ಕೇರಳದ ಕಣ್ಣೂರಿನ ಮಾಟೂಲ್ ಮೂಲದ 1.5 ವರ್ಷದ ಮುಹಮ್ಮದ್ ಎಂಬ ಮಗು ಸ್ಪನಲ್ ಮಸ್ಕ್ಯುಲರ್ ಆಟ್ರೋಫಿ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಮಗುವಿಗೆ 2 ವರ್ಷ ಆಗುವುದರೊಳಗೆ ಚಿಕಿತ್ಸೆ ನೀಡದಿದ್ದರೆ ಮಗು ಬದುಕುಳಿಯುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆ. ಇದರ ಚಿಕಿತ್ಸೆಗಾಗಿ ಬರೋಬ್ಬರಿ 18 ಕೋಟಿ ರುಪಾಯಿ ಆವಶ್ಯಕತೆಯಿತ್ತು. ಇದು ವಿಶ್ವದಲ್ಲೇ ಅತ್ಯಂತ ದುಬಾರಿ ಔಷಧಿ ಎಂದೂ ಹೇಳಲಾಗುತ್ತಿದೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಕುಟುಂಬದ ಪರಿಸ್ಥಿತಿಯನ್ನು ತಿಳಿದು ಸಾಮಾಜಿಕ ಜಾಲತಾಣದಲ್ಲಿ ಧನಸಹಾಯ ಮಾಡುವಂತೆ ವಿನಂತಿಸಿದ್ದರು. ಇದಕ್ಕೂ ಮೊದಲು ಮಗುವಿನ ಸಹೋದರಿ ಕೂಡ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದರು.
ಮೇಲಿನ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಕೂಡಲೇ ಮಾನವ ಹೃದಯಗಳು ಆ ಕಂದಮ್ಮನಿಗೆ ಬೇಕಾಗಿ ದೊಡ್ಡದಾದ ಅಭಿಯಾನ ಆರಂಭಿಸಿದರು. ಇದರ ಫಲವಾಗಿ ವಿಶ್ವದ ಹಲವು ಕಡೆಗಳಿಂದ ಸಹಾಯಹಸ್ತ ಹರಿದು ಬಂದಿದ್ದು, ಕೇವಲ 7 ದಿನಗಳಲ್ಲಿ ಚಿಕಿತ್ಸೆ ಬೇಕಾದ 18 ಕೋಟಿ ರುಪಾಯಿ ಸಂಗ್ರಹವಾಗಿದೆ.
ಮಗುವಿನ ಚಿಕಿತ್ಸೆಗಾಗಿ ಮಿಡಿದ ಹೃದಯಗಳಿಗೆ ಧನ್ಯವಾದ ಅರ್ಪಿಸಿದ ಕುಟುಂಬ ಇನ್ನು ಯಾರೂ ಹಣ ಕಳುಹಿಸಬೇಡಿ, ಅಕೌಂಟ್ ಕ್ಲೋಸ್ ಮಾಡಿದೆ ಎಂದು ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಭಯ ಬೇಡ: ಭಾರತದಲ್ಲಿ ಕೆಲವು ಕ್ಯಾನ್ಸರ್ ಅನ್ನು ತಡೆಗಟ್ಟಲು ಸಾಧ್ಯ- ವಿಶ್ವ ಆರೋಗ್ಯ ಸಂಸ್ಥೆ
ಸೌದಿ ಅರೇಬಿಯಾದಲ್ಲಿ ಹೃದಯಾಘಾತ ಮರಣ ಸಂಖ್ಯೆ ಹೆಚ್ಚಳ
ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಸ ಹಿ ಉ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ರಾಜ್ಯದಲ್ಲೂ ಕೊರೋನಾ ಮುನ್ನೆಚ್ಚರಿಕೆ: ಮಾಸ್ಕ್ ಕಡ್ಡಾಯ- ಸಚಿವ ಡಾ.ಕೆ.ಸುಧಾಕರ್
ಕಣಚೂರು ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ- ಫೆ 28 ರಿಂದ
ಗಂಭೀರ ಕಾಯಿಲೆಗಳಿದ್ದರೆ ಮಾತ್ರ ಆಸ್ಪತ್ರೆಗೆ ಭೇಟಿ ನೀಡಿ- ಆರೋಗ್ಯ ಇಲಾಖೆ
ಲಾಕ್ ಡೌನ್ ಇಲ್ಲ, ಓಮಿಕ್ರಾನ್ ಬಗ್ಗೆ ಆಲಕ್ಷ್ಯ ಬೇಡ- ಆರೋಗ್ಯ ಸಚಿವ ಡಾ.ಕೆ ಸುಧಾಕರ್
ಕೇರಳದಂತೆ ಕರ್ನಾಟಕದಲ್ಲೂ ಅನಿವಾಸಿಗರಿಗೆ ಪ್ರತ್ಯೇಕ ವಾಕ್ಸಿನ್ ಪ್ರಮಾಣ ಪತ್ರ ನೀಡಲು ಡಾ| ಆರತಿಕೃಷ್ಣ ರವರಿಂದ ರಾಜ್ಯ ಸರಕಾರಕ್ಕೆ ಮನವಿ
ಕೋವಿಡ್ ವಾಕ್ಸಿನ್ ಸರ್ಟಿಫಿಕೇಟ್ Aarogya Setu ಅಪ್ಲಿಕೇಶನ್ ನಲ್ಲಿ ಲಭ್ಯ.
ಮಕ್ಕಳ ಕೈಗೆ ಮೊಬೈಲ್: ಚಟವಾಗದಿರಲು ಏನು ಮಾಡಬೇಕು?