janadhvani

Kannada Online News Paper

ಸವಣಾಲಿನಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣ

ಬದ್ರಿಯಾ ಜುಮಾ ಮಸೀದಿ ಸವಣಾಲು ಇದರ ಆಶ್ರಯದಲ್ಲಿ ಭವ್ಯ ಭಾರತದ 74 ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಮದರಸ ವಠಾರದಲ್ಲಿ ನಡೆಯಿತು.

ಮಸ್ಜಿದ್ ಅಧ್ಯಕ್ಷರಾದ ಯಾಕೂಬ್ ಮುಸ್ಲಿಯಾರ್ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಖತೀಬ್ ಉಸ್ತಾದ್ ರಿಯಾಝ್ ಸಅದಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಅಗಲಿದ ಮಹಾತ್ಮರಿಗೆ ಪ್ರಾರ್ಥನೆ ಗೈದರು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ Dರಫೀಕ್, ಸಲಹಾ ಸಮೀತಿ ಸದಸ್ಯರಾದ D ಮುಹಮ್ಮದ್, ಕೋಶಾಧಿಕಾರಿ S.Aಸಮದ್ ಊರಿನ ಗಣ್ಯರು ಮತ್ತು ಮದರಸದ ಪುಟಾಣಿ ಮಕ್ಕಳು ಮೊದಲಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com