janadhvani

Kannada Online News Paper

ಉಧ್ಯಾನ ನಗರಿಯಲ್ಲಿಂದು ಎಸ್.ಜೆ.ಎಂ 30 ನೇ ವಾರ್ಷಿಕಕ್ಕೆ ಅದ್ಧೂರಿ ಚಾಲನೆ

ಬೆಂಗಳೂರು,ಜ.29: ಎಸ್ ಜೆ ಎಂನ 30 ನೇ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭವು ಶಿವಾಜಿ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮಸೀದಿ ವಠಾರದಲ್ಲಿ ಬಹಳ ಅದ್ದೂರಿಯಾಗಿ ಜರುಗಿತು.

ಬೆಳಿಗ್ಗೆ 8.30ಕ್ಕೆ ಆರಂಭಗೊಂಡ ಕಾರ್ಯಕ್ರಮವನ್ನು ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡರು ಉದ್ಘಾಟಿಸಿದರು.

ಸಯ್ಯಿದ್ ಇಬ್ರಾಹೀಮ್ ಖಲೀಲ್ ಬುಖಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷರಾದ ಶೌಕತ್ ನಈಮಿ ಬುಖಾರಿಯವರು ಸ್ವಾಗತ ಭಾಷಣ ಮಾಡಿದರು. ಎಸ್ ಜೆ ಎಂ ಕಾರ್ಯದರ್ಶಿಗಳಾದ ಅಬ್ದುಲ್ ಅಝೀಝ್ ಫೈಝಿಯವರು ವಿಷಯ ಮಂಡಿಸಿದರು. ಭಾರತದ ವಿವಿಧ ರಾಜ್ಯಗಳಿಂದ ಭಾಗವಹಿಸಿದ 500ರಷ್ಟು ಪ್ರತಿನಿಧಿಗಳು ಪ್ರಸ್ತುತ ಸಮಾವೇಶದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ, ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಮಾತನಾಡುತ್ತಾ, ಭಾರತೀಯರ ಒಗ್ಗಟ್ಟಿಗಾಗಿ ಕರೆ ನೀಡಿದರು. ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದ ಶಿವರುದ್ರ ಸ್ವಾಮೀಜಿಗಳು “ಮನುಷ್ಯರೆಲ್ಲರೂ ಏಕ ದೇವನ ಸೃಷ್ಟಿಗಳು. ಮನುಷ್ಯರೆಲ್ಲರೂ ಸಹಬಾಳ್ವೆಯಿಂದ ಸಮಾನರಾಗಿ ಬದುಕಬೇಕು” ಎಂದು ಹಾರೈಸಿದರು.

ಕಾರ್ರ್ಯಕ್ರಮದಲ್ಲಿ, ಡಾ. ಅಬ್ದುಲ್ ಹಕೀಮ್ ಅಝ್ಹರಿ, ಎಸ್ ಎಸ್ ಎ ಖಾದರ್ ಹಾಜಿ, ಫಾರೂಕ್ ನಈಮಿ ಅಲ್ ಬುಖಾರಿ, ಫ್ರೀಡಂ ಗಝೆಟ್ ಮುಖ್ಯ ಸಂಪಾದಕರಾದ ಮುಹಮ್ಮದ್ ಝೀಶನ್ ಮುಂತಾದ ಗಣ್ಯ ವ್ಯಕ್ತಿಗಳು ಭಾಗವಹಿಸಿದರು.

error: Content is protected !! Not allowed copy content from janadhvani.com