janadhvani

Kannada Online News Paper

ಲಾಕ್ ಡೌನ್ ಮದ್ಯೆಯೇ ಮಾನವೀಯ ಸೇವೆ ನೀಡುತ್ತಿರುವ ಟೀಮ್ ವಿಖಾಯ ರಕ್ತದಾನಿ ಬಳಗ

ಮಂಗಳೂರು: ನಗರದ ಫಾದರ್ ಮುಲ್ಲರ್ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಮೌರಿಸ್ ಪ್ರಕಾಶ್ ಡಿ’ ಸೋಜ ಎಂಬವರಿಗೆ ಬೇಕಾದ 6 ಯುನಿಟ್ ರಕ್ತವನ್ನು ವಿಖಾಯ ರಕ್ತದಾನಿ ಬಳಗದ ಮಂಗಳೂರು ವಲಯದ ಸದಸ್ಯರೂ SKSSF ಫರಂಗಿಪೇಟೆ ಶಾಖೆ ಸಕ್ರಿಯ ಸದಸ್ಯರಾದ ಸಲೀಂ, ಕುಂಪನಮಜಲ್ ಶಾಖೆಯ ಶಾಕಿರ್ ಮತ್ತು ಕಣ್ಣೂರ್ ಬಲ್ಲೂರುಗುಡ್ಡೆ ಶಾಖೆ ಸದಸ್ಯರಾದ ಆಸಿಫ್, ಮತ್ತು ಸಿರಾಜ್, ಬೆಂಗರೆ ಶಾಖೆಯ ಅಲ್ಮಾಝ್ ಮಲಿಕ್, ಕುದ್ರೋಳಿ ಶಾಖೆಯ ಅರ್ಬಾಝ್ ರವರು ಇಂದು ದಾನ ಮಾಡಿದರು.

ಹಾಗೂ ಮಂಗಳೂರು ಜ್ಯೋತಿ KMC ಆಸ್ಪತ್ರೆಯಲ್ಲಿ ಮೋಹಿನಿ ಎಂಬವರ ಮಗುವಿಗೆ ಬೇಕಾದ O ನೆಗೆಟಿವ್ ರಕ್ತವನ್ನು ವಿಖಾಯ ರಕ್ತದಾನಿ ಬಳಗದ ಸದಸ್ಯರೂ SKSSF‌‌ ವಳಚ್ಚಿಲ್ ಪದವು ಶಾಖಾ ಸಕ್ರಿಯ ಸದಸ್ಯರಾದ ರಮೀಝ್ ದಾನ ಮಾಡಿ ಮಾನವೀಯ ಸೇವೆ ನೀಡಿದರು.

ತುರ್ತು ಸಂದರ್ಭಗಳಲ್ಲಿ ಮಾನವೀಯ ಸೇವೆಯಲ್ಲಿ ನಿರತರಾದ SKSSF ವಿಖಾಯ ರಕ್ತದಾನಿ ಬಳಗದ ಕಾರ್ಯವೈಖರಿ ಸಮಾಜದಲ್ಲಿ ಪ್ರಶಂಸಲ್ಪಡುತ್ತಿದೆ.

ಇಂದಿನ ಎಲ್ಲ ರಕ್ತದಾನಿಗಳಿಗೂ ದ,ಕ,ಜಿಲ್ಲಾ SKSSF ವಿಖಾಯ ರಕ್ತದಾನಿ ಬಳಗದ ಉಸ್ತುವಾರಿ ತಾಜುದ್ದೀನ್ ಟರ್ಲಿ ಅಭಿನಂದನೆಗಳನ್ನು ಸಲ್ಲಿಸಿದ್ದು,ಜಿಲ್ಲೆಯ ಯಾವ ಬಾಗದಲ್ಲಿಯೂ ತುರ್ತು ರಕ್ತದ ಅವಶ್ಯಕತೆ ಬಂದಲ್ಲಿ ಸ್ಥಳೀಯ SKSSF ವಿಖಾಯ ಸದಸ್ಯರನ್ನು ಸಂಪರ್ಕಿಸಲು ತಾಜುದ್ದೀನ್ ಟರ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕ ಸಂಖ್ಯೆ – 96869 47071

error: Content is protected !! Not allowed copy content from janadhvani.com