janadhvani

Kannada Online News Paper

PUC ಪರೀಕ್ಷೆ ಆರಂಭ: ಪ್ರಶ್ನೆ ಪತ್ರಿಕೆ ಸೋರಿಕೆ- ಸೂಪರ್ ವೈಸರ್ ಅಮಾನತಿಗೆ ಆದೇಶ

ವಿಜಯಪುರ: ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಪರೀಕ್ಷೆ ಸೋರಿಕೆ ಆಗದಂತೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶಕುಮಾರ್ ಅವರು ಮಂಗಳವಾರ ಹೇಳಿದ್ದರು.

ಇಂದು ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ಎಷ್ಟೇ ಬಿಗಿ ಬಂದೂಬಸ್ತ್ ಕಲ್ಪಿಸಿದರು ಜಿಲ್ಲೆಯ ಇಂಡಿಯಲ್ಲಿ ಭೌತಶಾಸ್ತ್ರ ಪ್ರಶ್ನೆ ಪತ್ರಿಕೆ ಲೀಕ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಪ್ರಕರಣದ ಬಗ್ಗೆ ಈಗ ಇಂಡಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರು ಮುರುಘೇಂದ್ರ ಹಿರೇಮಠ(19) ಹಾಗೂ ಬಾಗಪ್ಪ ಸಗರ(22) ಇಂಡಿ ಪಟ್ಟಣದ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಪರೀಕ್ಷಾ ಕೇಂದ್ರದಲ್ಲಿದ್ದ ಪರೀಕ್ಷಾರ್ಥಿ ಮುರುಘೇಂದ್ರ ಹಿರೇಮಠ ಪ್ರಶ್ನೆ ಪತ್ರಿಕೆ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದ. ಬಾಗಪ್ಪ ಪರೀಕ್ಷಾರ್ಥಿಯ ಪೋಟೋ ತೆಗೆದಿದ್ದಾನೆ. ಪ್ರಶ್ನೆ ಪತ್ರಿಕೆ ಲೀಕ್​ ಬಗ್ಗೆ ವಿಜಯಪುರ ಜಿಲ್ಲಾಧಿಕಾರಿ ವೈಎಸ್ ಪಾಟೀಲ್​ ಅವರು ಪರೀಕ್ಷಾ ಕೇಂದ್ರದ ಸೂಪರ್ ವೈಸರ್ ಶ್ರೀಮತಿ ಎಮ್.ಡಿ ನಾರಾಯಾಣಕರ್ ಅಮಾನತಿಗೆ ಸೂಚನೆ ನೀಡಿದ್ದಾರೆ.

ದ್ವಿತಿಯ ಪಿಯುಸಿ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ ಬಗ್ಗೆ ಮಾತನಾಡಿದ ವಿಜಯಪುರ ಡಿಸಿ ವೈಎಸ್ ಪಾಟೀಲ್, ಇಂದಿನ ಭೌತಶಾಸ್ತ್ರ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸರಿಯಾಗಿ ಹಂಚಿಕೆ ಮಾಡಿದ್ದೇವು. ಜಿಲ್ಲೆಯ 41 ಕೇಂದ್ರಗಳಿಗೆ ಸರಿಯಾದ ಸಮಯಕ್ಕೆ ಪ್ರಶ್ನೆ ಪತ್ರಿಕೆ ತಲುಪಿದೆ. ಎಲ್ಲವೂ ಸುಸುತ್ರವಾಗಿ ಪರಿಕ್ಷೆ ನಡೆಯುತ್ತಿತ್ತು. 11.45 ರಿಂದ 12 ಗಂಟೆಗೆ ಈ ಪ್ರಶ್ನೆ ಪತ್ರಿಕೆ ಲೀಕ್ ಆದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ ಎಂದರು.

ಬಳಿಕ ಸ್ಥಳಕ್ಕೆ ಭೇಟಿ ನೀಡಿ ನಾವು ಪರಿಶೀಲನೆ ನಡೆಸಿದ್ದೇವೆ. ಇಂಡಿಯ ಶಾಂತೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಲೀಕ್ ಆದ ಕುರಿತು ಮಾಹಿತಿ ಬಂದಿದೆ. ಇದು ಪ್ರಶ್ನೆ ಪತ್ರಿಕೆ ಲಿಕೇಜ್ ಅಲ್ಲ. ಮುರುಗೇಂದ್ರ ಹಿರೇಮಠ ಎಂಬ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿದ್ದ ಇನ್ನೊಬ್ಬ ವಿದ್ಯಾರ್ಥಿ ಹೊರಗಿನಿಂದ ಬಂದ ಬಾಗಪ್ಪ ಸಗರ ಎಂಬಾತ ಪ್ರಶ್ನೆ ಪತ್ರಿಕೆ ತೋರಿಸಲು ಕೇಳಿದ್ದಾನೆ.ಆಗ ಆತ ಕಿಟಕಿಯ ಮೂಲಕ ಪ್ರಶ್ನೆ ಪತ್ರಿಕೆ ತೋರಿಸಿದ್ದು, ಅದನ್ನು ಮುಬೈಲ್ ನಲ್ಲಿ ಪೊಟೋ ಕ್ಲಿಕ್ಕಿಸಿದ್ದಾನೆ ಎಂದು ಸ್ಪಷ್ಟನೆ ನೀಡಿದರು.

ಈಗಾಗಲೇ ಅದೇ ಶಾಲೆಯಲ್ಲಿ 7 ಜನರಿಗೆ ಡಿಬಾರ್ ಮಾಡಿದ್ದೇವೆ. ಕ್ಲಾಸ್ ಸೂಪರ್ ವೈಸರ್ ಶ್ರೀಮತಿ ಎಮ್.ಡಿ ನಾರಾಯಾಣಕರ್ ಎಂಬುವವರನ್ನ ಅಮಾನತು ಮಾಡಲು ಕೂಡಾ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಅವರು ಹೇಳಿದರು.

error: Content is protected !! Not allowed copy content from janadhvani.com