janadhvani

Kannada Online News Paper

ನಾಳೆಯಿಂದ ಎಸ್ಸೆಸ್ಸೆಫ್ ಕ್ಯಾಂಪಸ್ ಕಾನ್ಫರೆನ್ಸ್‌ – ಎಲ್ಲರ ಚಿತ್ತ ಮೈಸೂರಿನತ್ತ!

ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ_
(ರಾಜ್ಯಾಧ್ಯಕ್ಷರು: ಎಸ್ಸೆಸ್ಸೆಫ್ ಕರ್ನಾಟಕ)

ಐತಿಹಾಸಿಕ ಕ್ಷಣಗಳಿಗೆ ಅರಮನೆ ನಗರಿ ಸಜ್ಜುಗೊಂಡಿದೆ. ಮೈಸೂರಿನ ಈದ್ಗಾ ಮೈದಾನದಲ್ಲಿ ನೂರಾರು ಕಾರ್ಮಿಕರಿಂದ ಬೃಹತ್ ಜರ್ಮನ್ ಟೆಂಟ್ ನಿರ್ಮಾಣ ಗೊಂಡಿದೆ.

ಬೀದರ್‌ನಿಂದ ಚಾಮರಾಜನಗರ ತನಕ ಇರುವ ರಾಜ್ಯದ ಮೂವತ್ತು ಜಿಲ್ಲೆಗಳ ಐದು ಸಾವಿರದಷ್ಟು ಕ್ಯಾಂಪಸ್ ವಿದ್ಯಾರ್ಥಿಗಳು ಅರಮನೆ ನಗರಿಯನ್ನು ಧನ್ಯಗೊಳಿಸಲು ಹೊರಟು ನಿಂತಿದ್ದಾರೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಸಹಿತ ದೇಶ ವಿದೇಶಗಳ ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ಕ್ಯಾಂಪಸ್ ಕಾನ್ಫರೆನ್ಸ್ ಭವ್ಯ ವೇದಿಕೆಯನ್ನು ಧನ್ಯಗೊಳಿಸಲಿದ್ದಾರೆ.

ಅಧ್ಯಯನ ಶಿಬಿರಗಳು, ಸೆಮಿನಾರ್‌ಗಳು, ಚರ್ಚಾಗೋಷ್ಠಿಗಳು, ಪ್ರಶ್ನೋತ್ತರ ವೇದಿಕೆ ಹಾಗೂ ಸಮಾರೋಪ ಸಮಾವೇಶ ವಿದ್ಯಾರ್ಥಿಗಳ ಬದುಕಿಗೆ ಹೊಸ ದಿಕ್ಕನ್ನು ತೋರಿಸಿ ಕೊಡಲಿದೆ. ರಾಜ್ಯದ ವಿವಿಧ ಪ್ರಮುಖ ಕ್ಯಾಂಪಸ್‌ಗಳಿಂದ ಬಂದ ವಿದ್ಯಾರ್ಥಿಗಳಿಗೆ ಪರಿಣಿತರಾದ ನೂರರಷ್ಟು ಪ್ರೊಫೆಷನಲ್ ಸ್ಕಾಲರ್ಸ್‌ಗಳು ಕುಳಿತು ಅವರ ಮುಂದಿನ ಹಾದಿಯನ್ನು ಸುಗಮಗೊಳಿಸಲು ಮಾಹಿತಿಯನ್ನು ನೀಡುವ Educine ಸಮ್ಮೇಳನ ನಗರಿಯ ಪ್ರಮುಖ ಆಕರ್ಷಣೆಯಾಗಲಿದೆ.

