janadhvani

Kannada Online News Paper

ಇಡ್ಕಿದು:ಕೋಲ್ಪೆ ಜುಮಾ ಮಸೀದಿ ವಠಾರದಲ್ಲಿ ಸ್ವಾತಂತ್ರೋತ್ಸವ

ಕೋಲ್ಪೆ: ಇಲ್ಲಿನ ಬ‌ದ್ರಿಯ‌ ಜುಮಾ ಮಸ್ಜಿದ್ ಹಾಗೂ ಬ‌ದ್ರಿಯ‌ ಮದರಸ ವಠಾರದಲ್ಲಿ ಸ್ವಾತಂತ್ರೋತ್ಸವ ದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಮಸೀದಿ ಅಧ್ಯಕ್ಷರಾದ ಜನಾಬ್: ಕೆ.ಎಸ್ ಶೇಕ‌ಬ್ಬ‌ ಕೋಲ್ಪೆ ಧ್ವಜಾರೋಹಣ ನೆರವೇರಿಸಿದರು , ಸ್ಥಳೀಯ ಜಮಾತ್ ಖತೀಬರಾದ ಬಹು| ನಿಸಾರ್ ಸಖಾಫಿ ಅಲ್ ಅಝ್ಹ‌ರಿ ಮಾತನಾಡಿ ಪರಿಶುದ್ದ ‘ಕುರಾನ್ ಸೂರತ್ ಯೂಸುಫ್ ಆಯತಿನಲ್ಲಿ ಅಲ್ಹಹನು ಹೇಳುತ್ತಾನೆ ನಿಮ್ಮ ಪೂರ್ವಜರ ಚರಿತ್ರೆಯಿಂದ ನಿಮಗೆ ಒಳ್ಳೆಯ ಪಾಠ ಇದೇ ಅದು ನಿಮ್ಮಲ್ಲಿ ಒಳ್ಳೆಯ ಜನರಿಗೆ ಅದರ ಉಪಯೋಗ ಇದೆ ಎಂದು ಹೇಳುತ್ತ ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ಮಹತ್ಮರನ್ನು ನೆನಪಿಸಿ ಅವರು ನಮ್ಮ ದೇಶಕ್ಕೆ ಕೊಟ್ಟಂತಃ ಸಂವಿಧಾನದ ಪೀಠಿಕೆಯನ್ನು ವಿವರಿಸಿ ಸ್ವಾತಂತ್ರ್ಯ ದಿನಾಚಣೆಯ ಸಂದೇಶವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಜಮಾಅತ್ ಕಮಿಟಿ ಕೋಶಾಧಿಕಾರಿ ಕಲಂದರ್ ಕೋಲ್ಪೆ, ಫಾರೂಕ್ ಬ‌ರೆಪ್ಪಾಡಿ. ಜೊತೆ ಕಾರ್ಯದರ್ಶಿ ಆಸಿಫ್ ಕೋಲ್ಪೆ, ಹಾಗೂ ಸರ್ವ ಜಮಾಅತ್ ಬಾಂಧವರು ಭಾಗವಹಿಸಿದ್ದರು. ಜಮತಿನ ಸದರ್ ಉಸ್ತಾದ್ ಉಮ‌ರ್ ಮುಸ್ಲಿಯಾರ್ ಸ್ವಾಗತಿಸಿ ನೌಷ‌ದ್ ಕೋಲ್ಪೆ ವಂದಿಸಿದರು.

error: Content is protected !! Not allowed copy content from janadhvani.com