janadhvani

Kannada Online News Paper

ಮಂಗಳೂರು:ವಿವಿಧ ಸಂಘಟನೆಗಳಲ್ಲಿ ಗುರುತಿಸಿ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಿದ್ದೀಖ್ ಗೂನಡ್ಕರವರು ದ.ಕ ರೆಡ್ ಕ್ರಾಸ್ ವತಿಯಿಂದ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀಮತಿ. ಸಿಂಧೂ ಬಿ ರೂಪೇಶ್ ರವರಿಂದ ಸನ್ಮಾನವನ್ನು ಪಡೆದು ಕೊಂಡಿದ್ದಾರೆ.

ಸುಳ್ಯ ಪೇಟೆಯಲ್ಲಿ ಹೋಟೆಲ್ ಉದ್ಯಮವನ್ನು ನಡೆಸುತ್ತಿರುವ ಸಿದ್ದೀಖ್ ರವರು ಎಸ್.ಎಸ್.ಎಫ್ ದ.ಕ ಈಸ್ಟ್ ಝೋನ್ ಬ್ಲಡ್ ಸೈಬೋ ಸಂಚಾಲಕರಾಗಿದ್ದು, ರಕ್ತದಾನದ ಪೂರೈಕೆಗಾಗಿ ರಾತ್ರಿ ಹಗಲೆನ್ನದೆ ಯತ್ನಿಸುತ್ತಿರುವ ಇವರು ಅನಾರೋಗ್ಯ ಪೀಡಿತರ ಪಾಲಿಗೆ ಆಪತ್ಭಾಂದವರಾಗಿ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರತರಾಗಿದ್ದಾರೆ.

ಎಸ್.ಎಸ್.ಎಫ್ ಸುಳ್ಯ ಡಿವಿಷನ್ ಸಮಿತಿ ಸದಸ್ಯರೂ, ಸುಳ್ಯ ಸೆಕ್ಟರ್ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿಗಳಾಗಿರುವ ಅವರು ಗೂನಡ್ಕ ಶಾರದಾ ಅನುದಾನಿಕ ಸರಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿಯೂ, ಗೂನಡ್ಕ ಜುಮಾ ಮಸೀದಿ ಆಡಳಿತ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

error: Content is protected !!
%d bloggers like this: