janadhvani

Kannada Online News Paper

ಪುತ್ತೂರು: ದರ್ಗಾ ಶರೀಫ್ ಮತ್ತು ಜುಮಾ ಮಸ್ಜಿದ್ ಬೈತಡ್ಕ ಕಾಣಿಯೂರು ಅಸ್ವಲಾತುಲ್ ಖಫೀಲು ಬಿಶ್ಯಫಾಅ ಇದರ 31 ನೇ ವಾರ್ಷಿಕ ಪ್ರಯುಕ್ತ ನಡೆಸಲ್ಪಡುವ 4 ದಿವಸಗಳ ಮತ ಪ್ರಭಾಷಣದ ಸಮಾರೋಪ ಸಮಾರಂಭವು ಇಂದು 30/ 1/2020 ನಡೆಯಲಿದೆ.

ಜನವರಿ 27ರಂದು ಜಮಾಅತ್ ಗೌರವಾಧ್ಯಕ್ಷರಾದ ಸಯ್ಯಿದ್ ಕೆಎಸ್ ಆಟಕ್ಕೋಯ ತಂಙಳ್ ಕುಂಬೋಲ್ ರವರ ನೇತೃತ್ವದಲ್ಲಿ ಆರಂಭಗೂಂಡ 4 ದಿವಸಗಳ ಮತ ಪ್ರಭಾಷಣದ ಸಮಾರೋಪ ಕಾರ್ಯಕ್ರಮಕ್ಕೆ ಸಯ್ಯಿದ್ ಮುಖ್ತಾರ್ ತಂಙ್ಙಳ್ ಕುಂಬೋಳ್ ನೇತೃತ್ವ ನೀಡಲಿದ್ದಾರೆ.

ಮುಖ್ಯಪ್ರಭಾಷಣ ಲತೀಫ್ ಸಖಾಫಿ ಕಾಂತಪುರಂ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸದಾತ್ ಸಯ್ಯಿದ್ ಕೂರತ್ ತಂಙಳ್ ದುಆ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದ ಕೂನೆಯಲ್ಲಿ ತಬರ್ರುಖ್ ವಿತರಣೆ ನಡೆಯಲಿದೆ.

✍ಅನ್ಸಾರ್ ಸಅದಿ ಬೆಳಂದೂರು

error: Content is protected !!
%d bloggers like this: