ಚೆನ್ನಾವರ ಎಸ್ ವೈಎಸ್ ಬ್ರಾಂಚ್ ಹಾಗೂ ಎಸ್ಸೆಸ್ಸೆಫ್ ಶಾಖೆ ಯ ವತಿಯಿಂದ ಕೊರೋನ ಲಾಕ್ ಡೌನ್ ವೇಳೆಯಲ್ಲಿ ಮೂರು ಹಂತದ ಕಿಟ್ ವಿತರಿಸಲಾಯ್ತು. ರಮ್ಝಾನ್ ಪ್ರಾರಂಭದಲ್ಲಿ ಅಕ್ಕಿ ಸಕ್ಕರೆ, ಮೆಣಸು, ಎಣ್ಣೆ,ಬೇಳೆ ಕಾಳುಗಳನ್ನೊಳಗೊಂಡ ಆಯ್ದ 30 ರಷ್ಟು ಕುಟುಂಬಗಳಿಗೆ ಮೊದಲನೇ ಹಂತದ ಕಿಟ್ ವಿತರಿಸಲಾಯ್ತು.

ಬದ್ರ್ ಅನುಸ್ಮರಣೆಯ ಪ್ರಯುಕ್ತ 80ರಷ್ಟು ಮನೆಗಳಿಗೆ ಹಣ್ಣು ಹಂಪಲುಗಳಿರುವ ಎರಡನೇಯ ಹಂತದ ಕಿಟ್ ವಿತರಿಸಲಾಯ್ತು. ಹಾಗೂ ಈದ್ ಆಚರಿಸಲು ಬೇಕಾದ ಮಾಂಸ, ತುಪ್ಪಕ್ಕಿ,ತುಪ್ಪ , ಪಾನೀಯಪದಾರ್ಥ, ಮಸಾಲ ಪದಾರ್ಥಗಳನ್ನೊಳಗೊಂಡ ಮೂರನೇ ಹಂತದ ಕಿಟ್ ವಿತರಿಸಲಾಯ್ತು.
ಪ್ರಸ್ತುತ ಕಿಟ್ ಗಳಿಗಾಗಿ ಸಂಘಟನೆಯ ಹೆಚ್ಚಿನ ಕಾರ್ಯಕರ್ತರು ವಿದೇಶದಿಂದಲೂ ಊರಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸಹಾಯ ಸಹಕಾರವನ್ನು ನೀಡಿರುತ್ತಾರೆ, ಅಂದಾಜು ಎಪ್ಪತ್ತೈದು ಸಾವಿರ ರೂಪಾಯಿಯಷ್ಟು ಮೊತ್ತದ ಕಿಟ್ ಈ ವರ್ಷ ಕೊಡಲು ಸಾಧ್ಯವಾಯ್ತು. ಅಲ್ಲದೇ ಪ್ರತೀ ವರ್ಷವು ಒಂದು ಹಂತದ ಕಿಟ್ ಕೊಡುತ್ತಿದ್ದು ಈ ವರ್ಷ ವ್ಯತ್ಯಸ್ಥ ರೀತಿಯಲ್ಲಿ ಕೊಡಲಾಯ್ತು.
ಈ ಕಾರ್ಯ ಪ್ರವೃತ್ತಿಗೆ ಸಹಕರಿಸಿದ ಎಲ್ಲರಿಗೂ ಪ್ರತ್ಯೇಕ ದುಆ ಸಂಗಮ ನಡೆಸಲು ಸರಕಾರದ ಆದೇಶದ ಪಾಲನೆಯಿಂದ ಸಾಧ್ಯವಾಗಿಲ್ಲ. ಓನ್ ಲೈನ್ ಸಂಗಮಗಳಿಂದ ಪ್ರತ್ಯೇಕ ದುಆ ನಡೆಸಲಾಯ್ತು.
ಈ ಕಿಟ್ ವಿತರಣೆಯಲ್ಲಿ ಜಮಾಅತ್ ಅಧ್ಯಕ್ಷ ಕರೀಮ್ ಹಾಜಿ , ಯೂಸುಫ್ ಹಾಜಿ, ಎಸ್ ವೈಎಸ್ ಅಧ್ಯಕ್ಷ ಇಸ್ಮಾಈಲ್ ಸಅದಿ, ಎಸ್ಸೆಸ್ಸೆಫ್ ಅಧ್ಯಕ್ಷ ಇಸ್ಮಾಈಲ್ ಹನೀಫಿ, ಸಿಪಿ ಅಬೂಬಕರ್ ಮದನಿ, ಅಲ್ ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ, ಅಬ್ದುಲ್ ರಹ್ಮಾನ್ ಬಿ, ಸಿಪಿ ಮುಹಮ್ಮದ್ ಹಾಜಿ, ಅಬ್ದುಲ್ ರಝಾಕ್ ಹಾಜಿ, ಪುತ್ತುಞಿ ಹಾಜಿ ಬಾಯಂಬಾಡಿ, ಅಬ್ದುಲ್ ಅಝೀಝ್ , ಅಮೀನ್ ಝುಹ್ರಿ , ಇಕ್ಬಾಲ್ ಮದನಿ, ಹನೀಫ್ ಇಂದ್ರಾಜೆ , ಮುತ್ತಲಿಬ್ ಹಾಜಿ, ನಸೀರ್ ನಿಝಾಮಿ, ನಿಝಾರ್ ಮುಸ್ಲಿಯಾರ್ , ಇಕ್ಬಾಲ್ ಸಿ, ಆಸಿಫ್ ಪಿಎಮ್, ಜಬ್ಬಾರ್ ಮುಕ್ಕೂರ್, ಉಮರ್ ಕೆ, ಮುನಾಝ್, ಅಬ್ದುಲ್ ಬಾಸಿತ್ ಮೊದಲಾದವರು ಉಪಸ್ಥಿರಿದ್ದರು.















ಇನ್ನಷ್ಟು ಸುದ್ದಿಗಳು
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