janadhvani

Kannada Online News Paper

ಕೊರೋನಾ ದಿಂದ ಸಾವೀಗೀಡಾದ ವ್ಯಕ್ತಿಯ ಮೃತದೇಹವನ್ನು ಜೆಸಿಬಿ ಮತ್ತು ಟ್ರಾಕ್ಟರ್ ಮೂಲಕ ಸಾಗಿಸಿದ ಪುರಸಭೆ…!

ಕೊರೊನಾ ವೈರಸ್ ನಿಂದಾಗಿ ಸಾವಿಗೀಡಾದ 72 ವರ್ಷದ ರೋಗಿಯ ಮೃತದೇಹವನ್ನು, ಅವರ ಮನೆಯಿಂದ ಶ್ಮಶಾನಕ್ಕೆ ಜೆಸಿಬಿ ಮೂಲಕ ಸಾಗಿಸಿದ ಅಮಾನವೀಯ ಹಾಗೂ ಅಘಾತಗಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಪಾಲಾಸ ನಗರದಲ್ಲಿ ಘಟನೆ ನಡೆದಿದ್ದು, ಮನೆ-ಮನೆ ಆರೋಗ್ಯ ಸಮೀಕ್ಷೆಯ ಸಂದರ್ಭದಲ್ಲಿ ಇವರಿಗೆ ಕೊರೊನಾ ಇರುವುದು ದೃಡಪಟ್ಟಿದ್ದು ಮನೆಯಲ್ಲೇ ನಿಧನರಾಗಿದ್ದರು.

ಮೃತದೇಹವನ್ನು ಜೆಸಿಬಿ ಮೂಲಕ ಸ್ಥಳಾಂತರಿಸುವ ವಿಡಿಯೊ ವೈರಲ್ ಆಗುತ್ತಿದ್ದಂತೆ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು ಘಟನೆಗೆ ಸಂಭಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

error: Content is protected !! Not allowed copy content from janadhvani.com