janadhvani

Kannada Online News Paper

SDPI ಪಕ್ಷದ ವತಿಯಿಂದ ನಂದಾವರ ಕೋಟೆ ಮಸೀದಿ ಪರಿಸರ ಸ್ವಚ್ಛತೆ

ಬಂಟ್ವಾಳ: ಇಲ್ಲಿನ ನಂದಾವರ ಕೋಟೆ ಮಸೀದಿ ಪರಿಸರದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.
ಎಸ್.ಡಿ.ಪಿ.ಐ ನಂದಾವರ ಬ್ರಾಂಚ್ ಅಧ್ಯಕ್ಷ ಆಸೀಫ್ ನಂದಾವರ ಅವರ ಮುಂದಾಳತ್ವದಲ್ಲಿ ಜರುಗಿದ ಈ ಶ್ರಮದಾನದಲ್ಲಿ ಮಸೀದಿಯ ಸುತ್ತಮುತ್ತಲಿನ ಪ್ರದೇಶ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭದಲ್ಲಿ ಎಸ್ಡಿಪಿಐ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಶಮೀರ್ ನಂದಾವರ ಮತ್ತು ಹಲವಾರು ಕಾರ್ಯಕರ್ತರು ಈ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು ಹಾಗೂ ನಂದಾವರ ಕೇಂದ್ರ ಜುಮ್ಮಾ ಮಸೀದಿ ಕಾರ್ಯದರ್ಶಿಯಾದ ಇಮ್ರಾನ್ ಹೈವೇ ಶ್ರಮದಾನಿಗಳಿಗೆ ಚಹಾ ಮತ್ತು ಉಪಹಾರದ ವ್ಯವಸ್ಥೆ ಮಾಡಿ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದರು.

error: Content is protected !! Not allowed copy content from janadhvani.com