ಬೆಂಗಳೂರು: ಕೊರೋನಾ ಮೂರನೇ ಅಲೆ, ಓಮಿಕ್ರಾನ್ ಬಗ್ಗೆ ಆಲಕ್ಷ್ಯ ಬೇಡ, ಕೆಲವರಿಗೆ ಸೋಂಕಿನ ತೀವ್ರತೆಯಿದೆ, ಯಾರೂ ಕೂಡ ನಿರ್ಲಕ್ಷ್ಯ, ಉದಾಸೀನ ಮಾಡಬೇಡಿ, ಜನರ ಮುಂದೆ ಇರುವಾಗ, ಹೊರಗೆ ಓಡಾಡುವಾಗ, ಕಚೇರಿಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸ್ ಮಾಡಿಕೊಳ್ಳಿ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ಬೂಸ್ಟರ್ ಡೋಸ್ ಪಡೆಯಲು ಅರ್ಹತೆ ಇರುವವರೆಲ್ಲರೂ, ಎರಡನೇ ಡೋಸ್ ಪಡೆಯುವವರು ಕೂಡ ಕಡ್ಡಾಯವಾಗಿ ಪಡೆಯಿರಿ. ಜನರು ಆತಂಕಪಡುವ ರೀತಿಯಲ್ಲಿ ಸರ್ಕಾರದ ಪ್ರತಿನಿಧಿಗಳು ಹೇಳಿಕೆಗಳನ್ನು ನೀಡುವುದಿಲ್ಲ. ಜನರು ಸ್ವಯಂಪ್ರೇರಣಿಯಿಂದ ಕೊರೋನಾ ಹತ್ತಿಕ್ಕಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಎರಡು ವರ್ಷಗಳಾಗುತ್ತಾ ಬಂದಿರುವಾಗ ಕೊರೋನಾ ನಿಯಂತ್ರಣಕ್ಕೆ ಏನೆಲ್ಲಾ ಮಾಡಬೇಕು ಎಂದು ಪಾಠ ಕಲಿತಿದ್ದೇವೆ.
ಲಾಕ್ ಡೌನ್ ಹೇರಿಕೆ ಸರಿಯಲ್ಲ: ಈಗಾಗಲೇ ಎರಡು ಬಾರಿ ಲಾಕ್ ಡೌನ್ ಹೇರಿಕೆ ಮಾಡಲಾಗಿತ್ತು. ಆಗ ಜನರಿಗೆ ಆಗುವ ಸಮಸ್ಯೆಗಳ ಬಗ್ಗೆ ನಮಗೆ ಅರಿವಾಗಿದೆ, ಈಗಾಗಲೇ ನಿನ್ನೆ ಪ್ರಧಾನ ಮಂತ್ರಿ ಮೋದಿಯವರು ಮುಖ್ಯಮಂತ್ರಿಗಳ ಜೊತೆ ಸಂವಾದ ಮಾಡುವ ಸಂದರ್ಭದಲ್ಲಿ ಜನರಿಗೆ ಆರ್ಥಿಕ ನಷ್ಟವಾಗದ ರೀತಿಯಲ್ಲಿ ಜಾಗೃತೆ ವಹಿಸಬೇಕೆಂದು ಹೇಳಿದ್ದಾರೆ, ಆ ನಿಟ್ಟಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಜನರೇ ಸ್ವಯಂ ನಿಯಂತ್ರಣ ಮಾಡಿಕೊಂಡು ಇನ್ನು ಒಂದೂವರೆ ತಿಂಗಳು ಸಹಕರಿಸಿದರೆ ಖಂಡಿತವಾಗಿಯೂ ಕೊರೋನಾ ನಿಯಂತ್ರಣವಾಗುತ್ತದೆ, ಲಾಕ್ ಡೌನ್ ಹೇರಿಕೆಯೊಂದೇ ಅಸ್ತ್ರವಲ್ಲ, ಎರಡು ತಿಂಗಳು ಜನರು ಕೊರೋನಾ ಮಾರ್ಗಸೂಚಿ, ನಿಯಮಗಳನ್ನು ಪಾಲಿಸಿದರೆ ಇದನ್ನು ನಿಯಂತ್ರಿಸಲು ಖಂಡಿತಾ ಸಾಧ್ಯವಿದೆ ಎಂದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೋನಾ ಸೋಂಕು ಜಾಸ್ತಿಯಾಗುತ್ತಿದೆ. ಶೇಕಡಾ 5ರಿಂದ 6ರಷ್ಟು ಜನರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿರುವುದು ಒಂದು ಸಮಾಧಾನದ ಸಂಗತಿ. ವೈದ್ಯರು, ದಾದಿಯರಿಗೂ ಬರುತ್ತಿರುವುದರಿಂದ ಆರೋಗ್ಯ ಸೇವೆಗೆ ವ್ಯತ್ಯಯವಾಗಬಹುದು ಎಂಬ ಆತಂಕವಿದೆ ಎಂದರು.
ಕೊರೋನಾ ನಿಯಂತ್ರಣವಾಗಲು ಕನಿಷ್ಠ 14-15 ದಿನ ಬೇಕು. ವೀಕೆಂಡ್ ಕರ್ಫ್ಯೂ, ಕೊರೋನಾ ನಿರ್ಬಂಧ ಮಾಡಿ ಎರಡು ವಾರಗಳಾಗಿವೆಯಷ್ಟೆ. ಒಂದೇ ವಾರದಲ್ಲಿ ಕೊರೋನಾ ಸೋಂಕು ಕಡಿಮೆಯಾಗುವುದಿಲ್ಲ. ಓಮಿಕ್ರಾನ್ 5ರಿಂದ 6 ಪಟ್ಟು ವೇಗವಾಗಿ ಹರಡುತ್ತದೆ. ಕೊರೋನಾ ಮೂರನೇ ಅಲೆ ಇನ್ನೂ ಗರಿಷ್ಠ ಮಟ್ಟಕ್ಕೆ ತಲುಪಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದರು.
















ಇನ್ನಷ್ಟು ಸುದ್ದಿಗಳು
ಕೇರಳ ವಿಧಾನಸಭಾ ಚುನಾವಣೆ: 102 ಸ್ಥಾನಗಳಲ್ಲಿ UDF ಗೆ ಭರ್ಜರಿ ಜಯ- LDF ಗೆ ಹೀನಾಯ ಸೋಲು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