ಮೋಂಟುಗೋಳಿ :- ಜೂನ್ 05 ವಿಶ್ವ ಪರಿಸರ ದಿನದ ಪ್ರಯುಕ್ತ ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯನ್ನು ಸಮಗ್ರವಾಗಿ ಅನುಷ್ಠಾನ ಮಾಡಲು ಪರಿಸರ ದಿನಾಚರಣೆಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.
ಆ ಪ್ರಯುಕ್ತ ಸೆಕ್ಟರ್ ನ ವ್ಯಾಪ್ತಿಯ ಶಾಖಾಗಳ ಪ್ರತೀ ಕಾರ್ಯಕರ್ತರ ಮನೆಯ ಅಂಗಳಗಳಲ್ಲಿ ” ನಾಳೆಗೊಂದು ನೆರಳು ” ಎಂಬ ಅಭಿಯಾನದ ಮೂಲಕ ಸಾವಿರಕ್ಕು ಮಿಕ್ಕ ಗಿಡಗಳನ್ನು ನೆಡಲಾಯಿತು.
ಕಾರ್ಯಕ್ರಮಗಳಲ್ಲಿ ಸೆಕ್ಟರ್ ಅಧ್ಯಕ್ಷರು ಮನ್ಸೂರ್ ಹಿಮಾಮಿ, ಪ್ರ.ಕಾರ್ಯದರ್ಶಿ ನಿಯಾಜ್ ಪಡಿಕ್ಕಲ್, ಕ್ಯಾಂಪಸ್ ಕಾರ್ಯದರ್ಶಿ ಸಮದ್ ಮೊಂಟೆಪದವು, ಕಾರ್ಯದರ್ಶಿ ಸಿನಾನ್ ಸುಟ್ಟ ಹಾಗೂ ಸೆಕ್ಟರ್ ನಾಯಕರು, ಶಾಖಾ ನಾಯಕರು, ಕಾರ್ಯಕರ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.