janadhvani

Kannada Online News Paper

ಮಂಗಳೂರು: ಕೋವಿಡ್-19 ವೈರಸ್ ನಿಗ್ರಹ ನಿಮಿತ್ತ ದೇಶದಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ರಸ ಕಾರ್ಯಾಚರಣೆ ಸ್ಥಗಿತಗೊಂಡಿದ್ದು ಮದ್ರಸ ಸೇವೆಯಲ್ಲಿರುವ ಮುಅಲ್ಲಿಮರಿಗೆ ರಜಾಕಾಲದ ವೇತನದೊಂದಿಗೆ ಹೆಚ್ಚುವರಿ ಸೌಲಭ್ಯವನ್ನು ನೀಡಬೇಕು.

ಮದ್ರಸ ಸೇವೆಗೆ ಅನುಕೂಲ ವಾತಾವರಣ ಹಾಗೂ ಆರ್ಥಿಕ ಸಹಕಾರ ಸಂಪೂರ್ಣ ಸ್ಥಬ್ಧ ವಾಗಿರುವುದರಿಂದ ನಿಸ್ವಾರ್ಥ ಸೇವಾ ಮನೋಭಾವದ ಮುಅಲ್ಲಿಮರಿಗೆ ಸರ್ವ ರೀತಿಯ ಸಹಾಯ ಸಹಕಾರ ನೀಡಿ ನೆರವಾಗಬೇಕಾದ ಸಂದರ್ಭ ಇದಾಗಿದೆ. ಮಾನ್ಯ ಆಡಳಿತ ಸಮಿತಿ ಇದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯೋನ್ಮುಖರಾಗಬೇಕು ಎಂದು ಸುನ್ನೀ ವಿಧ್ಯಾಭ್ಯಾಸ ಬೋರ್ಡ್ ಅಧ್ಯಕ್ಷರಾದ ಸಯ್ಯಿದ್ ಅಲೀ ಬಾಫಖೀ ತಂಙಲ್, ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್,ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯಾಧ್ಯಕ್ಷ ಆತೂರು ಸಅದ್ ಮುಸ್ಲಿಯಾರ್ ಮತ್ತು ಪ್ರಧಾನ ಕಾರ್ಯದರ್ಶಿ ಪುಂಡೂರು ಇಬ್ರಾಹಿಂ ಸಖಾಫಿ ಮುಂತಾದ ಸುನ್ನೀ ನಾಯಕರು ಮದ್ರಸ ಮ್ಯಾನೇಜ್‌ಮೆಂಟ್ ಪದಾಧಿಕಾರಿಗಳೊಂದಿಗೆ ಮನವಿ ಮಾಡಿದ್ದಾರೆ.

ರಜಾಕಾಲದಲ್ಲಿ ವಿದ್ಯಾರ್ಥಿಗಳು,ಪೋಷಕರು ಹಾಗೂ ಸಾರ್ವಜನಿಕರಿಗೆ ಧಾರ್ಮಿಕ ಭೋದನೆಗಾಗಿ ಸುನ್ನೀ ವಿಧ್ಯಾಭ್ಯಾಸ ಬೋರ್ಡ್ ಮಾರ್ಚ್ 25 ರಿಂದ ಆರಂಭಿಸಿರುವ ಫೀ ರಿಹಾಬಿಲ್ ಖುರ್’ಆನ್ ಎಂಬ ಆನ್‌ಲೈನ್ ತರಗತಿ ಎಲ್ಲಾ ವಿದ್ಯಾರ್ಥಿಗಳಿಗೆ ಲಭಿಸುವಂತಾಗಲು ಮುಅಲ್ಲಿಮರು ಮತ್ತು ಪೋಷಕರು ಪ್ರತ್ಯೇಕ ಗಮನ ಹರಿಸಬೇಕು ಎಂದು ಅವರು ತಿಳಿಸಿದರು. ಪ್ರತಿ ದಿನ ಬೆಳಿಗ್ಗೆ 8:30 ರಿಂದ 10:30 ರ ವರೆಗೆ ಹಾಗೂ ರಾತ್ರಿ 9:30 ಕ್ಕೆ ಮೀಡಿಯ ಮಿಷನ್ ಯೂ ಟ್ಯೂಬ್ ಚಾನೆಲ್ ಮೂಲಕ ತರಗತಿ ಪ್ರಸಾರ ಪಡಿಸಲಾಗುತ್ತದೆ. ಈ ಅವಕಾಶವನ್ನು ಬಳಸಿಕೊಂಡು ಸದುಪಯೋಗ ಪಡಿಸಬೇಕು. ಎಂದು ವಿಧ್ಯಾಭ್ಯಾಸ ಬೋರ್ಡ್‌ನ ನಾಯಕರು ಕರೆ ನೀಡಿದರು.

ಪ್ರಕಟಣೆ: ಆತೂರ್ ಸಅದ್ ಮುಸ್ಲಿಯಾರ್
ಅಧ್ಯಕ್ಷರು SJM ಕರ್ನಾಟಕ

error: Content is protected !!
%d bloggers like this: