janadhvani

Kannada Online News Paper

ಒಂದೇ ದಿನ ಎರಡು ರಕ್ತದಾನ ಶಿಬಿರ ಹಮ್ಮಿಕೊಂಡ ಸುಳ್ಯ ಎಸ್ಸೆಸ್ಸೆಫ್ ಬ್ಲಡ್ ಸೈಬೋ

ಸುಳ್ಯ: ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲವೂ ಸ್ಥಗಿತಗೊಂಡಿರುವಾಗ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ರಕ್ತದ ಬೇಡಿಕೆ ಹೆಚ್ಚುತ್ತಿದೆ. ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತವಿಲ್ಲದೆ ಪರಿತಪಿಸುವ ಸ್ಥಿತಿ ಬಂದಿದೆ. ಈ ಸಂಧಿಗ್ದ ಪರಿಸ್ಥಿತಿಯಲ್ಲಿ ಸುಳ್ಯ ಡಿವಿಷನ್ ಎಸ್ಸೆಸ್ಸೆಫ್ ಬ್ಲಡ್ ಸೈಬೋ ತಂಡವು ಕೊರೋನ ವಾರಿಯರ್ಸ್ ಗಳ ಜತೆಗೂಡಿ ಜೀವದ ಹಂಗು ತೊರೆದು ಒಂದೇ ದಿನದಲ್ಲಿ ಎರಡು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದೆ.

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ವ್ಯಾಪ್ತಿಯ ಬೆಳ್ಳಾರೆ ಹಾಗೂ ನಿಂತಿಕಲ್ಲು ಸೆಕ್ಟರ್ ಗಳ ವ್ಯಾಪ್ತಿಯಲ್ಲಿ ಎರಡು ಕ್ಯಾಂಪ್ ಗಳು ನಡೆಯಿತು. ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳನ್ನು ಕರೆತರಲು ಸಂಘಟಕರು ಹರಸಾಹಸಪಟ್ಟು ಕಾರ್ಯಾಚರಿಸಿರುವುದರ ಫಲವಾಗಿ ನೂರು ಯುನಿಟ್ ಗಿಂತಲೂ ಅಧಿಕ ರಕ್ತ ಶೇಖರಣೆಯಾಯಿತು. ರಾಜೀವ್ ಗಾಂಧಿ ಸೇವಾಕೇಂದ್ರ ಬೆಳ್ಳಾರೆಯಲ್ಲಿ ರೆಡ್ ಕ್ರಾಸ್ ಸಂಸ್ಥೆ ಹಾಗೂ ಚಂದ್ರಭಾಗಿ ಕಾಂತಪ್ಪ ಶೆಟ್ಟಿ ಸಭಾಭವನ ನಿಂತಿಕಲ್ಲಿನಲ್ಲಿ ಎ.ಜೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಶಿಬಿರವು ನಡೆಯಿತು.

ಶಿಬಿರದಲ್ಲಿ ಎಸ್.ವೈ.ಎಸ್ ನಾಯಕರಾದ ಹಸನ್ ಸಖಾಫಿ ಬೆಳ್ಳಾರೆ, ಶಂಸುದ್ಧೀನ್ ಝಂಝಂ, ಮಹ್ಮೂದ್ ಬೆಳ್ಳಾರೆ, ಆರಿಫ್ ಎಂಜಿನಿಯರ್, ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ವೈಸ್ ಚೇರ್ಮಾನ್ ಎ.ಎಂ. ಫೈಝಲ್ ಝುಹ್ರಿ, ಜಿಲ್ಲಾ ಬ್ಲಡ್ ಸೈಬೋ ಕೋರ್ಡಿನೇಟರ್ ಕರೀಂ ಕೆದ್ಕಾರ್, ದ.ಕ ಜಿಲ್ಲಾ ಈಸ್ಟ್ ಝೋನ್ ಬ್ಲಡ್ ಸೈಬೋ ಇನ್ಚಾರ್ಜ್ ಸಿದ್ದೀಖ್ ಗೂನಡ್ಕ, ಇಮ್ರಾನ್ ರೆಂಜಲಾಡಿ, ಸುಳ್ಯ ಡಿವಿಷನ್ ಬ್ಲಡ್ ಸೈಬೋ ಇನ್ಚಾರ್ಜ್ ಗಳಾದ ರಿಯಾಝ್ ನೆಕ್ಕಿಲ, ನೌಷಾದ್ ಕೆರೆಮೂಲೆ, ದ.ಕ ಜಿಲ್ಲಾ ಈಸ್ಟ್ ಝೋನ್ ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಸಖಾಫಿ, ಎಸ್ಸೆಸ್ಸೆಫ್ ನಿಂತಿಕಲ್ಲು ಸೆಕ್ಟರ್ ಅಧ್ಯಕ್ಷ ಜಬ್ಬಾರ್ ಹನೀಫಿ, ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್ ಅಧ್ಯಕ್ಷ ಮುನೀರ್ ಹನೀಫಿ, ಬೆಳ್ಳಾರೆ ಸೆಕ್ಟರ್ ಬ್ಲಡ್ ಸೈಬೋ ಉಸ್ತುವಾರಿ ಕಲಾಂ ಝುಹ್ರಿ, ಇಕ್ಬಾಲ್ ಪಳ್ಳಿಮಜಲು, ನಿಂತಿಕಲ್ಲು ಸೆಕ್ಟರ್ ಬ್ಲಡ್ ಸೈಬೋ ಉಸ್ತುವಾರಿ ಮುಸ್ತಫ ಸಮಾಧಿ, ಅಬ್ದುಲ್ ರಝಾಕ್ ಎಣ್ಮೂರು ಹಾಗೂ ಬೆಳ್ಳಾರೆ ಮತ್ತು ನಿಂತಿಕಲ್ಲು ಸೆಕ್ಟರ್ ಗಳ ನಾಯಕರುಗಳು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com