janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಈದ್ ಕಿಟ್ ವಿತರಣೆ

ಕೊರೋನಾದಿಂದ ಲಾಕ್‌ಡೌನ್ ಆಗಿ ಜಿಲ್ಲೆಯಾದ್ಯಂತ ಹಲವರು ಸಂಕಷ್ಟಕ್ಕೀಡಾದ ಸಂದರ್ಭದಲ್ಲಿ ಅವರಿಗೆ ಸಹಾಯಕವಾಗುವ ನಿಟ್ಟಿನಲ್ಲಿ KMJ SYS SSF SJM ಮುಂತಾದ ಸುನ್ನಿ ಸಂಘಟನೆಗಳ ಕಾರ್ಯಕರ್ತರು ಹಲವೆಡೆಗಳಲ್ಲಿ ನೆರವಿಗೆ ಧಾವಿಸಿ ಆಹಾರ ಕಿಟ್ ವಿತರಣೆ ಸೇರಿದಂತೆ ಹಲವಾರು ಸಾಮಾಜಿಕ ಸೇವೆಯನ್ನು ನಿರ್ವಹಿಸಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಆದರೆ ಕಾರ್ಯಕರ್ತರಲ್ಲಿ ಹಲವರು ಸ್ವತಃ ಸಂಕಷ್ಟಕ್ಕೀಡಾಗಿದ್ದರೂ ಕೂಡ ಅದನ್ನೆಲ್ಲ ಮರೆತು ಯಾರಿಗೂ ಹೇಳಿಕೊಳ್ಳದೆ ದಿನಗಳನ್ನು ಮುಂದೂಡುತ್ತಿದ್ದಾರೆ ಎಂಬುದನ್ನು ಮನಗಂಡ *ಕರ್ನಾಟಕ ಮುಸ್ಲಿಂ ಜಮಾಅತ್* ಇದರ *ಕೊಡಗು ಜಿಲ್ಲಾ ಸಮಿತಿ*‌ಯು ಅಂತಹ ಸಂಘಟನೆಗಳ ಹಲವು ಕಾರ್ಯಕರ್ತರು ಹಾಗೂ ನಾಯಕರನ್ನು ಗುರುತಿಸಿ ಅವರಿಗೆ ಉಪಯುಕ್ತವಾಗುವಂತಹ ಈದ್ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

ಸಯ್ಯಿದ್ ಶಿಹಾಬುದ್ದೀನ್ ಅಲ್‌ ಹೈದ್ರೂಸಿ'(ಕಿಲ್ಲೂರು ತಙ್ಙಳ್)ರವರ ನಾಯಕತ್ವದಲ್ಲಿ
ಮುಸ್ಲಿಂ ಜಮಾಅತಿನ ಕೊಡಗು ಜಿಲ್ಲಾ ಕಾರ್ಯಧ್ಯಕ್ಷರಾದ ಪಿ.ಎ.ಯೂಸುಫ್ ಕೊಂಡಂಗೇರಿ ರವರ ಅಧ್ಯಕ್ಷತೆಯಲ್ಲಿ
ಕೊಟ್ಟಮುಡಿ ಮರ್ಕಝುಲ್ ಹಿದಾಯ ದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಿಟ್ ವಿತರಣೆ ನಡೆಸಲಾಯಿತು.

ಪ್ರಧಾನ ಕಾಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ ಸ್ವಾಗತ ಭಾಷಣ ಮಾಡಿದರು,
ಕಾರ್ಯಕ್ರಮವನ್ನು ರಾಜ್ಯ ಉಪಾಧ್ಯಕ್ಷರಾದ ಮಹ್ಮೂದ್ ಉಸ್ತಾದ್ ಎಡಪ್ಪಲಂ ಉದ್ಘಾಟಿಸಿದರು.
ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ,
ಸಿ.ಕೆ.ಅಹ್ಮದ್ ಹಾಜಿ,
ಉಮರ್ ಸಖಾಫಿ,
ಎಂ.ಬಿ. ಹಮೀದ್ ಕಬಡಗೇರಿ, ಕೊಹಿನೂರು ಅಬ್ದು ಹಾಜಿ, ಹಂಝ ಕೊಟ್ಟಮ್ಮುಡಿ ಮುಂತಾದ ನಾಯಕರು ಪಾಲ್ಗೊಂಡಿದ್ದರು.

error: Content is protected !! Not allowed copy content from janadhvani.com