janadhvani

Kannada Online News Paper

ವಂದೇ ಭಾರತ್, ಬಬಲ್ ವ್ಯವಸ್ಥೆಯಡಿಯ ವಿಮಾನ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳು

ವಂದೇ ಭಾರತ್ ವಿಮಾನಗಳಲ್ಲಿ ಭಾರತಕ್ಕೆ ಬರಲಿಚ್ಛಿಸುವ ಪ್ರಯಾಣಿಕರು ಆಯಾ ದೇಶಗಳಲ್ಲಿರುವ ರಾಯಭಾರ ಕಚೇರಿಯಲ್ಲಿ ತಮ್ಮ ಹೆಸರು, ವಿವರಗಳನ್ನು ದಾಖಲಾತಿ ಮಾಡಿಕೊಳ್ಳಬೇಕು. ಆದರೆ ವಾಯುಸಾರಿಗೆ ಬಬಲ್ ವ್ಯವಸ್ಥೆಯಡಿ ಪ್ರಯಾಣಿಸುವವರಿಗೆ ಇಂತಹ ದಾಖಲಾತಿಯ ಅವಶ್ಯಕತೆಯಿರುವುದಿಲ್ಲ.

ನವದೆಹಲಿ:ವಂದೇ ಭಾರತ್ ಯೋಜನೆಯಡಿ ವಿಮಾನಗಳಲ್ಲಿ ಮತ್ತು ವಾಯುಸಾರಿಗೆ ಬಬಲ್ ವ್ಯವಸ್ಥೆಯಡಿ ಪ್ರಯಾಣಿಸುವ ಪ್ರಯಾಣಿಕರಿಗೆ ಗುಣಮಟ್ಟ ಕಾರ್ಯನಿರ್ವಹಣೆ ಶಿಷ್ಠಾಚಾರ(ಎಸ್ ಒಪಿ)ಗಳನ್ನು ನಿಗದಿಪಡಿಸಿ ಕೇಂದ್ರ ಗೃಹ ಸಚಿವಾಲಯ ಅನ್ ಲಾಕ್ 0.3 ಯಡಿ ಮಾರ್ಗಸೂಚಿಗಳನ್ನು ಹೊರಡಿಸಿದೆ.

ವಂದೇ ಭಾರತ್ ವಿಮಾನಗಳಲ್ಲಿ ಭಾರತಕ್ಕೆ ಬರಲಿಚ್ಛಿಸುವ ಪ್ರಯಾಣಿಕರು ಆಯಾ ದೇಶಗಳಲ್ಲಿರುವ ರಾಯಭಾರ ಕಚೇರಿಯಲ್ಲಿ ತಮ್ಮ ಹೆಸರು, ವಿವರಗಳನ್ನು ದಾಖಲಾತಿ ಮಾಡಿಕೊಳ್ಳಬೇಕು. ಆದರೆ ವಾಯುಸಾರಿಗೆ ಬಬಲ್ ವ್ಯವಸ್ಥೆಯಡಿ ಪ್ರಯಾಣಿಸುವವರಿಗೆ ಇಂತಹ ದಾಖಲಾತಿಯ ಅವಶ್ಯಕತೆಯಿರುವುದಿಲ್ಲ. ಕಮರ್ಷಿಯಲ್ ವಿಮಾನಗಳಲ್ಲಿ ಬರುವ ಭಾರತೀಯರಿಗೆ ವಿಮಾನಯಾನ ಸಚಿವಾಲಯ ಮತ್ತು ಹಡಗು ಮೂಲಕ ಪ್ರಯಾಣಿಸುವವರಿಗೆ ಮಿಲಿಟರಿ ವ್ಯವಹಾರಗಳ ಇಲಾಖೆ ಮತ್ತು ನೌಕಾ ಸಮೂಹ ಸಚಿವಾಲಯ ಅನುಮತಿ ನೀಡುತ್ತದೆ.ಆಯಾ ಇಲಾಖೆಗಳು ಪ್ರಯಾಣಿಕರಿಗೆ ಮಾರ್ಗಸೂಚಿಗಳನ್ನು ಹೊರಡಿಸುತ್ತದೆ.

