janadhvani

Kannada Online News Paper

ಪುತ್ತೂರು; ಜುಲೈ 7 : ಸುನ್ನೀ ಯುವಜನ ಸಂಘ ( SჄS ) ಹಾಗೂ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಮೈದಾನಿಮೂಲೆ ಶಾಖೆ ವತಿಯಿಂದ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಎಡೆಬಿಡದೆ ಸುರಿಯುತ್ತಿದ್ದ ಧಾರಾಕಾರ ಮಳೆಯ ನಡುವೆಯೂ SჄS ಹಾಗೂ SSF ಕಾರ್ಯಕರ್ತರು ಮೈದಾನಿಮೂಲೆ ಮಸೀದಿ ವಠಾರ, ಕಬರಸ್ಥಾನ ಹಾಗೂ ಮೈದಾನಿಮೂಲೆ ಯಿಂದ ಪರ್ಪುಂಜವರೆಗಿನ 1.5 ಕಿ.ಮೀ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಗಿಡ ಗಂಟಿಗಳು, ಪೊದೆಗಳಿಂದ ಪಾದಾಚಾರಿಗಳಿಗೆ ನಡೆದಾಡಲು ಕಷ್ಟವಾಗುತ್ತಿರುವುದನ್ನು ಮನಗಂಡು ಅದನ್ನು ತೆರವುಗೊಳಿಸಿ ಸಹಕರಿಸಿದರು.

ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ನಡೆದ ಶ್ರಮದಾನದಲ್ಲಿ SჄS ಹಾಗೂ SSF ನ ಐವತ್ತಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿ, ಊರವರ ಪ್ರಶಂಸೆಗೆ ಪಾತ್ರರಾದರು.

error: Content is protected !! Not allowed copy content from janadhvani.com