ಕರ್ನಾಟಕ ಕಲ್ಚರಲ್ ಫೌಂಡೇಷನ್ (KCF) ಒಮಾನ್ ಇದರ ವತಿಯಿಂದ ಇಂಡಿಯನ್ ಎಂಬಸ್ಸಿ ಯಲ್ಲಿ ರಿಜಿಸ್ಟ್ರೇಷನ್ ಮಾಡಿದ ಕರ್ನಾಟಕದ ಪ್ರವಾಸಿಗರಿಗೆ ಮಸ್ಕತ್ ನಿಂದ ಮಂಗಳೂರಿಗೆ ಚಾರ್ಟರ್ಡ್ ವಿಮಾನ ಇದೇ ತಿಂಗಳಾದ ಜುಲೈ 24 ಕ್ಕೆ ಹೊರಡಲಿದೆ .
ಸಂಕಷ್ಟ ಎದುರಿಸುತ್ತಿರುವಂತಹ ಅನಿವಾಸಿ ಕನ್ನಡಿಗರಲ್ಲಿ ಗರ್ಭಿಣಿಯರು, ವಯಸ್ಕರು, ತುರ್ತು ಚಿಕಿತ್ಸೆ ಅಗತ್ಯವಿರುವವರು, ಕೆಲಸ ಕಳೆದುಕೊಂಡವರು, ವೀಸಾ ಕಾಲಾವಧಿ ಮುಗಿದವರು ಕೂಡಲೇ ಕೆಸಿಎಫ್ ಒಮಾನ್ ನೀಡಿರುವ ಲಿಂಕ್ ಬಳಸಿ ಸಂಪೂರ್ಣ ವಿವರಗಳನ್ನು ದಾಖಲಿಸಿ ನೋಂದಣಿ(ರಿಜಿಸ್ಟರ್) ಮಾಡಬಹುದು ಎಂದು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೊಡಿ , ಸಂಘಟನಾಧ್ಯಕ್ಷ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್, ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ, ಮುಖ್ಯ ಸಂಯೋಜಕರಾದ KCF INC ನಾಯಕರಾದ ಇಕ್ಬಾಲ್ ಬೊಲ್ಮಾರ್, KCF ಒಮಾನ್ ಇಹ್ಸಾನ್ ಅಧ್ಯಕ್ಷರಾದ ಹಂಝ ಹಾಜಿ ಕನ್ನಂಗಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.