janadhvani

Kannada Online News Paper

ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಸ ಹಿ ಉ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಸ ಹಿ ಉ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ವತಿಯಿಂದ ಸೈಕಲ್ ಜಾಥಾ ಆಯೋಜಿಸಲಾಗಿತ್ತು . ” ಸಂರಕ್ಷಣೆ ನಮ್ಮೆಲ್ಲರ ಹೊಣೆ ,” ನಾವು ಮತ್ತು ನಮ್ಮ ಸುತ್ತಮುತ್ತಲಿನ ಬೆಟ್ಟ-ಗುಡ್ಡ ಕಲ್ಲು ಮಣ್ಣು ಮರ ಗಿಡ ನೀರು ವಾಯು ಪ್ರಾಣಿ-ಪಕ್ಷಿ ಚರಾಚರ ವಸ್ತುಗಳನ್ನು ಪರಿಸರ ಎಂದು ಕರೆಯಬಹುದು ಇವುಗಳನ್ನು ಯಥಾರೀತಿಯಾಗಿ ಉಳಿಸಿ ಬೆಳೆಸಿಕೊಂಡು ಹೋಗುವುದು ಪರಿಸರ ಸಂರಕ್ಷಣೆ ಆಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಅಲ್ತಾಫ್ ಅವರು ಕರೆ ನೀಡಿದರು .

ಇಂತಹ ಪರಿಸರ ಸೃಷ್ಟಿ ನಮಗೆ ವರವಾಗಿದೆ ಎಂದು ಹೇಳಬಹುದು . ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸಬಲ್ಲದು ಇಲ್ಲವಾದರೆ ಪರಿಸರ ನಾಶ ಮಾಡಿದರೆ ನಾವು ನಾಶವಾಗುವುದರಲ್ಲಿ ಎರಡು ಮಾತಿಲ್ಲ . ” ಪರಿಸರ ಉಳಿದರೆ ನಾಡು ಉಳಿದೀತು ; ಪರಿಸರ ಅಳಿದರೆ ನಾಡು ಕಳೆದೀತ ತು ” ಎಂಬ ನಾಣ್ಣುಡಿ ಯಂತೆ ನಾಡನ್ನು ರಕ್ಷಿಸಿಕೊಳ್ಳಬೇಕಾದರೆ ಪರಿಸರ ಸಂರಕ್ಷಣೆ ಮಾಡಬೇಕಾದದ್ದು ನಮ್ಮ ಜವಾಬ್ದಾರಿಯಾಗಿದೆ . ಎಂದು ಸ್ಕೌಟ್ ಶಿಕ್ಷಕ ಎ.ಪಿ.ಮುಹ್ಸಿನ್ ಕರೆಯಿತ್ತರು ಯಾಕೆಂದರೆ ನಾವು ಪರಿಸರದಿಂದ ಸಾಕಷ್ಟು ಅನುಕೂಲತೆಗಳನ್ನು ಪಡೆಯುತ್ತಿದ್ದೇವೆ ” ಹಸಿರೇ ಉಸಿರು ” ಆದ್ದರಿಂದ ಹಸಿರು ಇಲ್ಲದಿದ್ದರೆ ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯದ ತುಂಬೆಲ್ಲ ಹರಡಿಕೊಂಡಿದೆ ಪರಿಸರ ಮಾಲಿನ್ಯದಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಹಾಗಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ವಿದ್ಯಾರ್ಥಿಗಳಾದ ನಾವು ಶಾಲಾ-ಕಾಲೇಜುಗಳಲ್ಲಿ ನಮ್ಮ ಮನೆಯ ಸುತ್ತಮುತ್ತ ಹೆಚ್ಚು-ಹೆಚ್ಚು ಗಿಡಮರಗಳನ್ನು ನೆಟ್ಟು ಪರಿಸರ ಸಂರಕ್ಷಿಸಬೇಕು ಇತರರಿಗೂ ಪ್ರೆರೇಪಿಸಬೇಕು ವನಮಹೋತ್ಸವ , ಸಸಿನೆಡುವ ಕಾರ್ಯಕ್ರಮವನ್ನು ಪ್ರತಿನಿತ್ಯ ಮಾಡುತ್ತಾ ಪ್ರತಿದಿನ ಪರಿಸರ ದಿನ ಆಚರಿಸಬೇಕು ಸಾಲುಮರದ ತಿಮ್ಮಕ್ಕನ ಂತವರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು . ಪರಿಸರನಾಶದ ಪರಿಸರ ನಾಶದಿಂದಾಗುವ ಅನಾಹುತಗಳನ್ನು ತಿಳಿಸಬೇಕು . ” ಕಾಡಿದ್ದರೆ ನಾಡು- ನಾಡಿದ್ದರೆ ನಾವು ಕಾಡಿಲ್ಲದಿದ್ದರೆ ಸುಡಗಾಡು ” ಎನ್ನುವಂತೆ ಕಾಡನ್ನು ನಾಡನ್ನು ಉಳಿಸುವುದು ನಮ್ಮ ನಿಮ್ಮೆಲ್ಲರ ಹೊಣೆಯಾಗಬೇಕು . ಪರಿಸರವನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಬಳುವಳಿಯಾಗಿ ನೀಡಬೇಕೆಂಬುದು ಎಲ್ಲರ ಆಶಯ ವಾಗಬೇಕು.” ರಕ್ಷತಿ ರಕ್ಷತಃ ” ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಪಿ.ಎ.ಮುಲ್ಲಾ ನುಡಿದರು ಹಾಗೂ ಸೈಕಲ್ ಜಾಥಾಕ್ಕೆ ಚಾಲನೆಯನ್ನು ನೀಡಿದರು .

ಈ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಲ್ಲರ ಗಮನ ಸೆಳೆದರು ಶಿಕ್ಷಕರಾದ ಇಸ್ಮಾಯಿಲ್ ಖಾನ್, ಕಡೂರ , ಬಿ.ಜಿ.ಅತ್ತಾರ, ಹೆಚ್.ಎ.ಮುಲ್ಲಾ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ವರದಿ : ಎ.ಪಿ.ಮುಹ್ಸಿನ್
ಸ್ಕೌಟ್ಸ್ ಶಿಕ್ಷಕ ಸ.ಹಿ.ಉ.ಪ್ರಾಥಮಿಕ ಶಾಲೆ ಆಲದಕಟ್ಟಿ ಹಾವೇರಿ ಜಿಲ್ಲೆ ಹಾವೇರಿ 8884553395

error: Content is protected !! Not allowed copy content from janadhvani.com