janadhvani

Kannada Online News Paper

ಅಲೋಪಥಿಕ್ ಮಾಫಿಯಾಗೆ ಮಣಿದ, ಭ್ರಷ್ಟ ರಾಜ್ಯ ಸರ್ಕಾರ- ಪ್ರಮೋದ್ ಮುತಾಲಿಕ್

ವಿಜಯಪುರ: ಸರಕಾರ ಅಲೋಪಥಿಕ್ ಮಾಫಿಯಾ ಮತ್ತು ಲಾಬಿಗೆ ಮಣಿದಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ‌ ಪ್ರಮೋದ ಮುತಾಲಿಕ್ ರಾಜ್ಯ ಸರ್ಕಾರ ವಿರುದ್ಧ ಆರೋಪಿಸಿದ್ದಾರೆ. ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ನಿಯಂತ್ರಣದ ಹೆಸರಿನಲ್ಲಿ ಸರಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹರಿಹಾಯ್ದರು.

ಕೊರೋನಾ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಸುಲಿಗೆ ಮಾಡುತ್ತಿವೆ. ಕೆಲವರು ಎಡ್ಮಿಷನ್ ತೆಗೆದುಕೊಳ್ಳುತ್ತಿಲ್ಲ. ರೂ.3 ಲಕ್ಷ ಸುಲಿಗೆ ಮಾಡುತ್ತಿವೆ. ಆದರೆ, ಡಾ. ಗಿರಿದರ ಕಜೆ ಕೊರೋನಾ ರೋಗಿಗಳನ್ನು ಗುಣಮುಖರನ್ನಾಗಿ ಮಾಡಿದ್ದಾರೆ. 9 ದಿನಗಳಲ್ಲಿ ಕೊರೊನಾ ರೋಗಿಗಗಳನ್ನು ಗುಣಪಡಿಸಿದ್ದಾರೆ.

ಅಲ್ಲದೇ, ಕೇವಲ‌ ರೂ.300 ವೆಚ್ಚದಲ್ಲಿ ಚಿಕಿತ್ಸೆ ನೀಡಿದ್ದಾರೆ. ಈಗಾಗಲೇ 70 ಲಕ್ಷ ಮಾತ್ರೆಗಳನ್ನು ಸರಕಾರಕ್ಕೆ ನೀಡಿದ್ದಾರೆ. ಆದರೆ, ಅವರಿಗೆ ಸರಕಾರ ಹಣ ನೀಡಿಲ್ಲ . ಡಾ. ಗಿರಿಧರ ಕಜೆ ಹೊಸ ಔಷಧಿಯನ್ನೇನೂ ಕಂಡು ಹಿಡಿದಿಲ್ಲ. 20 ವರ್ಷಗಳಿಂದ ಅವರು ತಾವು ನೀಡುತ್ತಿರುವ ಔಷಧಿಯನ್ನೇ ನೀಡಿ ಕೊರೊನಾ ರೋಗಿಗಳನ್ನು ಗುಣಪಡಿಸಿದ್ದಾರೆ. ಆದರೆ, ಸರಕಾರ ಇವರಿಗೆ ಈವರೆಗೆ ಹಣ ಬಿಡುಗಡೆ ಮಾಡಿಲ್ಲ. ‌ತಮ್ಮ ಔಷಧಿಯ ಫಾರ್ಮುಲಾವನ್ನು ಉಚಿತವಾಗಿ ನೀಡುವುದಾಗಿ ಹೇಳಿದರೂ ಸರಕಾರ ಇವರಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಮುತಾಲಿಕ್ ಬೇಸರ ವ್ಯಕ್ತಪಡಿಸಿದರು.

ಪ್ರತಿಪಕ್ಷಗಳು ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತನಿಖೆ ನಡೆಸುವ ಬದಲು ಕೇವಲ ಹೇಳಿಕೆಗಳನ್ನು ನೀಡಿ ಮೌನವಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡುವುದು ಪಾಪದ ಕೆಲಸ ಎಂದೂ ಶ್ರೀರಾಮ ಸೇನೆ ಸಂಸ್ಥಾಪಕರೂ ಆದ ಅವರು ಆರೋಪಿಸಿದರು.

ಇದೇ ವೇಳೆ, ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಿಷೇಧಿಸಬೇಕು ಎಂದು ಆಗ್ರಹಿಸಿರುವ ಪ್ರಮೋದ ಮುತಾಲಿಕ್, ರಾಮ ಮಂದಿರ ನಿರ್ಮಾಣ ವಿರೋಧಿಸುವವರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದು‌ ಒತ್ತಾಯಿಸಿದ್ದಾರೆ.

error: Content is protected !! Not allowed copy content from janadhvani.com