಾ ( ಯೆನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ),ಅಬ್ದುಲ್ ರಝಕ್, ಜಿ.ಎಂ.ಇಂತಿಯಾಝ್ ಗಂಜಿಮಠ, ಪ್ರೇಮ್ ಕೈಕಂಬ, ಇಂತಿಯಾಝ್ ನಸ್ ನಸ್ ಗುರುಪುರ,
ಟಿ.ಪಿ. ಜಮಾಲುದ್ದೀನ್ ದಾರಿಮಿ ( ಖತೀಬರು, ದಾರುಸ್ಸಲಾಮ್ ಜುಮಾ ಮಸೀದಿ ಗುರುಪುರ)ಹಾಗೂ ಕಂದಾವರ ಜುಮಾ ಮಸೀದಿಯ ಖತೀಬರು
ಉಪಸ್ಥಿತರಿದ್ದರು.

ಮೆಗಾ ಅಬ್ದುಲ್ ಅಝೀಝ್ ಸ್ವಾಗತಿಸಿದ ಕಾರ್ಯಕ್ರಮನ್ನು ಅಝ್ವೀರ್ ಬಂಗುಳಗುಡ್ಡೆ ನಿರೂಪಿಸಿದರು.

ನಮ್ಮ ಸಂಸ್ಥೆಯ ಜೊತೆ ಕೈ ಜೋಡಿಸಿದ ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಗುರುಪುರ ಕೈಕಂಬ ಪರಿಸರದ ಜನಸ್ನೇಹಿ ನಾಗರಿಕರಿಗೂ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ದುಡಿದ ಎಲ್ಲಾ ಕಾರ್ಯಕರ್ತರಿಗೂ, ಮಾಧ್ಯಮ ಪ್ರತಿನಿಧಿಗಳಿಗೂ ಫ್ರೆಂಡ್ಸ್ ಸರ್ಕಲ್ (ರಿ) ಗುರುಪುರ ಕೈಕಂಬ ಕೃತಜ್ಞತೆಯನ್ನು ತಿಳಿಸಿದ್ದಾರೆ.

ವರದಿ:
ಮುಝಮ್ಮಿಲ್ ನೂಯಿ

error: Content is protected !! Not allowed copy content from janadhvani.com