janadhvani

Kannada Online News Paper

ಕುಪ್ಪೆಪದವು: 74ನೇ ಸ್ವಾತಂತ್ರ್ಯೋತ್ಸವ ಆಚರಣೆ ಮತ್ತು ಆಝಾದಿ ಸಂದೇಶ

ಕುಪ್ಪೆಪದವು: ಬದ್ರಿಯಾ ಜುಮಾ ಮಸ್ಜಿದ್ ಮತ್ತು ಮದೀನತುಲ್ ಉಲೂಮ್ ಮದ್ರಸ ಕುಪ್ಪೆಪದವು ಇದರ ಆಶ್ರಯದಲ್ಲಿ 74ನೇ ಸ್ವಾತಂತ್ರ್ಯೋತ್ಸವ ಹಾಗೂ ಆಝಾದಿ ಸಂದೇಶವು ಜಮಾ‌ಅತ್ ಅಧ್ಯಕ್ಷರಾದ ಕೆ,ಎ ಉಮರಬ್ಬರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸ್ಥಳೀಯ ಖತೀಬರಾದ ಅಬೂ ಝೈದ್ ಶಾಫಿ ಮದನಿ ಕರಾಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ “ಜಾತಿ,ಧರ್ಮಗಳ ಹೆಸರಿನಲ್ಲಿ ಕಲಹ ಕೋಲಾಹಲವಿಲ್ಲದ ಸೌಹಾರ್ದಯುತವಾದ ಸುಂದರ ದೇಶವಾಗಿ ನಮ್ಮ ಭಾರತ ಸದಾ ಕಂಗೊಳಿಸುತ್ತಿರಲಿ ಎಂದು ಹಾರೈಸುತ್ತಾ ನಾವೆಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಿ ಬದುಕೋಣ.” ಎಂದು ಆಝಾದಿ ಸಂದೇಶ ನೀಡಿದರು.

ಸಹಾಯಕ ಖತೀಬರಾದ ಉಮರುಲ್ ಫಾರೂಖ್ ಸಖಾಫಿ ಅಲ್ ಹಿಮಮಿ ಪೆರಾಲ, ಅಝೀಮ್ ಮುಸ್ಲಿಯಾರ್ ಕುಪ್ಪೆಪದವು, ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಖ್ ಆಚರಿಜೋರ,ಕೋಶಾಧಿಕಾರಿ ಉಸ್ಮಾನ್ ಮುರ, ಆಡಳಿತ ಸಮಿತಿ ಸದಸ್ಯರಾದ ಮುಹಮ್ಮದ್ ಶೆರೀಫ್ ಕಜೆ, ಇಸ್ಮಾಯಿಲ್ ಶೆರೀಫ್,ಮಾಜಿ ಅಧ್ಯಕ್ಷರಾದ ಡಿಪಿ ಹಮ್ಮಬ್ಬ , ಮಾಜಿ ಪ್ರಧಾನ ಕಾರ್ಯದರ್ಶಿ ಆದಂ ಜವಳಿ, ಮಸೀದಿ ಪುನರ್ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ದರ್ಖಾಸ್ ,ಮದೀನತುಲ್ ಉಲೂಮ್ ಮದ್ರಸ ವಿದ್ಯಾರ್ಥಿ ಒಕ್ಕೂಟ SBS ಇದರ ಅಧ್ಯಕ್ಷರಾದ ಮುಹಮ್ಮದ್ ಸುಹೈಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com