janadhvani

Kannada Online News Paper

ಮೋದಿಯವರಿಂದ ಭಾರತದಲ್ಲಿ ತ್ವರಿತ ಆರ್ಥಿಕ ಚೇತರಿಕೆ- ಮುಕೇಶ್‌ ಅಂಬಾನಿ

ಮುಂಬಯಿ: ದೇಶದ ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ಆರ್ಥಿಕ ಸುಧಾರಣಾ ಕ್ರಮಗಳು ಮುಂಬರುವ ವರ್ಷಗಳಲ್ಲಿ ದೇಶದ ತ್ವರಿತ ಆರ್ಥಿಕ ಬೆಳವಣಿಗೆಗೆ ಕಾರಣವಾಗಲಿದೆ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಹೇಳಿದ್ದಾರೆ.

ಪಂಡಿತ್‌ ದೀನ್‌ದಯಾಳ್‌ ಪೆಟ್ರೋಲಿಯಂ ಯೂನಿವರ್ಸಿಟಿಯ 8ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಆತ್ಮ ವಿಶ್ವಾಸ ದೇಶಕ್ಕೇ ಪ್ರೇರಣೆ ಕೊಟ್ಟಿದೆ ಎಂದರು.
“ಮೋದಿ ನಾಯಕತ್ವದಲ್ಲಿ ಭಾರತ ಮುಂಬರುವ ವರ್ಷಗಳಲ್ಲಿ ತ್ವರಿತವಾಗಿ ಆರ್ಥಿಕ ಚೇತರಿಕೆ ದಾಖಲಿಸುವ ವಿಶ್ವಾಸ ನನಗಿದೆ” ಎಂದು ಅಂಬಾನಿ ಹೇಳಿದರು.

ಇಂಧನ ವಲಯದಲ್ಲೂ ಭಾರಿ ಬದಲಾವಣೆ ಆಗುತ್ತಿದೆ. ಭಾರತ ಎರಡು ಉದ್ದೇಶ ಹೊಂದಬೇಕು. ಮೊದಲನೆಯದಾಗಿ ಆರ್ಥಿಕವಾಗಿ ಸೂಪರ್‌ ಪವರ್‌ ಆಗಬೇಕು. ಎರಡನೆಯದಾಗಿ ಹಸಿರು ಮತ್ತು ಸ್ವಚ್ಛ ಇಂಧನದಲ್ಲೂ ಅಗ್ರಗಣ್ಯವಾಗಿ ಹೊರಹೊಮ್ಮಬೇಕು ಎಂದು ಅಂಬಾನಿ ವಿವರಿಸಿದರು.

error: Content is protected !! Not allowed copy content from janadhvani.com