janadhvani

Kannada Online News Paper

ವಿಶ್ವಾಸಮತ ಗೆದ್ದ ರಾಜಸ್ಥಾನ ಕಾಂಗ್ರೆಸ್ ಸರ್ಕಾರ- ಬಿಜೆಪಿಗೆ ಮುಖಭಂಗ

ರಾಜಸ್ಥಾನ: ಶುಕ್ರವಾರ ನಡೆದ ರಾಜಸ್ಥಾನದ ವಿಶೇಷ ಅಧಿವೇಶನದಲ್ಲಿ ಸಿಎಂ ಅಶೋಕ್ ಗೆಹ್ಲೂಟ್ ಸರ್ಕಾರ ವಿಶ್ವಾಸ ಮತ ಯಾಚನೆ ಮಾಡಿದ್ದು, ಈ ವಿಶ್ವಾಸ ಮತಯಾಚನೆಯಲ್ಲಿ ಶಾಸಕರ ವಿಶ್ವಾಸ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಬಳಿಕ ಮಾತನಾಡಿದ ಸಿಎಂ ಅಶೋಕ್ ಗೆಹ್ಲೂಟ್ ಅವರು, ಜನ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷ ರಾಜಸ್ಥಾನದಲ್ಲಿ ಸರ್ಕಾರ ರಚನೆ ಮಾಡಿದೆ. ಆದರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತನ್ನ ಎದುರಾಳಿಗಳನ್ನು ಹಣಿಯಲು ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಶಾಸಕರ ವಿಶ್ವಾಸ ಗೆದ್ದ ಗೆಹ್ಲೂಟ್ ಗೆ 125 ಮತ
ಇನ್ನು ವಿಶ್ವಾಸ ಮತಯಾಚನೆಯಲ್ಲಿ ಸಿಎಂ ಅಶೋಕ್ ಗೆಹ್ಲೂಟ್ ಪರವಾಗಿ ಒಟ್ಟು 125 ಶಾಸಕರು ಮತ ಚಲಾಯಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜಸ್ಛಾನದ ಒಟ್ಟಾರೆ 200 ಸದಸ್ಯ ಬಲದ ಪೈಕಿ 125 ಶಾಸಕರು ಗೆಹ್ಲೂಟ್ ಪರ ಮತ ಚಲಾಯಿಸಿದ್ದಾರೆ.

ರಾಜಸ್ಥಾನ ವಿಧಾನಸಭೆ: ಸಂಖ್ಯಾ ಬಲ (200)
ಆಡಳಿತರೂಢ ಪಕ್ಷ
ಕಾಂಗ್ರೆಸ್ -107 (ಪೈಲಟ್ ಬೆಂಬಲಿಗರು-19, ಬಿಎಸ್‌ಪಿ- 6)
ಆರ್‌ಎಲ್‌ಡಿ -1
ಸ್ವತಂತ್ರರು- 13
ಬಿಟಿಪಿ-2
ಎಡಪಕ್ಷ- 2
ಒಟ್ಟು- 125

ವಿರೋಧಪಕ್ಷ
ಬಿಜೆಪಿ-72
ಆರ್‌ಎಲ್‌ಪಿ-3

ರಾಜಸ್ಥಾನ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಲ್ ಅವರು ಸರ್ಕಾರದ ಪರ ವಿಶ್ವಾಸ ಮಂಡನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ರಾಜಸ್ಥಾನದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಶಾಸಕರ ಕುದುರೆ ವ್ಯಾಪಾರ ಮಾಡಿ ಸರ್ಕಾರ ಉರುಳಿಸಿ ತನ್ನ ಸರ್ಕಾರ ರಚನೆಗೆ ಮುಂದಾಗಿದೆ.

ಮಧ್ಯ ಪ್ರದೇಶ, ಮಣಿಪುರ ಮತ್ತು ಗೋವಾದಲ್ಲಿ ಕೇಂದ್ರ ಸರ್ಕಾರ ಇದೇ ಕೆಲಸ ಮಾಡಿತ್ತು. ರಾಜಸ್ಥಾನದಲ್ಲೂ ಇದೇ ಕಾರ್ಯಕ್ಕೆ ಮುಂದಾಗಿದೆ. ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಸರ್ಕಾರವನ್ನು ಉರುಳಿಸುವ ಕಾರ್ಯಕ್ಕೆ ಮುಂದಾಗಿದೆ. ಆದರೆ ಈ ಕಾರ್ಯದಲ್ಲಿ ಬಿಜೆಪಿ ಸಫಲವಾಗಿಲ್ಲ. ರಾಜಸ್ಥಾನವನ್ನು ಸೋಲಿಸಲು ಬಂದ ರಾಜ ಅಕ್ಪರ್ ಮೇವಾಡದ ಒಗ್ಗಟ್ಟಿನ ಶಕ್ತಿಯಿಂದಾಗಿ ಮೊದಲ ಬಾರಿಗೆ ಸೋಲಿನ ಕಂಡಿದ್ದ ಎಂದು ಹೇಳಿದರು.

error: Content is protected !! Not allowed copy content from janadhvani.com