ಇದರ ಪ್ರಯೋಜನ ಕೇವಲ ಶಿಬಿರಾರ್ಥಿಗಳು ಮಾತ್ರ ಪಡೆಯದೆ ಹೊರಗಿನಿಂದ ಬಂದ ಇತರೆ ವಿದ್ಯಾರ್ಥಿಗಳಿಗೂ ಧರ್ಮ ಜಾತಿ ಭೇದವಿಲ್ಲದೆ ಇದರ ಪ್ರಯೋಜನ ಪಡೆಯಲು ಅವಕಾಶ ಇರುತ್ತದೆ. ಸಮ್ಮೇಳನದ ಯಶಸ್ಸಿಗಾಗಿ 313 ಮಂದಿಯ ಸ್ವಾಗತ ಸಮಿತಿ ಈಗಾಗಲೇ ಅಸ್ತಿತ್ವದಲ್ಲಿದ್ದು ತಿಂಗಳುಗಳಿಂದ ರಾತ್ರಿ ಹಗಲು ಕಾರ್ಯಾಚರಣೆಯಲ್ಲಿ ಸಕ್ರೀಯರಾಗಿದ್ದಾರೆ.

ಅಲ್ಲದೆ 500 ಸ್ವಯಂ ಸೇವಕರ ತಂಡ, ಐದು ಸಾವಿರ ಶಿಬಿರಾರ್ಥಿಗಳ ಮಾರ್ಗದರ್ಶಕರಾಗಿ ಐವತ್ತು ಸ್ಪೆಷಲ್ ಸ್ಕ್ವಾಡ್‌ಗಳು, ನಗರಿಯ ಸಂಪೂರ್ಣ ನಿಯಂತ್ರಣಕ್ಕಾಗಿ ಅಬ್ಸರ್ವ್ ಸ್ಕ್ವಾಡ್ ಹೀಗೆ ಹತ್ತು ಹಲವು ವೈಶಿಷ್ಟ್ಯಗಳೊಂದಿಗೆ ಮೈಸೂರು ಇತಿಹಾಸ ಬರೆಯಲಿದೆ.

ರಾಜ್ಯದ ಸುಮಾರು ಒಂದು ಸಾವಿರದಷ್ಟು ಕ್ಯಾಂಪಸ್‌ಗಳಲ್ಲಿ ಕಲಿಯುವ ಐದು ಸಾವಿರ ವಿದ್ಯಾರ್ಥಿಗಳು ಒಂದೇ ಸಭಾಂಗಣದಲ್ಲಿ ಒಟ್ಟು ಸೇರುವ ಅನಿರ್ವಚನೀಯ ಸಮಾಗಮಕ್ಕೆ ಎಸ್ಸೆಸ್ಸೆಫ್ ವೇದಿಕೆ ಸಿದ್ಧಗೊಳಿಸಿದೆ. ಕಲುಷಿತಗೊಳ್ಳುತ್ತಿರುವ ಕ್ಯಾಂಪಸ್‌ಗಳಲ್ಲಿ ಈ ವಿದ್ಯಾರ್ಥಿಗಳ ಮೂಲಕ ಬದಲಾವಣೆಯ ಬೆಳಕು ಹರಿಯುವಂತೆ ಮಾಡಬೇಕಿದೆ. ನಮ್ಮ ಪ್ರಯತ್ನ ಮುಂದುವರಿಯುತ್ತಲೇ ಇರುತ್ತದೆ. ಇಂದಲ್ಲ ನಾಳೆ ಈ ಪ್ರಯತ್ನ ಯಶ ಕಾಣಲಿದೆ ಎಂಬ ನಿರೀಕ್ಷೆಯೊಂದಿಗೆ…

ಈ ಐತಿಹಾಸಿಕ ನಿಮಿಷಕ್ಕೆ ಸಾಕ್ಷಿಯಾಗಲೂ ಕನಿಷ್ಠ ಒಂದು ಕ್ಯಾಂಪಸ್ ವಿದ್ಯಾರ್ಥಿಯನ್ನಾದರೂ ನೀವೂ ಕಳುಹಿಸಿ ಕೊಡಿ. ಯಾವುದಾದರೂ ಒಂದು ಮಾತು, ಒಂದು ನೋಟ, ಒಂದು ಕ್ಷಣ ಆ ವಿದ್ಯಾರ್ಥಿಯ ಬದುಕನ್ನೇ ಬದಲಾಯಿಸಿ ಬಿಟ್ಟರೆ. ಈ ಪ್ರಪಂಚದಲ್ಲಿ ಅದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೊಂದಿಲ್ಲ.

error: Content is protected !! Not allowed copy content from janadhvani.com