janadhvani

Kannada Online News Paper

KMJ ವತಿಯಿಂದ ಕೋವಿಡ್-19 ಜನಜಾಗೃತಿ ಅಭಿಯಾನ ಕ್ಕೆ ಚಾಲನೆ

ಚಿಕ್ಕಮಗಳೂರು: ಕರ್ನಾಟಕ ಮುಸ್ಲಿಂ ಜಮಾತ್ ಚಿಕ್ಕಮಗಳೂರು ಜಿಲ್ಲಾ ಸಮಿತಿ ಮತ್ತು ವಿವಿಧ ಸುನ್ನಿ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಕೊರೋನ ಜನಜಾಗೃತಿ ಅಭಿಯಾನಕ್ಕೆ ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ಶಾಹಿದ್ ರಜ್ವಿ ಯವರ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದ ಅಜಾದ್ ಪಾರ್ಕನಲ್ಲಿ ಜಿಲ್ಲಾ ಆಸ್ಪತ್ರೆ ಮುಖ್ಯ ವೈದ್ಯರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ಅನ್ನು ವಿತರಿಸಲಾಯಿತು ಹಾಗೂ ವೈದ್ಯರು ಕೊರೋನ ಕುರಿತ ಮಾರ್ಗದರ್ಶನವನ್ನು ಹಾಗು ರೋಗ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಬೇಕಾದ ಸಲಹೆ ನೀಡಿದರು ವಾಹನ ದೊಂದಿಗೆ ಚಿಕ್ಕಮಗಳೂರು ಜಿಲ್ಲಾದ್ಯoತ ಧ್ವನಿ ವರ್ಧಕ ಮೂಲಕ ಜನರಲ್ಲಿ ಕೋರೋಣ ಜನಜಾಗೃತಿ ಮೂಡಿಸಲು ಸಂಚರಿಸಿ ಮತ್ತು ಸಾರ್ವನಿಕರಿಗೆ ಉಚತವಾಗಿ ಮಾಸ್ಕ್ ವಿತರಿಸಲಿದ್ದಾರೆ.

ಈ ಕಾರ್ಯಕ್ರಮದ ಲ್ಲಿ SYS ಪ್ರಮುಖ ಮುಖಂಡರೂ ಆದ ಯೂಸುಫ್ ಹಾಜಿ, ಕೆ. ಪಿ. ಅಬೂಬಕ್ಕರ್, ಆರಿಫ್ ಅಲಿ ಖಾನ್, ವಕ್ಫ್ ಸಲಹಾ ಸಮಿತಿ ಸದಸ್ಯ ಮನ್ಸೂರ್ ಅಹಮದ್, ನಾಸಿರ್ ಟಿ. ಎಂ, ಗೌಸ್ ಮೊಹಿದ್ದೀನ್,ಮುನೀರ್, ಇನ್ನಿತರು ಭಾಗವಹಿಸಿದ್ದರು ಎಂದು ಪ್ರಧಾನ ಕಾರ್ಯದರ್ಶಿ ಹಾಜಿ ಫಿರೋಜ್ ಅಹಮದ್ ರಜ್ವಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

error: Content is protected !! Not allowed copy content from janadhvani.com