janadhvani

Kannada Online News Paper

ಯುಎಇಯಲ್ಲಿ ಮತ್ತೆ ಮೂರು ಮಂದಿಗೆ ಕೊರೋನ ಸೋಂಕು ಪತ್ತೆ

ದುಬೈ: ಯುಎಇಯಲ್ಲಿ ಮತ್ತೆ ಮೂರು ಮಂದಿಗೆ ಕೊರೊನ ಇರುವುದಾಗಿ ದೃಢೀಕರಿಸಲಾಗಿದೆ. ಈ ಹಿಂದೆ, ಕೊರೋನವೈರಸ್ ಇರುವುದಾಗಿ ನಿರ್ಣಯಿಸಲಾದ ಕುಟುಂಬದ ಮೂವರು ಸದಸ್ಯರಲ್ಲಿ ರೋಗ ಇರುವುದಾಗಿ ಪತ್ತೆ ಹಚ್ಚಲಾಯಿತು. ಪಶ್ಚಿಮ ಏಷ್ಯಾದಲ್ಲಿ ಇದೇ ಮೊದಲ ಬಾರಿಗೆ ಕೊರೋನಾ ವರದಿಯಾಗಿದೆ. ಏತನ್ಮಧ್ಯೆ, ಚೀನಾದಲ್ಲಿ ಕೊರೋನಾ ರೋಗದಿಂದಾಗಿ ಮೃತಪಟ್ಟವರ ಸಂಖ್ಯೆ170ಕ್ಕೆ ಏರಿದ್ದು, ಸೋಂಕಿತರ ಸಂಖ್ಯೆ ಆರು ಸಾವಿರ ದಾಟಿದೆ.

ಚೀನಾದ ಕೊರೋನಾ ಬಾಧಿತ ವುಹಾನ್ ನಗರದಿಂದ ಯುಎಇಗೆ ಬಂದ ನಾಲ್ವರ ಕುಟುಂಬದಲ್ಲಿ ಕೊರೋನಾ ಖಚಿತಪಡಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಯುಎಇ ಹೇಳಿದೆ. ಪ್ರಸ್ತುತ ದೇಶದಲ್ಲಿ ಈ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಕಳೆದ ವಾರದಿಂದ ಯುಎಇ ವಿಮಾನ ನಿಲ್ದಾಣಗಳಲ್ಲಿ ಚೀನಾದಿಂದ ಬರುವ ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿವೆ. ಏತನ್ಮಧ್ಯೆ, ಚೀನಾದಲ್ಲಿ ಕೊರೋನವೈರಸ್ನಿಂದ ಸಾವಿನ ಸಂಖ್ಯೆ 170ಕ್ಕೆ ಏರಿದ್ದು, ಸತ್ತವರಲ್ಲಿ ಹೆಚ್ಚಿನವರು ವೈರಸ್‌ ಪತ್ತೆಯಾದ ವುಹಾನ್‌ನ ಮೂಲದವರಾಗಿದ್ದಾರೆ. 1459 ಹೊಸ ಪ್ರಕರಣಗಳು ವರದಿಯಾಗಿವೆ.

ಇದರೊಂದಿಗೆ, ಕೊರೋನಾ ಬಾಧಿತರ ಸಂಖ್ಯೆಯು 5974 ಕ್ಕೆ ಏರಿದೆ. ತಾಯ್ಲೆಂಡ್ ಸಹಿತ ಇತರ ದೇಶಗಳಲ್ಲೂ ಕೊರೋನಾ ಪತ್ತೆಹಚ್ಚಲಾಗಿದೆ. ವಿವಿಧ ದೇಶಗಳಲ್ಲಿ 47 ಮಂದಿಗೆ ವೈರಸ್‌ ತಗುಲಿದ ಬಗ್ಗೆ ದೃಢಪಡಿಸಲಾಗಿದೆ. ಚೀನಾ, ಅಮೆರಿಕ, ಆಸ್ಟ್ರೇಲಿಯಾ ಮುಂತಾದ ದೇಶಗಳ ಶಾಸ್ತ್ರಜ್ಞರು ಕೊರೋನಾ ಪಸರಿಸುವುದನ್ನು ತಡೆಗಟ್ಟಲು ಅವಶ್ಯವಾಗುವ ವಾಕ್ಸಿನ್ ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ.

error: Content is protected !! Not allowed copy content from janadhvani.com