ಭಾರತಕ್ಕೆ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಕತಾರ್, ಮಾಲ್ಡೀವ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಗಳಿಂದ ವಿಮಾನ ಅಥವಾ ವಾಯುಸಂಚಾರ ವ್ಯವಸ್ಥೆಯಿದ್ದು ಇನ್ನೂ 13 ದೇಶಗಳೊಂದಿಗೆ ವಾಯುಸಂಚಾರ ಆರಂಭಿಸಲು ಮಾತುಕತೆಗಳು ನಡೆಯುತ್ತಿವೆ.

ದೇಶಾದ್ಯಂತ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಆದ ನಂತರ ವಂದೇ ಭಾರತ್ ವಿಮಾನ ಯೋಜನೆಯಡಿ ಮೇ 6ರಿಂದ ವಿಮಾನಗಳ ಹಾರಾಟವನ್ನು ಆರಂಭಿಸಲಾಯಿತು.ವಿಮಾನ ಮತ್ತು ಹಡಗು ಸಂಚಾರಕ್ಕೆ ಮೊದಲು ಸಿಬ್ಬಂದಿಯನ್ನು ಪರೀಕ್ಷೆಗೊಳಪಡಿಸಿದಾಗ ಅವರಲ್ಲಿ ಕೋವಿಡ್-19 ನೆಗೆಟಿವ್ ಬಂದರೆ ಮಾತ್ರ ಅವಕಾಶ ನೀಡಲಾಗುತ್ತದೆ.

ಎಸ್ ಒಪಿ ಏನು ಹೇಳುತ್ತದೆ?:ವಲಸೆ ಕಾರ್ಮಿಕರು ಮತ್ತು ಕೆಲಸದಿಂದ ವಜಾಗೊಳಿಸಲ್ಪಟ್ಟ ಕಾರ್ಮಿಕರು, ಅಲ್ಪಾವಧಿಯ ವೀಸಾ ಹೊಂದಿರುವವರು, ವೈದ್ಯಕೀಯ ತುರ್ತುಸ್ಥಿತಿ ಹೊಂದಿರುವವರು / ಗರ್ಭಿಣಿಯರು, ವೃದ್ಧರು, ವಿದ್ಯಾರ್ಥಿಗಳು ಅಥವಾ ಇತರ ಪರಿಸ್ಥಿತಿಗಳಲ್ಲಿ ಭಾರತಕ್ಕೆ ಮರಳಲು ತೀರಾ ಅಗತ್ಯವಿರುವವರಿಗೆ ವಂದೇ ಭಾರತ್ ವಿಮಾನದಲ್ಲಿ ಬರಲು ಆದ್ಯತೆ ನೀಡಲಾಗುತ್ತದೆ. ಪ್ರಯಾಣದ ವೆಚ್ಚವನ್ನೇ ಪ್ರಯಾಣಿಕರೇ ಭರಿಸಬೇಕು.

ವಂದೇ ಭಾರತ್ ವಿಮಾನದಲ್ಲಿ ಬರಲು ಪಡೆದ ದಾಖಲಾತಿಗಳ ಆಧಾರದ ಮೇಲೆ ಹೆಸರು, ವಯಸ್ಸು, ಲಿಂಗ, ಮೊಬೈಲ್ ಫೋನ್ ಸಂಖ್ಯೆ, ವಾಸಸ್ಥಳ, ಅಂತಿಮವಾಗಿ ಭಾರತದಲ್ಲಿ ತಲುಪುವ ಸ್ಥಳ ಮುಂತಾದ ವಿವರಗಳನ್ನು ಒಳಗೊಂಡಂತೆ ಎಂಇಎ ಅಂತಹ ಎಲ್ಲ ಪ್ರಯಾಣಿಕರ ವಿಮಾನ ಅಥವಾ ಹಡಗು ಪ್ರಯಾಣದ ಅಂಕಿಅಂಶವನ್ನು ಸಿದ್ಧಪಡಿಸುತ್ತದೆ.ಈ ಅಂಕಿಅಂಶವನ್ನು ವಿದೇಶಾಂಗ ವ್ಯವಹಾರಗಳ ಇಲಾಖೆ ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಮೊದಲೇ ಹಂಚಿಕೊಳ್ಳುತ್ತದೆ.

error: Content is protected !! Not allowed copy content from janadhvani.com